For Quick Alerts
  ALLOW NOTIFICATIONS  
  For Daily Alerts

  ಕಡೆಗೂ 'ಪಬ್ಲಿಕ್ ಟಿವಿ'ಯಲ್ಲಿ ಪ್ರತ್ಯಕ್ಷರಾದ ಯಶ್.!

  By ಒನ್ಇಂಡಿಯಾ ಸಿಬ್ಬಂದಿ
  |

  ಕನ್ನಡ ಸುದ್ದಿ ವಾಹಿನಿಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಮಧ್ಯೆ ಕಳೆದ ಕೆಲ ದಿನಗಳ ಹಿಂದೆ ಏಟು-ತಿರುಗೇಟು-ಎದಿರೇಟು ನಡೆದದ್ದು ನಿಮಗೆ ನೆನಪಿರಲೇಬೇಕು.

  ''ರೈತರ ಸಮಸ್ಯೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಪ್ರೈಮ್ ಟೈಮ್ ನಲ್ಲಿ ಅವಕಾಶ ಕೊಟ್ಟರೆ ನಾನು ಬರಲು ಸಿದ್ಧ'' ಅಂತ ಕನ್ನಡ ಸುದ್ದಿ ವಾಹಿನಿಗಳಿಗೆ ಯಶ್ ಹಾಕಿದ ಬಹಿರಂಗ ಸವಾಲನ್ನ 'ಪಬ್ಲಿಕ್ ಟಿವಿ' ಮೊದಲು ಸ್ವೀಕರಿಸಿ, ಯಶ್ ರವರಿಗೆ ಬಹಿರಂಗ ಆಹ್ವಾನ ನೀಡಿತ್ತು.

  ಅಲ್ಲಿಂದ 'ರೈತರ ಸಮಸ್ಯೆ' ಕುರಿತು ಚರ್ಚೆ ನಡೆಯುವ ಬದಲು ಕನ್ನಡ ಸುದ್ದಿ ವಾಹಿನಿಗಳಲ್ಲಿ 'ಎಲ್ಲಿದ್ದೀರಾ ಯಶ್' ಎಂಬ ಪ್ರಶ್ನೆಯೇ ರಾರಾಜಿಸುತ್ತಿತ್ತು. ವಾದ-ವಿವಾದ ನಡೆದರೂ ಅಂದು 'ಪಬ್ಲಿಕ್ ಟಿವಿ' ಸ್ಟುಡಿಯೋದಲ್ಲಿ ಪ್ರತ್ಯಕ್ಷವಾಗದ ಯಶ್ ಇಂದು ಅದೇ 'ಪಬ್ಲಿಕ್ ಟಿವಿ'ಯಲ್ಲಿ ಎಚ್.ಆರ್.ರಂಗನಾಥ್ ಜೊತೆ ಪ್ರತ್ಯಕ್ಷವಾಗಿದ್ದಾರೆ.

  ಕಡೆಗೂ ಎಚ್.ಆರ್.ರಂಗನಾಥ್ ಜೊತೆ ಯಶ್ ಪ್ರತ್ಯಕ್ಷ

  ಕಡೆಗೂ ಎಚ್.ಆರ್.ರಂಗನಾಥ್ ಜೊತೆ ಯಶ್ ಪ್ರತ್ಯಕ್ಷ

  ಎಚ್.ಆರ್.ರಂಗನಾಥ್ ಜೊತೆ ಕೂತು ರೈತರ ಸಮಸ್ಯೆ ಕುರಿತು ಯಶ್ ಚರ್ಚೆ ನಡೆಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೂ, ಎಚ್.ಆರ್.ರಂಗನಾಥ್ ರವರನ್ನ ಯಶ್ ಮೀಟ್ ಮಾಡಿದ್ದಾರೆ. [ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್]

  ಭೇಟಿ ಯಾಕೆ?

  ಭೇಟಿ ಯಾಕೆ?

  ನಟಿ ರಾಧಿಕಾ ಪಂಡಿತ್ ಜೊತೆಗಿನ ತಮ್ಮ ವಿವಾಹ ಮಹೋತ್ಸವಕ್ಕೆ ಹಾಜರಾಗಲು 'ಪಬ್ಲಿಕ್ ಟಿವಿ' ಮುಖ್ಯಸ್ಥ ಎಚ್.ಆರ್.ರಂಗನಾಥ್ ಗೆ ಯಶ್ ಆಹ್ವಾನ ನೀಡಿದ್ದಾರೆ.

