»   » 'ಕೆ.ಜಿ.ಎಫ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್

'ಕೆ.ಜಿ.ಎಫ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲೇಟೆಸ್ಟ್ 'ಬಾಕ್ಸ್ ಆಫೀಸ್ ಸುಲ್ತಾನ್' ಯಶ್. ಸತತ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ಯಶ್, ಸದ್ಯ 'ಮಾಸ್ಟರ್ ಪೀಸ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

'ಮಾಸ್ಟರ್ ಪೀಸ್' ಮುಗಿದ ಬಳಿಕ ಯಶ್ ಮುಂದಿನ ಚಿತ್ರ ಯಾವುದು? ಈ ಪ್ರಶ್ನೆಗೆ ಇದೀಗ ಅಧಿಕೃತ ಉತ್ತರ ಸಿಕ್ಕಿದೆ. 'ಉಗ್ರಂ' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಯಶ್ ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.


Yash Next movie KGF directed by Prashanth Neel

ಅದರಂತೆ, 'ಮಾಸ್ಟರ್ ಪೀಸ್' ಮುಗಿದ ಬಳಿಕ ಯಶ್, ಈ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅಧಿಕೃತ ಟೈಟಲ್ ಇನ್ನೂ ಫಿಕ್ಸ್ ಮಾಡದೇ ಇದ್ದರೂ, 'ಕೆ.ಜಿ.ಎಫ್' ಅಂತ ಹೇಳಲಾಗುತ್ತಿದೆ.


'ಕೆ.ಜಿ.ಎಫ್'...ಟೈಟಲ್ ಹೇಳಿದ ತಕ್ಷಣ ನಿಮಗೆ ನೆನಪಾಗುವುದು ಚಿನ್ನದ ಗಣಿ. ಅದರಂತೆ ಕೆ.ಜಿ.ಎಫ್ ನ ಗತಕಾಲದ ವೈಭವ ಈ ಚಿತ್ರದಲ್ಲಿ ಮರುಕಳಿಸಲಿದೆಯಂತೆ. ಅಂದ್ಹಾಗೆ, ಕೆ.ಜಿ.ಎಫ್ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಯಶ್ ಪಾತ್ರ ಪ್ರಖ್ಯಾತ ವ್ಯಕ್ತಿಯೊಬ್ಬರನ್ನ ಪ್ರತಿನಿಧಿಸಲಿದೆ. [ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ 'ಕೆಜಿಎಫ್']


Yash Next movie KGF directed by Prashanth Neel

70 ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರ ತಯಾರಾಗಲಿದ್ದು, ಅದಕ್ಕೆ ಪೂರ್ವ ತಯಾರಿಯಲ್ಲಿ ಈಗಾಗಲೇ ಚಿತ್ರತಂಡ ತೊಡಗಿದೆ. ನಿಜ ಕಥೆ ಆದ್ದರಿಂದ ನಿರ್ದೇಶಕ ಪ್ರಶಾಂತ್ ನೀಲ್ ಅದಾಗಲೇ ಸಿಕ್ಕಾಪಟ್ಟೆ ರಿಸರ್ಚ್ ಮಾಡುತ್ತಿದ್ದಾರೆ. [ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ]


'ಮಾಸ್ಟರ್ ಪೀಸ್' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವ ವಿಜಯ್ ಕಿರಗಂದೂರ್, ಈ ಚಿತ್ರವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಒಂದ್ಕಡೆ, ಸೂಪರ್ ಹಿಟ್ 'ಉಗ್ರಂ' ಚಿತ್ರದ ನಿರ್ದೇಶಕ, ಇನ್ನೊಂದ್ಕಡೆ 'ಕೆ.ಜಿ.ಎಫ್' ನೈಜ ಘಟನೆ ಆಧಾರಿತ ಚಿತ್ರ. ಇಷ್ಟು ಸಾಕು, ಇನ್ಮುಂದೆ 'ಕೆ.ಜಿ.ಎಫ್' ಹವಾ ಶುರುವಾಗುವುದಕ್ಕೆ. (ಏಜೆನ್ಸೀಸ್)

English summary
Rocking Star Yash's Upcoming movie titled as KGF, is going to be an action drama, which will be set in 1970's. The movie is directed by Prashanth Neel of Ugramm fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada