»   » ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?

ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಿಗದಿ ಆಗಿದೆ ಅಂತ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ.

ನಾಳೆ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಗೋವಾದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ಮೆಂಟ್ ನಡೆಯಲಿದೆ. [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾದತ್ತ ಯಶ್ ತಂದೆ-ತಾಯಿ ಪ್ರಯಾಣ ಆರಂಭಿಸಿದ್ದಾರೆ. ಗೋವಾಗೆ ಹಾರುವ ಮುನ್ನ ಮಾಧ್ಯಮಗಳ ಜೊತೆ ಯಶ್ ತಾಯಿ ಪುಷ್ಪ ಮಾತನಾಡಿದರು.

ಅವರ ಮಾತುಗಳ ಯಥಾವತ್ ರೂಪ, ಕೆಳಗಿರುವ ಸ್ಲೈಡ್ ಗಳಲ್ಲಿ ಇದೆ. ಓದಿರಿ....

ಈಗ ಮಾತುಕತೆ

''ಎಂಗೇಜ್ ಮೆಂಟ್ ಅಂತ ಇಲ್ಲ. ಜಸ್ಟ್ 'ಮಾತು' ಅಂತ. ನಮ್ಮಲ್ಲಿ 'ಮಾತು' ಅಂತಾರೆ. ಈಗಿನ ಟ್ರೆಂಡ್ ನಲ್ಲಿ ಎಂಗೇಜ್ಮೆಂಟ್ ಅನ್ಬಹುದು. ಆದ್ರೆ, ನಮ್ಮಲ್ಲಿ ಹಿರಿಯರು 'ಮಾತುಕತೆ' ಅಂತಾರೆ. ಹೀಗಾಗಿ, ಅದಕ್ಕೆ ಅಂತ ಹುಡುಗಿ ಮನೆಗೆ ಸಂಪ್ರದಾಯವಾಗಿ ನಾವೇ ಹೋಗ್ತಿದ್ದೇವೆ'' - ಪುಷ್ಪ, ಯಶ್ ತಾಯಿ

[ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!]

ಸಿಂಪಲ್ ನಿಶ್ಚಿತಾರ್ಥ

''ನಮ್ಮ ಫ್ಯಾಮಿಲಿ, ಅವರ ಫ್ಯಾಮಿಲಿ ಮಾತ್ರ. ಯಾರಿಗೂ ಹೇಳಿಲ್ಲ. ಸಿಂಪಲ್ ಆಗಿ ಮಾಡ್ತಿದ್ದೀವಿ. ಹುಡುಗನ ಮನೆಯವರು ಹುಡುಗಿ ಮನೆಗೆ ಹೋಗ್ತಿದ್ದೇವೆ. ಅಲ್ಲಿ ಹೋಗಿ ಅವರು ಏನು ಮಾಡಿರ್ತಾರೋ ನೋಡ್ಬೇಕು'' - ಪುಷ್ಪ, ಯಶ್ ತಾಯಿ [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

ರಾಧಿಕಾ ಫ್ಯಾಮಿಲಿ ಆಗಲೇ ಹೋಗಿದೆ!

''ಅವರ ಫ್ಯಾಮಿಲಿಯವರು ಗೋವಾಗೆ ಮುಂಚೆ ಹೋಗಿದ್ದಾರೆ. ನಾನು, ನನ್ನ ಯಜಮಾನರು, ಮಗಳು, ಅಳಿಯ ಈಗ ಹೋಗ್ತಿದ್ದೇವೆ'' - ಪುಷ್ಪ, ಯಶ್ ತಾಯಿ [ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!]

ಖುಷಿ ಆಗ್ತಿದೆ

''ನಿಶ್ಚಿತಾರ್ಥದ ಕುರಿತು ತುಂಬಾ ಖುಷಿ ಆಗುತ್ತಿದೆ. ಅದನ್ನು ಮತ್ತೆ ನಿಮ್ಮ ಮಾಧ್ಯಮದವರ ಜೊತೆ ಕೂತು ಮಾತನಾಡುತ್ತೇವೆ. ಫಸ್ಟ್ ಏನಾದರೂ ಆಗಲಿ, ಆಮೇಲೆ ಹೇಳ್ತೀವಿ'' [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]

