For Quick Alerts
  ALLOW NOTIFICATIONS  
  For Daily Alerts

  ವಿಡಿಯೊ: ಸಮುದ್ರದ ಮಧ್ಯೆ ಯಶ್-ರಾಧಿಕಾ ಮಗನ ಅದ್ಧೂರಿ ಹುಟ್ಟುಹಬ್ಬ

  |

  ನಟ ಯಶ್-ರಾಧಿಕಾ ಪಂಡಿತ್ ಪುತ್ರ ಯಥರ್ವನ ಮೊದಲ ವರ್ಷದ ಹುಟ್ಟುಹಬ್ಬ ಕೆಲವು ದಿನಗಳ ಹಿಂದಷ್ಟೆ ನಡೆಯಿತು.

  ಯಶ್ ಹಾಗೂ ರಾಧಿಕಾ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಗೋವಾದಲ್ಲಿ ಸಮುದ್ರದ ಮಧ್ಯೆ ಬಹಳಾ ಅದ್ಧೂರಿಯಾಗಿ ಆಚರಿಸಿದ್ದಾರೆ.

  ಮಗನ ಹುಟ್ಟುಹಬ್ಬ ಆಚರಣೆಯ ಸಂತಸದ ಕ್ಷಣಗಳ ವಿಡಿಯೋವನ್ನು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ಹಂಚಿಕೊಂಡಿದ್ದು. ಹುಟ್ಟುಹಬ್ಬ ಅದೆಷ್ಟು ವೈಭವೋಪೇತವಾಗಿತ್ತು ಎಂಬುದನ್ನು ವಿಡಿಯೋ ಸಾರಿ ಹೇಳುತ್ತಿದೆ.

  ಗೋವಾದಲ್ಲಿ ಐಶಾರಾಮಿ ದೋಣಿ (ಯಾಟ್ಚ್‌) ನಲ್ಲಿ ಯಶ್-ರಾಧಿಕಾ ಮಗನ ಹುಟ್ಟುಹಬ್ಬ ಆಚರಿಸಲಾಗಿದೆ. ಯಶ್-ರಾಧಿಕಾ ಇಬ್ಬರ ಪೋಷಕರು ಸಹ ಹುಟ್ಟುಹಬ್ಬ ಸಮಾರಂಭದಲ್ಲಿ ಹಾಜರಿದ್ದರು. ಜೊತೆಗೆ ಕೆಲವು ಗೆಳೆಯರು ಸಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಅಪ್ಪ-ಅಮ್ಮನಿಗೆ ಕೇಕ್ ತಿನ್ನಿಸಿದ ಯಥರ್ವ

  ಅಪ್ಪ-ಅಮ್ಮನಿಗೆ ಕೇಕ್ ತಿನ್ನಿಸಿದ ಯಥರ್ವ

  ಇನ್ನೂ ಒಂದು ವರ್ಷದ ಪುತ್ರ ಯಥರ್ವ ಅಪ್ಪ-ಅಮ್ಮನಿಗೆ ಕೇಕ್ ತಿನ್ನಿಸಿ ಅವನೂ ಖುಷಿ ಪಟ್ಟ ಸಂತಸದ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿವೆ. ವಿಡಿಯೋವನ್ನು ಫೋಕಸ್ ಫೊಟೊಗ್ರಫಿ ಸರ್ವಿಸ್ ಅವರು ಮಾಡಿದ್ದಾರೆ.

  ಮಕ್ಕಳೊಂದಿಗೆ ಸಖತ್ ಎಂಜಾಯ್ ಮಾಡಿರುವ ದಂಪತಿ

  ದಿನಪೂರ್ತಿ ಸಮುದ್ರದ ಮಧ್ಯೆ ಕಳೆದ ಯಶ್ ಕುಟುಂಬ ಮಕ್ಕಳೊಂದಿಗೆ, ಪೋಷಕರೊಂದಿಗೆ, ಗೆಳೆಯರೊಂದಿಗೆ ಮಗನ ಹುಟ್ಟುಹಬ್ಬವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ರಾಧಿಕಾ ಹಂಚಿಕೊಂಡಿರುವ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

  ಭಾವುಕ ಪೋಸ್ಟ್ ಹಂಚಿಕೊಂಡಿರುವ ರಾಧಿಕಾ ಪಂಡಿತ್

  ಭಾವುಕ ಪೋಸ್ಟ್ ಹಂಚಿಕೊಂಡಿರುವ ರಾಧಿಕಾ ಪಂಡಿತ್

  ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್, 'ಕೇಕ್‌ನ ರುಚಿ ನಿನಗೆ ಗೊತ್ತಾಗದೇ ಇರಬಹುದು, ಈ ದಿನದ ವಿಶೇಷತೆಯೂ ನಿನಗೆ ತಿಳಿಯದೇ ಇರಬಹುದು, ಆದರೆ ಪೋಷಕರಾಗಿ ನಮಗೆ ಇದು ನಮ್ಮ ಜೀವನ ಪರ್ಯಂತ ಉಳಿಯುವ ದಿನ' ಎಂದು ಭಾವುಕ ಸಾಲು ಬರೆದಿದ್ದಾರೆ.

  ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada
  ಅಕ್ಟೋಬರ್ 30 ರಂದು ಹುಟ್ಟುಹಬ್ಬ

  ಅಕ್ಟೋಬರ್ 30 ರಂದು ಹುಟ್ಟುಹಬ್ಬ

  ಯಶ್ ಅವರು ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮುದ್ದಿನ ಮಗ ಹಾಗೂ ಕುಟುಂಬಕ್ಕಾಗಿ ಬಿಡುವು ಪಡೆದು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಯಶ್ ಮಗನ ಹುಟ್ಟುಹಬ್ಬ ಅಕ್ಟೋಬರ್ 30 ರಂದು ಆಚರಿಸಲಾಗಿದೆ.

  English summary
  Actor Yash and Radhika Pandit celebrate their son Yatharv's birthday in Goa in a yacht. Birthday video got viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X