  'ಪಬ್ಲಿಕ್ ಟಿವಿ'ಗೆ ತೆರಳಿದ್ದರು.!

  'ಪಬ್ಲಿಕ್ ಟಿವಿ'ಗೆ ತೆರಳಿದ್ದರು.!

  ಯಶವಂತಪುರದಲ್ಲಿರುವ 'ಪಬ್ಲಿಕ್ ಟಿವಿ' ಕಛೇರಿಗೆ ತೆರಳಿ ಎಚ್.ಆರ್.ರಂಗನಾಥ್ ರವರಿಗೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ ಯಶ್. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

  ಯಶ್ 'ಸ್ಟೈಲ್'ನಲ್ಲಿ ಆಮಂತ್ರಣ

  ಯಶ್ 'ಸ್ಟೈಲ್'ನಲ್ಲಿ ಆಮಂತ್ರಣ

  ಎಂದಿನಂತೆ ಸಂಪಿಗೆ ಸಸಿ, 'ಲೈಫ್ ಈಸ್ ಬ್ಯೂಟಿಫುಲ್' ಪುಸ್ತಕ, ಪ್ಯಾಲೇಸ್ ಗ್ರೌಂಡ್ ಗೆ ಗೇಟ್ ಪಾಸ್ ಜೊತೆಗೆ 'ಆಮಂತ್ರಣ ಪತ್ರಿಕೆ' ಕೊಟ್ಟು ಎಚ್.ಆರ್.ರಂಗನಾಥ್ ರವರನ್ನ ಯಶ್ ಆಹ್ವಾನಿಸಿದ್ದಾರೆ. ['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]

  ಅಂದು 'ಪಬ್ಲಿಕ್ ಟಿವಿ' ಕಡೆ ಯಾಕೆ ಮುಖ ಮಾಡ್ಲಿಲ್ಲ?

  ಅಂದು 'ಪಬ್ಲಿಕ್ ಟಿವಿ' ಕಡೆ ಯಾಕೆ ಮುಖ ಮಾಡ್ಲಿಲ್ಲ?

  'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಯಶ್ ಹಾಗೂ ಮಾಧ್ಯಮ ಪ್ರತಿನಿಧಿಗಳ ಮಧ್ಯೆ ವಾಗ್ವಾದ ನಡೆದ ಬಳಿಕ 'ಪಬ್ಲಿಕ್ ಟಿವಿ' ಗೆ ಮೊದಲು ಹೋಗುವುದಾಗಿ ಯಶ್ ಹೇಳಿದ್ದರು. ಆದ್ರೆ, ಅಂದು ಎಚ್.ಆರ್.ರಂಗನಾಥ್ ವೈಯುಕ್ತಿಕ ಪ್ರವಾಸದಲ್ಲಿ ಇದ್ದ ಕಾರಣ 'ಪಬ್ಲಿಕ್ ಟಿವಿ'ಯಲ್ಲಿ ಸಮಯ ನಿಗದಿ ಆಗ್ಲಿಲ್ಲ. ಹೀಗಾಗಿ 'ಈ ಟಿವಿ'ಯಲ್ಲಿ ಯಶ್ ಚರ್ಚೆಗೆ ಕೂತರು. [ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.!]

  ವಿವಾದ ತಣ್ಣಗಾಗಿದೆ.!

  ವಿವಾದ ತಣ್ಣಗಾಗಿದೆ.!

  ರೈತರ ಸಮಸ್ಯೆ ಕುರಿತು 'ಈ ಟಿವಿ'ಯಲ್ಲಿ ಯಶ್ ಚರ್ಚೆ ಮಾಡಿದ ಬಳಿಕ ವಿವಾದಕ್ಕೆ ಈಗ ಫುಲ್ ಸ್ಟಾಪ್ ಬಿದ್ದಿದೆ.

  English summary
  Rocking Star Yash has invited Public TV head HR Ranganath for his marriage with Kannada Actress Radhika Pandit. The wedding is scheduled on December 10th and 11th at Tripura Vasini, Bengaluru Palace Ground.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X