For Quick Alerts
  ALLOW NOTIFICATIONS  
  For Daily Alerts

  ಐರಾ ಯಶ್ ಗೆ ಹುಟ್ಟುಹಬ್ಬದ ಸಂಭ್ರಮ; ಅಪರೂಪದ ಫೋಟೋ ಶೇರ್ ಮಾಡಿ ವಿಶ್ ಮಾಡಿದ ರಾಧಿಕಾ

  |

  ಡಿಸೆಂಬರ್ 2, 2018..ಭಾನುವಾರ ರಾಧಿಕಾ ಪಂಡಿತ್ ಮತ್ತು ಯಶ್ ಬಾಳಲ್ಲಿ ಮರೆಯಲಾಗದ ದಿನ. ರಾಧಿಕಾ ಪಂಡಿತ್ ಮಡಿಲೊಳಗೆ ಪುಟ್ಟ ಕಂದಮ್ಮ ನಲಿದಾಡಿದ ದಿನ. ಆ ಕ್ಷಣಕ್ಕೆ ಈಗ ಎರಡು ವರ್ಷದ ಸಂಭ್ರಮ.

  2 ವರ್ಷಗಳು ಕಳೆದೆ ಹೋಯ್ತು

  ಯಶ್ ಮತ್ತು ರಾಧಿಕಾ ಪಂಡಿತ್ ಮೊದಲ ಮಗು ಐರಾಗೆ ಇಂದಿಗೆ ಸರಿಯಾಗಿ ಎರಡು ವರ್ಷಗಳು ತುಂಬಿದೆ. ಹೌದು, ಯಶಿಕಾ ದಂಪತಿಯ ಮುದ್ದು ಮಗಳು ಐರಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ವರ್ಷ ಅಂದರೆ ಐರಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಐರಾ ಹುಟ್ಟುಹಬ್ಬಕ್ಕೆ ಇಡೀ ಚಿತ್ರರಂಗ ಭಾಗಿಯಾಗಿತ್ತು. ಈ ಬಾರಿ ಸರಳವಾಗಿ, ಕುಟುಂಬದವರು ಮಾತ್ರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

  ವಿಡಿಯೊ: ಸಮುದ್ರದ ಮಧ್ಯೆ ಯಶ್-ರಾಧಿಕಾ ಮಗನ ಅದ್ಧೂರಿ ಹುಟ್ಟುಹಬ್ಬ

  ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ

  ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ

  ಈ ಬಾರಿ ಅದ್ದೂರಿ ಹುಟ್ಟುಹಬ್ಬಕ್ಕೆ ಕೊರೊನಾ ಬ್ರೇಕ್ ಹಾಕಿದೆ. ಅದರೆ ಯಶ್ ಮತ್ತು ರಾಧಿಕಾ ಕುಟುಂಬದವರ ಜೊತೆ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ. ಮದ್ದು ಮಗಳಿಗೆ ಎರಡು ವರ್ಷದ ತುಂಬಿದ ಸಂತಸದಲ್ಲಿ ರಾಧಿಕಾ ಪಂಡಿತ್ ಪ್ರೀತಿಯ ವಿಶ್ ಮಾಡಿದ್ದಾರೆ. ಮಗಳ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

  ರಾಧಿಕಾ ವಿಶ್ ಮಾಡಿದ್ದು ಹೀಗೆ

  ರಾಧಿಕಾ ವಿಶ್ ಮಾಡಿದ್ದು ಹೀಗೆ

  'ಜೀವನದಲ್ಲಿ ಸಂತೋಷವನ್ನು ಹೊರತುಪಡಿಸಿ ಏನನ್ನು ನೀಡಿಲ್ಲ. ಜನ್ಮ ದಿನದ ಶುಭಾಷಯಗಳು ನಮ್ಮ ಲಿಲ್ ಏಂಜೆಲ್' ಎಂದಿದ್ದಾರೆ. ಜೊತೆಗೆ 'ಬೇಗ ಬೆಳೆಯಬೇಡ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಅಭಿಮಾನಿಗಳ ವಿಶ್

  ಅಭಿಮಾನಿಗಳ ವಿಶ್

  ರಾಧಿಕಾ ಪಂಡಿತ್ ಮುದ್ದು ಮಗಳಿಗೆ ವಿಶ್ ಮಾಡಿ ಪೋಸ್ಟ್ ಮಾಡಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿವೆ. ಜೊತೆಗೆ ಐರಾ ಯಶ್ ಗೆ ಹುಟ್ಟುಹಬ್ಬದ ಸುರಿಮಳೆಯೇ ಹರಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಐರಾ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಐರಾ ಕ್ಯೂಟ್ ವಿಡಿಯೋ ಮತ್ತು ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.

  ಮಗನ ಹುಟ್ಟುಹಬ್ಬ ಆಚರಣೆ ಮಾಡಿದ್ದ ಯಶ್ ದಂಪತಿ

  ಮಗನ ಹುಟ್ಟುಹಬ್ಬ ಆಚರಣೆ ಮಾಡಿದ್ದ ಯಶ್ ದಂಪತಿ

  ಇತ್ತೀಚಿಗಷ್ಟೆ ಅಂದರೆ ಅಕ್ಟೋಬರ್ 30ರಂದು ಯಶ್ ಮತ್ತು ರಾಧಿಕಾ ದಂಪತಿ ಎರಡನೇ ಮಗನ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಣೆ ಮಾಡಿದ್ದರು. ಸಮುದ್ರದ ಮಧ್ಯೆ ಯಥರ್ವ ಯಶ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದರು. ಈ ಸಮಯದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದವರು ಜೊತೆಯಲ್ಲಿದ್ದರು. ಮಗನ ಹುಟ್ಟುಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Kannada Actor Yash-Radhika Pandit's daughter Ayra celebrating her Second birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X