For Quick Alerts
  ALLOW NOTIFICATIONS  
  For Daily Alerts

  Siddeshwara Swamiji ಅಸ್ತಂಗತ : ಯಶ್, ರಮ್ಯಾ, ಧನಂಜಯ್, ವಾಸುಕಿ ವೈಭವ್ ಕಂಬನಿ!

  |

  ವಿಜಯಪುರದ ಜ್ವಾನಯೋಗಶ್ರಮದ ಸಿದ್ದೇಶ್ವರ ಶ್ರೀಗಳು ಅಪಾರ ಭಕ್ತರನ್ನು ಅಗಲಿಸಿದ್ದಾರೆ. ನಡೆದಾಡುವ ದೇವರು ಎಂದೇ ಜನಪ್ರಿಯರಾಗಿದ್ದ ಶ್ರೀಗಳು ಬದುಕು ಸರಳವಾಗಿತ್ತು. ಸರಳತೆಯನ್ನು ವಿಶ್ವಕ್ಕೆ ಸಾರಿದ ಯೋಗಿ ಅಗಲಿಕೆ ಕಂಡು ಗಣ್ಯರು ಭಾವುಕರಾಗಿದ್ದಾರೆ.

  ರಾಜಕೀಯ, ಸಿನಿಮಾ, ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖ ಸಿದ್ದೇಶ್ವರ ಶ್ರೀಗಳ ಅಸ್ತಂಗತರಾಗಿದ್ದಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಿಂದ ಯಶ್, ರಮ್ಯಾ, ಧನಂಜಯ್, ವಾಸುಕಿ ವೈಭವ್ ಸೇರಿದಂತೆ ಹಲವು ಕಂಬನಿ ಮಿಡಿದ್ದಾರೆ.

  ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ನಟ ಧನಂಜಯ ಸಂತಾಪಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ನಟ ಧನಂಜಯ ಸಂತಾಪ

  ಶತಮಾನದ ಶ್ರೇಷ್ಠ ಸಂತ ಎಂದ ಯಶ್

  ಶತಮಾನದ ಶ್ರೇಷ್ಠ ಸಂತ ಎಂದ ಯಶ್

  ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಯಶ್ ಜ್ವಾನಯೋಗಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಟ್ವೀಟ್ ಮೂಲಕ ರಾಕಿಂಗ್ ಯಶ್ ಶ್ರದ್ಧಾಂಜಲಿ ಸೂಚಿಸಿದ್ದಾರೆ. "ನುಡಿದಂತೆ ನಡೆದು, ಸರಳತೆಯ ಸಂದೇಶ ಸಾರಿ, ಶತಮಾನಗಳಿಗಾಗುವಷ್ಟು ಜ್ಞಾನದ ಬುತ್ತಿ ಕಟ್ಟಿಕೊಟ್ಟ ಸಂತ ಶ್ರೇಷ್ಠರಿಗೆ ವಿನಮ್ರ ಶ್ರದ್ಧಾಂಜಲಿ...
  ಓಂ ಶಾಂತಿ.." ಎಂದು ಯಶ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

  ಮೋಹಕತಾರೆ ರಮ್ಯಾ ಹೇಳಿದ್ದೇನು?

  ಮೋಹಕತಾರೆ ರಮ್ಯಾ ಹೇಳಿದ್ದೇನು?

  ಸಿದ್ದೇಶ್ವರ ಶ್ರೀಗಳನ್ನು ನೋಡುವುಕ್ಕೆ ಸಹಸ್ರಾರು ಸಂಖ್ಯೆ ಭಕ್ತ ಸಮೂಹ ಆಗಮಿಸುತ್ತಿದ್ದಾರೆ. ಸ್ವಾಮೀಜಿಯ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. "ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಯವರು ಇದು ಅಗಲಿರಬಹುದು. ಆದರೆ, ಸರಳತೆ, ತಾಳ್ಮೆ, ಸಹಾನೂಭೂತಿಯ ಬಗ್ಗೆ ಅವರು ಮಾಡಿದ ಪಾಠದ ಮೂಲಕ ಜೀವಂತವಾಗಿತ್ತಾರೆ. ನಿಸ್ವಾರ್ಥ ಪ್ರೀತಿ ಹಾಗೂ ತ್ಯಾಗಕ್ಕೆ ಪ್ರೇರಣೆಯಾಗಿದ್ದ ವ್ಯಕ್ತಿ. ಅವರ ದಾರಿ ಅನುಸರಿಸುವವರ ಮೂಲಕ ಅವರು ಬದುಕಿರುತ್ತಾರೆ." ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

  ಧನಂಜಯ್‌ರಿಂದ ಅಂತಿಮ ದರ್ಶನ

  ಧನಂಜಯ್‌ರಿಂದ ಅಂತಿಮ ದರ್ಶನ

  "ನಾನು ಅನ್ಬೇಡಾ.. ನನ್ನಿಂದ ಅನ್ಬೇಡಾ.. ನಾನು ಮಾಡೀನಿ ಅನ್ನಬೇಡ.. ಮಾಡೋದನ್ನು ನಿಲ್ಲಿಸಬೇಡ.. ನಾನು ಇಂತಹ ಅವರ ಪ್ರವಚನಗಳನ್ನು ಕೇಳಿದ್ದೀನಿ. ನಾನು ಮೊದಲ ಬಾರಿ ಅವರನ್ನು ನೋಡಿದ್ದು, ಮೈಸೂರಿನ ಸುತ್ತೂರು ಮಠಕ್ಕೆ ಅಬ್ದುಲ್ ಕಲಾಂ ಅವರು ಬಂದಾಗ ನಮ್ಮನ್ನೆಲ್ಲಾ ಕಾಲೇಜಿನಿಂದ ಕರೆದುಕೊಂಡು ಹೋಗಿದ್ದರು. ಆಗ ಸಿದ್ದೇಶ್ವರ ಸ್ವಾಮೀಜಿಗಳೂ ಬಂದಿದ್ದರು. ಅಲ್ಲಿಂದ ನಾನು ಅವರನ್ನು ಫಾಲೋ ಮಾಡುತ್ತಿದ್ದೆ. ಬಯಲು ಬಯಲಲ್ಲೇ ಬಿತ್ತಿ. ಬಯಲು ಬಯಲಲ್ಲೇ ಬೆಳೆದು, ಬಯಲು ಬಯಲಾಗಿ ಬಯಲಾಯಿತಯ್ಯ ಅಂತ ಇವತ್ತು ಸಿದ್ದೇಶ್ವರ ಸ್ವಾಮಿಜಿಗಳು ಬಯಲಾಗಿದ್ದಾರೆ. ತುಂಬಾ ಅದ್ಭುತವಾದ ಉದಾಹರಣೆಯನ್ನೇ ಸೆಟ್ ಮಾಡಿದ್ದಂತಹ ಅದ್ಭುತ ಸಂತರು." ಎಂದು ಅಂತಿಮ ದರ್ಶನ ಪಡೆದ ಬಳಿಕ ಧನಂಜಯ್ ಹೇಳಿದ್ದಾರೆ.

  ವಾಸುಕಿ ವೈಭವ್ ಅಂತಿಮ ದರ್ಶನ

  ವಾಸುಕಿ ವೈಭವ್ ಅಂತಿಮ ದರ್ಶನ

  ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹಾಗೂ ನಟ ನಾಗಭೂಷಣ್ ಇಬ್ಬರೂ ಮಹಾನ್ ಯೋಗಿಯ ಅಂತಿಮ ದರ್ಶನ ಪಡೆದು ನಮಿಸಿದ್ದಾರೆ. " ಮಹಾನ್ ವ್ಯಕ್ತಿಯ ದರ್ಶನ ಮಾಡಿಕೊಂಡು ಹೋಗೋಣ ಅಂತ ಬಂದಿದ್ದೇನೆ. ತುಂಬಾ ಅನಿಸಿತ್ತು ಇವರನ್ನು ಭೇಟಿ ಮಾಡೋಣ ಅಂತ. ಈಗಲಾದರೂ, ಇವರ ದರ್ಶನ ಪಡೆದುಕೊಂಡು ಹೋಗೋಣ ಅಂತ ಬಂದಿದ್ದೀವಿ. ಇವರ ಫಿಲಾಸೋಪಿ ಆಗಲಿ, ವ್ಯಕ್ತಿತ್ವ ಆಗಲಿ, ಬದುಕು ಕಟ್ಟಿಕೊಂಡ ರೀತಿಯಿಂದ ತುಂಬಾ ಕಲಿಯುವುದಿತ್ತು." ಎಂದು ವಾಸುಕಿ ವೈಭವ್ ಹೇಳಿದ್ದಾರೆ.

  English summary
  Yash,Ramya,Dhananjay,Vasuki Vaibhav About Sri Siddeshwara Swamiji Death,Know More.
  Tuesday, January 3, 2023, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X