For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಪ್ರಶ್ನೆ: ರಾಧಿಕಾ-ಯಶ್ ಮತ್ತೆ ಒಟ್ಟಿಗೆ ನಟಿಸ್ತಾರಾ?

  By Harshitha
  |
  ಮತ್ತೆ ತೆರೆ ಮೇಲೆ ಬರ್ತಾರಾ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್.... ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ.

  'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ ಈ ಜೋಡಿ ಲೆಕ್ಕವಿಲ್ಲದಷ್ಟು ಮಂದಿಗೆ ಅಚ್ಚುಮೆಚ್ಚು.

  ರೀಲ್ ನಲ್ಲಿ ಜೋಡಿಯಾಗಿದ್ದ ರಾಧಿಕಾ ಪಂಡಿತ್ ಹಾಗೂ ಯಶ್, ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ. ಮದುವೆ ಆದ್ಮೇಲೆ, ಕೊಂಚ ಬ್ರೇಕ್ ತೆಗೆದುಕೊಂಡಿರುವ ರಾಧಿಕಾ ಪಂಡಿತ್ ಆದಷ್ಟು ಬೇಗ ಒಂದು ಸಿನಿಮಾ ಮಾಡಲಿ ಅನ್ನೋದು ಅಭಿಮಾನಿಗಳ ಆಸೆ.

  ಸದ್ಯ 'ಕೆ.ಜಿ.ಎಫ್' ಚಿತ್ರದಲ್ಲಿ ಬಿಜಿಯಾಗಿರುವ ಯಶ್, ರಾಧಿಕಾ ಪಂಡಿತ್ ಕಾಂಬಿನೇಶನ್ ನಲ್ಲಿ ಒಂದು ಚಿತ್ರ ಮಾಡಲಿ ಅನ್ನೋದು ಕೂಡ ಫ್ಯಾನ್ಸ್ ಬಯಕೆ. ಇದನ್ನೇ ಅಭಿಮಾನಿಯೊಬ್ಬರು ಫೇಸ್ ಬುಕ್ ನಲ್ಲಿ ಯಶ್ ಮುಂದೆ ವ್ಯಕ್ತಪಡಿಸಿದ್ದರು. ಆಗ ನಟ ಯಶ್, ''ಒಳ್ಳೆಯ ಸ್ಕ್ರಿಪ್ಟ್ ಬಂದರೆ ಖಂಡಿತ ಒಟ್ಟಿಗೆ ಆಕ್ಟ್ ಮಾಡ್ತೀವಿ'' ಎಂದರು.

  ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!

  ''ನಾವಿಬ್ಬರು ಗಂಡ-ಹೆಂಡತಿ, ಇಬ್ಬರೂ ಒಟ್ಟಿಗೆ ಆಕ್ಟ್ ಮಾಡಬೇಕು ಅಂತ ಮಾಡಲ್ಲ. ಮುಂಚೆನೂ ಅಷ್ಟೇ, ಒಳ್ಳೆಯ ಸ್ಕ್ರಿಪ್ಟ್ ಬಂದಾಗ ಮಾತ್ರ ಒಟ್ಟಿಗೆ ಆಕ್ಟ್ ಮಾಡಿದ್ವಿ. ಮುಂದೆಯೂ ಮಾಡ್ತೀವಿ'' ಅಂತ ಫೇಸ್ ಬುಕ್ ಲೈವ್ ನಲ್ಲಿ ಯಶ್ ಹೇಳಿದ್ದಾರೆ.

  ಅಲ್ಲಿಗೆ, ಯಶ್ ಹಾಗೂ ರಾಧಿಕಾ ಪಂಡಿತ್ ಮುಂದೆ ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾ. ಯಾರಾದರೂ ನಿರ್ದೇಶಕರು ಪ್ಲಾನ್ ಮಾಡಿ, ಒಂದೊಳ್ಳೆ ಸ್ಕ್ರಿಪ್ಟ್ ರೆಡಿ ಮಾಡಬೇಕು ಅಷ್ಟೇ.

  English summary
  Rocking Star Yash is waiting for good script to act with his wife Radhika Pandit

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X