»   » ಈ ವರ್ಷ ಅಖಾಡಕ್ಕೆ ಬರಲೇ ಇಲ್ಲ ಈ ಸ್ಟಾರ್ ನಟ-ನಟಿಯರು

ಈ ವರ್ಷ ಅಖಾಡಕ್ಕೆ ಬರಲೇ ಇಲ್ಲ ಈ ಸ್ಟಾರ್ ನಟ-ನಟಿಯರು

Posted By:
Subscribe to Filmibeat Kannada

ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಅಬ್ಬರ ಜೋರಾಗಿತ್ತು. ಸ್ಟಾರ್ ನಟರ ಚಿತ್ರಗಳು ಭರ್ಜರಿ ಸೌಂಡ್ ಮಾಡಿದ್ವು. ಹೊಸಬರ ಚಿತ್ರಗಳು ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಸಕ್ಸಸ್ ಆಯ್ತು. ವರ್ಷ ಪೂರ್ತಿ ಮನರಂಜನೆ ಇತ್ತು.

ಈ ಮಧ್ಯೆ ವಿವಾದ, ಮದುವೆ, ನಿಶ್ಚಿತಾರ್ಥ ಅಂತ ಕೆಲವು ತಾರೆಯರು ತಮ್ಮ ಖಾಸಗಿ ಜೀವನದ ಅದ್ಭುತ ಕ್ಷಣಗಳನ್ನ ಸಂಭ್ರಮಿಸಿದರು. ಆದ್ರೆ, ಕೆಲವೊಂದು ಅಭಿಮಾನಿಗಳಿಗೆ ಮಾತ್ರ ಭಾರಿ ನಿರಾಸೆಯಾಯಿತು.

ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

ಯಾಕಂದ್ರೆ, ಈ ಅಭಿಮಾನಿಗಳ ನೆಚ್ಚಿನ ನಟ-ನಟಿಯರು ಈ ವರ್ಷ ಫಿಲ್ಡ್ ಗೆ ಇಳಿಯಲೇ ಇಲ್ಲ. ಅಷ್ಟಕ್ಕೂ, ಈ ನಟ-ನಟಿಯರ ಚಿತ್ರಗಳು ಯಾಕೆ ಬಿಡುಗಡೆಯಾಗಿಲ್ಲ. ಯಾವ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು ಎಂಬ ಮಾಹಿತಿ ಇಲ್ಲಿದೆ. ಓದಿ....

ಯಶ್ ಬರಲೇ ಇಲ್ಲ

'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರದಲ್ಲಿ ಮಿಂಚಿದ ನಂತರ ಯಶ್ 'ಕೆ.ಜಿ.ಎಫ್' ಚಿತ್ರದಲ್ಲಿ ಬ್ಯುಸಿಯಾದರು. ಅಂದುಕೊಂಡಂತೆ ಆಗಿದ್ದರೇ, ಈ ವರ್ಷ 'ಕೆಜಿಎಫ್' ತೆರೆಕಾಣಬೇಕಿತ್ತು. ಆದ್ರೆ, ಯಶ್ ಸಿನಿಮಾ ಬರಲೇ ಇಲ್ಲ. ಇದು ಸಹಜವಾಗಿ ರಾಕಿಂಗ್ ಸ್ಟಾರ್ ಫ್ಯಾನ್ಸ ಗೆ ದೊಡ್ಡ ನಿರಾಸೆಯಾಗಿದೆ.

ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥದ ಖುಷಿ

'ಕಿರಿಕ್ ಪಾರ್ಟಿ' ಸಕ್ಸಸ್ ನಲ್ಲಿದ್ದ ರಕ್ಷಿತ್ ಶೆಟ್ಟಿ ಈ ವರ್ಷ ನಿಶ್ಚಿತಾರ್ಥದ ಸಂಭ್ರಮದಲ್ಲಿ ತೇಲಾಡಿದರು. ನಟಿ ರಶ್ಮಿಕಾ ಮಂದಣ್ಣ ಅವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡರು. ಬಳಿಕ 'ಅವನೇ ಶ್ರೀಮನ್ನಾರಾಯಣ' ಚಿತ್ರ ಸಟ್ಟೇರಿತಾದರೂ, ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ, ಸಿಂಪಲ್ ಸ್ಟಾರ್ ಅಭಿಮಾನಿಗಳು ಇದು ನಿರಾಸೆ ವರ್ಷವಾಯಿತು.

ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಜೊತೆ ಸಪ್ತಪದಿ ತುಳಿದ ನಂತರ ನಟಿ ರಾಧಿಕಾ ಪಂಡಿತ್ ಯಾವ ಚಿತ್ರದಲ್ಲೂ ಅಭಿನಯಿಸಿಲ್ಲ. 'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರವೇ ಕೊನೆ. ಈ ವರ್ಷ ರಾಧಿಕಾ ಪಂಡಿತ್ ತೆರೆಮೇಲೆ ಬರ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದವರಿಗೆ ಕೊನೆಗೂ ನಿರಾಸೆ ಮಾತ್ರ ಉತ್ತರವಾಯಿತು.

ಈ ವರ್ಷದಲ್ಲಿ ನಡೆದ 23 ವಿವಾದಗಳನ್ನ ಯಾರೂ ಮರೆಯಲ್ಲ

ಪ್ರಿಯಾಂಕಾ ಉಪೇಂದ್ರ

ಕಳೆದ ವರ್ಷ 'ಮಮ್ಮಿ ಸೇವ್ ಮೀ' ಚಿತ್ರದ ಮೂಲಕ ಪ್ರೇಕ್ಷಕರನ್ನ ಭಯ ಪಡಿಸಿದ್ದು ಪ್ರಿಯಾಂಕಾ ಉಪೇಂದ್ರ ಅವರ ಚಿತ್ರ ಈ ವರ್ಷ ಬಂದಿಲ್ಲ. 'ಸೆಕೆಂಡ್ ಹಾಫ್' ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದ್ರೆ, ಅದು ಈಡೇರಲಿಲ್ಲ.

ಪಾರೂಲ್ ಯಾದವ್

'ಜೆಸ್ಸಿ' ಚಿತ್ರದ ನಂತರ ನಟಿ ಪಾರೂಲ್ ಯಾದವ್ ಅಭಿನಯದ ಸಿನಿಮಾ ತೆರೆಕಂಡಿಲ್ಲ. ಸದ್ಯ, 'ಬಟರ್ ಫ್ಲೈ' ಚಿತ್ರದಲ್ಲಿ ನಟಿಸಿರುವ ಪಾರೂಲ್ ಮುಂದಿನ ವರ್ಷ ಬಿಗ್ ಸ್ಕ್ರೀನ್ ಮೇಲೆ ಬರ್ತಾರೆ.

ವಿನಯ್ ರಾಜ್ ಕುಮಾರ್

'ರನ್ ಆಂಟನಿ' ಚಿತ್ರದ ನಂತರ ವಿನಯ್ ರಾಜ್ ಕುಮಾರ್ ಅಭಿನಯದ ಮೂರನೇ ಚಿತ್ರಕ್ಕಾಗಿ ಡಾ ರಾಜ್ ಕುಟುಂಬದ ಅಭಿಮಾನಿಗಳು ಎದುರು ನೋಡುತ್ತಿದ್ದರು. ಬಟ್, ಮೂರನೇ ಸಿನಿಮಾ ಸೆಟ್ಟೇರುವುದು ತಡವಾಯಿತು. ಅದರ ಪರಿಣಾಮ ಈ ವರ್ಷ ವಿನಯ್ ಸಿನಿಮಾ ಇಲ್ಲದೇ ಫ್ಯಾನ್ಸ್ ಬೇಸರ ಪಟ್ಟುಕೊಂಡರು.

2017ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳು

ನಿಖಿಲ್ ಕುಮಾರ್

'ಜಾಗ್ವಾರ್' ಚಿತ್ರದ ಮೂಲಕ ಲಕ್ಕಿ ನಾಯಕನಾದ ನಿಖಿಲ್ ಕುಮಾರ್, ಎರಡನೇ ಚಿತ್ರ ಅದ್ಯಾಕೋ ತುಂಬ ಲೇಟ್ ಆಯ್ತು. ಈ ಮಧ್ಯೆ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯ ಪಾತ್ರ ಮಾಡಲು ಸಿದ್ದವಾದರು. ಹೀಗಾಗಿ, ಈ ವರ್ಷ ನಿಖಿಲ್ ಸಿನಿಮಾನೂ ಬಂದೇ ಇಲ್ಲ.

ಅನೀಶ್ ತೇಜಶ್ವರ್

'ಅಕಿರಾ' ಚಿತ್ರದ 'ಮಾಂಜ' ಸಿನಿಮಾ ಆರಂಭಿಸಿದ ಅನೀಶ್ ತೇಜಶ್ವರ್ ಈ ವರ್ಷ ಬೆಳ್ಳಿತೆರೆಯಲ್ಲಿ ಮಿಂಚಲಿಲ್ಲ. ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಮಾಂಜ ಮುಂದಿನ ವರ್ಷಕ್ಕೆ ಬರಲಿದೆ.

ಕೋಮಲ್

ನಟ ಕೋಮಲ್ ಅಭಿನಯದ ಯಾವ ಚಿತ್ರವೂ 2017ರಲ್ಲಿ ಬಂದಿಲ್ಲ. 'ಕೆಂಪೇಗೌಡ 2' ಸಿನಿಮಾ ಸೆಟ್ಟೇರಿತು. ಟ್ರೈಲರ್ ಕೂಡ ಬಿಡುಗಡೆ ಮಾಡಿತು. ಆದ್ರೆ, ಸಿನಿಮಾ ಮಾತ್ರ ಬಂದಿಲ್ಲ. ಮುಂದಿನ ವರ್ಷದ ದೊಡ್ಡ ಸಿನಿಮಾಗಳ ಪೈಕಿ ಕೋಮಲ್ ಚಿತ್ರವೂ ಒಂದಾಗಿದೆ.

2017 ರ ಅತ್ಯುತ್ತಮ ನಟ-ನಟಿ ಯಾರು.? ನೀವೇ ಆಯ್ಕೆ ಮಾಡಿ...

English summary
Kannada Actor Yash, Rakshit Shetty, Priyanka Upendra, vinay rajkumar, komal, and Parul Yadav's films not been released this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X