ಮದುವೆ ದಿನಾಂಕ ನಿಗದಿ ಆಗಿಲ್ಲ

''ಮದುವೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅವರ ಮನೆಯವರು, ನಮ್ಮ ಮನೆಯವರು ಇನ್ನೂ ಕೂತು ಮಾತನಾಡಬೇಕು. ಸದ್ಯದಲ್ಲೇ ಡೇಟ್ ಅನೌನ್ಸ್ ಮಾಡ್ತೀವಿ'' - ಪುಷ್ಪ, ಯಶ್ ತಾಯಿ

ಅಭಿಮಾನಿಗಳನ್ನ ಬಿಟ್ಟು ಮಾಡಲ್ಲ

''ಅಭಿಮಾನಿಗಳು ಹಾಗೂ ಮೀಡಿಯಾ ಬಿಟ್ಟು ಏನೂ ಮಾಡಲ್ಲ. ಮದುವೆ ದಿನಾಂಕ ಫಿಕ್ಸ್ ಆದಾಗ ತಕ್ಷಣ ತಿಳಿಸುತ್ತೇವೆ'' - ಪುಷ್ಪ, ಯಶ್ ತಾಯಿ

ಅಭಿಮಾನಿಗಳ ಸಮ್ಮುಖದಲ್ಲಿ ಮದುವೆ

''ನೀವೆಲ್ಲಾ ಯಶ್ ಗೆ ತುಂಬಾ ಸಪೋರ್ಟ್ ಮಾಡಿದ್ದೀರಾ. ಕರ್ನಾಟಕ ಜನತೆ ಯಶ್ ನ ಈ ಮಟ್ಟಕ್ಕೆ ತಂದಿದ್ದಾರೆ. ಯಶ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಅಭಿಮಾನಿಗಳನ್ನು ಬಿಟ್ಟು ಏನೂ ಮಾಡುವುದಿಲ್ಲ. ನಮ್ಮ ಕೈಲಾದಷ್ಟು ತಕ್ಕಮಟ್ಟಿಗೆ ಅಭಿಮಾನಿಗಳನ್ನ ಕರೆದು ಮದುವೆ ಮಾಡುತ್ತೇವೆ'' - ಪುಷ್ಪ, ಯಶ್ ತಾಯಿ

ಕೆ.ಮಂಜು ಹೇಳಿದ್ದೇನು.?

''ಯಶ್ ನಮ್ಮ ಹುಡುಗ. ನಮ್ಮ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಗೋವಾದಲ್ಲಿ ಒಂದು ಸೀನ್ ಇಟ್ಕೊಂಡಿದ್ದೀವಿ. ಅದು ಮದುವೆ ಮಂಟಪ ತರಹ ಸೀನ್. ಅದಕ್ಕೆ ಶೂಟಿಂಗ್, ಹಾಗೇ ಪಿಕ್ ನಿಕ್ ಮಾಡಿಕೊಂಡು ಬರ್ತೀವಿ'' ಅಂತಾರೆ ಕೆ.ಮಂಜು

ನಿಶ್ಚಿತಾರ್ಥ, ಶೂಟಿಂಗ್ ಎರಡೂ ಒಟ್ಟಿಗೆ.?

''ನಿಶ್ಚಿತಾರ್ಥ ಹಾಗೂ ಶೂಟಿಂಗ್, ಎರಡೂ ಒಟ್ಟಿಗೆ ನಡೆಯುತ್ತಾ'' ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ''ಆಗಬಹುದು. ಎರಡು ಒಟ್ಟಿಗೆ'' ಅಂತ ಹೇಳಿದ್ದಾರೆ ಕೆ.ಮಂಜು

ಗೋವಾದತ್ತ ತಾರೆಯರು

ಕ್ರೇಜಿ ಸ್ಟಾರ್ ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ಕೆ.ಮಂಜು, ಮಹೇಶ್ ರಾವ್ ಸೇರಿದಂತೆ ಅನೇಕ ತಾರೆಯರು ಗೋವಾಗೆ ಪ್ರಯಾಣ ಬೆಳೆಸಿದ್ದಾರೆ.

English summary
Kannada Actor Yash's mother Pushpa has reacted to the media in Kempegowda International Airport before travelling to Goa regarding engagement of her son with Kannada Actress Radhika Pandit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada