'ಮಾಯಾಂಗನೆ ಸುಮಲತಾ' ಟೀಕೆಗೆ ರಾಕಿಂಗ್ ಸ್ಟಾರ್ ಫುಲ್ ಗರಂ

Recommended Video

Lok Sabha Elections 2019 : ಜಯಲಲಿತಾ ಮೀರಿಸುವಂತಹ ಮಾಯಾಂಗನೆ ಸುಮಲತಾ ಎಂದಿದ್ದ ಶಿವರಾಮೇಗೌಡ

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಗಿಂತ ಮಾಯಾಂಗನೆ ಎಂದು ಸಂಸದ ಶಿವರಾಮೇಗೌಡ ಟೀಕೆ ಮಾಡಿದ್ದರು. ಈ ಹೇಳಿಕೆಗೆ ಸುಮಲತಾ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

ನಟ ದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ 'ಅವರು ಏನೇ ಹೇಳಿದ್ರು ನಾವು ರಿಯಾಕ್ಟ್ ಮಾಡಲ್ಲ' ಎಂದಿದ್ದರು. ಇದೀಗ, ಈ ಬಗ್ಗೆ ನಟ ಯಶ್ ಮಾತನಾಡಿ ಸಂಸದ ಶಿವರಾಮೇಗೌಡ ವಿರುದ್ಧ ಕಿಡಿಕಾರಿದ್ದಾರೆ.

'ಅಂಬರೀಶ್ ಅವರು ಇದ್ದಿದ್ರೆ ಬರಿ ಬೆರಳು ತೋರಿಸಲು ಯಾರಿಗಾದರೂ ತಾಕತ್ ಇತ್ತಾ? ಅವರಿಲ್ಲ ಎಂಬ ಕಾರಣಕ್ಕೆ ಈಗ ಏನೆಲ್ಲಾ ಮಾತಾಡ್ತಿದ್ದಾರೆ. ಈ ದುರಹಂಕಾರಕ್ಕೆ ಮಂಡ್ಯ ಜನರು ಪಾಠ ಕಲಿಸುತ್ತಾರೆ' ಎಂದು ಯಶ್ ತಿರುಗೇಟು ನೀಡಿದ್ದಾರೆ.

Yash react about mayanagane sumalatha word

'ಹೆಣ್ಣುಮಕ್ಕಳ ವಿಚಾರಕ್ಕೆ ಬರಬಾರದು. ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಇವರ ಬಗ್ಗೆ ಮಾತನಾಡುವುದಕ್ಕೂ ಮುಂಚೆ ಅವರ ಹೆಣ್ಣು ಮಕ್ಕಳನ್ನ ನೆನಪು ಮಾಡಿಕೊಳ್ಳಲಿ. ಅವರ ಗಂಡ ಸ್ಪರ್ಧೆ ಮಾಡಿದ್ದ ಜಾಗದಲ್ಲಿ ಅವರು ಚುನಾವಣೆ ಸ್ಪರ್ಧಿಸಿದ್ದಾರೆ. ಅದರಲ್ಲಿ ಏನಿದು ತಪ್ಪು' ಎಂದು ಪ್ರಶ್ನಿಸಿದ್ದಾರೆ.

ಇಂದು ನಾಗಮಂಗಲದಲ್ಲಿ ಪ್ರಚಾರ ಮಾಡುತ್ತಿರುವ ಯಶ್, ಏಪ್ರಿಲ್ 14 ರಂದು ಕೆ ಆರ್ ಪೇಟೆ, ಏಪ್ರಿಲ್ 15 ರಂದು ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ.

More from Filmibeat

English summary
Kannada actor yash has react about Mp shivarame gowda's mayengani comment. shivarame gowda has called mayengani to sumalatha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X