»   » 'ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!

'ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ಮಧ್ಯೆ ಮದುವೆ ಶಾಸ್ತ್ರ, ಸಂಪ್ರದಾಯಗಳು ಜೋರಾಗಿ ನಡೆಯುತ್ತಿದೆ.

ಇತ್ತೀಚಿಗೆ ಬೆಂಗಳೂರಿನ ಹೊರವಲಯದಲ್ಲಿ 'ಯಶ್-ರಾಧಿಕಾ ಪಂಡಿತ್' ಮದುವೆಯ ವಿಶೇಷವಾಗಿ 'ಮೆಹಂದಿ' ಹಾಗೂ 'ಸಂಗೀತ ರಸಮಂಜರಿ'ಯನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಲರ್ ಫುಲ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ಪಾಲ್ಗೊಂಡು 'ಮೆಹಂದಿ' ಶಾಸ್ತ್ರದ ಮೆರೆಗನ್ನ ಹೆಚ್ಚಿಸಿದ್ದರು.['ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು]

ಮೆಹಂದಿ ಶಾಸ್ತ್ರವನ್ನ ಮುಗಿಸಿ, ಹಾಡು, ಡ್ಯಾನ್ಸ್, ಅಂತ ನಟ-ನಟಿಯರೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ. ಈ ಕಾರ್ಯಕ್ರಮದ ಫೋಟೋಸ್ ಹಾಗೂ ವಿಡಿಯೋಗಳು ಫಿಲ್ಮಿಬೀಟ್ ಗೆ ಲಭ್ಯವಾಗಿದ್ದು, ಇಲ್ಲಿದೆ ನೋಡಿ.

ಕಲರ್ ಫುಲ್ ಮದರಂಗಿ ಹಾಕಿದ್ದ ರಾಧಿಕಾ

ಮೆಹಂದಿ ಶಾಸ್ತ್ರದಲ್ಲಿ ನೂತನ ವಧು ರಾಧಿಕಾ ಪಂಡಿತ್ ತಮ್ಮ ಎರಡು ಕೈಗಳಿಗೆ ಕಲರ್ ಫುಲ್ ಆಗಿ 'ಮದರಂಗಿ' ಹಾಕಿಕೊಂಡಿದ್ದರು.[ಮದುವೆಗೂ ಮುಂಚೆ ರಾಧಿಕಾ ಪಂಡಿತ್ ಕೊನೆ ಪಾರ್ಟಿ ! ]

ಕಲರ್ ಫುಲ್ ಸ್ಟೇಜ್

ಮೆಹಂದಿ ನಂತರ ಸಂಗೀತ ಕಾರ್ಯಕ್ರಮಕ್ಕಾಗಿ ಕಲರ್ ಫುಲ್ ಆದ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. ಅತಿಥಿಗಳಿಗೆ ದರ್ಬಾರ್ ರೀತಿಯ ಆಸನಗಳು ವ್ಯವಸ್ಥೆ ಮಾಡಲಾಗಿತ್ತು.['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ರಾಧಿಕಾ-ಯಶ್ ಡ್ಯಾನ್ಸ್

ರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಯಶ್ ಹಾಗೂ ರಾಧಿಕಾ, ತಮ್ಮದೇ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ರಾಧಿಕಾ ಪಂಡಿತ್, 'ಬಹುದ್ದೂರ್' ಚಿತ್ರದ 'ಆರಾಮಗಿರಿ ಸುಬ್ಬಲಕ್ಷ್ಮಿ' ಹಾಡು ಸೇರಿದಂತೆ ಹಲವು ಹಾಡುಗಳಿಗೆ ಸ್ಟೆಪ್ ಹಾಕಿದ್ರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಹಾಡು ಸೇರಿದಂತೆ ಬೇರೆ ಹಾಡುಗಳಿಗೂ ಯಶ್ ಕುಣಿದಿದ್ದಾರೆ. ಇನ್ನೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಪೂರ್ತಿ ಹಾಡಿಗೆ ಇಬ್ಬರು ಹೆಜ್ಜೆ ಹಾಕಿರುವುದು ಮತ್ತೊಂದು ಹೈಲೆಟ್.[ಇಲ್ಲಿದೆ ನೋಡಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಡ್ಯಾನ್ಸ್]

ಅತಿಥಿಗಳ ಡ್ಯಾನ್ಸ್ ಕಾಂಪಿಟೇಷನ್

ಹುಡುಗ ಹಾಗೂ ಹುಡುಗಿ ಕಡೆಯವರಿಂದ ಡ್ಯಾನ್ಸ್ ಕಾಂಪಿಟೇಶನ್ ಏರ್ಪಡಿಸಲಾಗಿತ್ತು. ರಾಧಿಕಾ ಪಂಡಿತ್ ಪರವಾಗಿ ಅಧ್ವಿತಿ ಹಾಗೂ ಆಶ್ವಿತಿ ಶೆಟ್ಟಿ ಹೆಜ್ಜೆ ಹಾಕಿದ್ರೆ, ಯಶ್ ಪರವಾಗಿ, ಚಿಕ್ಕಣ್ಣ, ಕೆ ಮಂಜು, ಡಾ ಸೂರಿ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದಾರೆ.

ಶಂಕರ್ ನಾಗ್ ಅವರನ್ನ ಇಮಿಟೇಟ್ ಮಾಡಿದ ಯಶ್

ಎಲ್ಲರ ಒತ್ತಾಯದ ಮೆರೆಗೆ 'ಕರಾಟೆಕಿಂಗ್ ಶಂಕರ್ ನಾಗ್' ಅವರನ್ನ ಸ್ಟೇಜ್ ಮೇಲೆ ರಾಕಿಂಗ್ ಯಶ್ ಅನುಕರಣೆ ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ, 'ಗೀತಾ' ಚಿತ್ರದ 'ಸಂತೋಷಕ್ಕೆ' ಹಾಡಿಗೆ ಯಶ್ ಜಬರ್ ದಸ್ತ್ ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದ್ದಾರೆ.

ಸ್ಪೆಷಲ್ ಡಿನ್ನರ್

ರಾತ್ರಿಯ ಡಿನ್ನರ್ ತುಂಬಾ ವೆರೈಟಿಯಾಗಿತ್ತು. 'ಬನ್ನೂರ್ ಮಟನ್ ಬಿರಿಯಾನಿ', 'ಮಸಲಾ ವಡಾ', 'ತಟ್ಟೆ ಇಡ್ಲಿ', 'ಫಿಶ್ ಫಿಂಗರ್ಸ್', 'ಚೀಸ್ ಬಾಲ್ಸ್', ಸೇರಿದಂತೆ ಹಲವು ಸ್ಪೆಷಲ್ ಐಟಂಗಳನ್ನ ತಯಾರಿಸಲಾಗಿತ್ತು. ವಿಶೇಷ ಅಂದ್ರೆ, ಈ ಎಲ್ಲವಕ್ಕೂ 'ಯಶ್-ರಾಧಿಕಾ' ಅಭಿನಯದ ಚಿತ್ರಗಳ ಹೆಸರು ಹಾಗೂ ಹಾಡುಗಳ ಹೆಸರನ್ನ ಇಡಲಾಗಿತ್ತು.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.? ]

ಯಾರ್ಯಾರು ಬಂದಿದ್ದರು?

ಅರುಣ್ ಸಾಗರ್ ಕಾರ್ಯಕ್ರಮವನ್ನ ನಿರೂಪಣೆ ಮಾಡಿದ್ದು, ನಟಿ ಪ್ರಿಯಾಂಕಾ ಉಪೇಂದ್ರ, ಸುಧಾರಾಣಿ, ರಮೇಶ್ ಅರವಿಂದ್, ರವಿಶಂಕರ್, ಅಚ್ಯುತ್ ಕುಮಾರ್, ತಿಲಕ್ ಶೇಖರ್, ನೆನಪಿರಲಿ ಪ್ರೇಮ್ ದಂಪತಿ, ಪ್ರಜ್ವಲ್ ದೇವರಾಜ್ ದಂಪತಿ, ವಿಜಯ ರಾಘವೇಂದ್ರ ದಂಪತಿ, ಪನ್ನಗಾಭರಣ, ರವಿಚಂದ್ರನ್ ಪುತ್ರ ಮನೋರಂಜನ್ ಸೇರಿದಂತೆ ಸಾಕಷ್ಟು ಸೆಲೆಬ್ರೇಟಿಗಳು ಭಾಗಿಯಾಗಿದ್ದರು.

English summary
Rocking Star Yash and Radhika Pandit wedding is scheduled on December 9th, 10th and 11th at Tripura Vasini, Bengaluru Palace Ground. Check out the pics of Radhika Pandit's Mehendi Ceremony.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada