twitter
    For Quick Alerts
    ALLOW NOTIFICATIONS  
    For Daily Alerts

    'ಯಶ್-ಸುದೀಪ್ ಬಚ್ಚಾಗಳು' ಎಂದಿದ್ದ ರಾಜಕಾರಣಿಗೆ 'ರಾಜಾಹುಲಿ' ತಿರುಗೇಟು

    By Bharath Kumar
    |

    Recommended Video

    ಯಶ್ - ಸುದೀಪ್ ಇನ್ನೂ ಬಚ್ಚಾಗಳಂತೆ | Filmibeat Kannada

    ''ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ನನ್ನ ಮುಂದೆ ಬಚ್ಚಾಗಳು'' ಎಂದು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಹೇಳಿದ್ದರು. ಇದಕ್ಕೀಗ ರಾಕಿಂಗ್ ಸ್ಟಾರ್ ಯಶ್ ತಿರುಗೇಟು ನೀಡಿದ್ದಾರೆ.

    ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಿಪ್ಪೇಸ್ವಾಮಿ ಎದುರು ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಈ ಸುದೀಪ್ ಮತ್ತು ಯಶ್ ಮತಯಾಚನೆ ಮಾಡಿದ್ದರು. ಈ ವೇಳೆ ತಿಪ್ಪೆಸ್ವಾಮಿ ಸಿನಿಮಾ ನಟರಿಗೆ ಟಾಂಗ್ ನೀಡಿದ್ದರು. ಯಶ್-ಸುದೀಪ್ ಇನ್ನು ಬಚ್ಚಾಗಳು, ನಾನು ಚಿಕ್ಕವನಾಗಿದ್ದಾಗಲೇ ಬಣ್ಣ ಹಚ್ಚಿದೆ. ನನ್ನ ಕ್ಷೇತ್ರದಲ್ಲಿ ನಾನೇ ಸ್ಟಾರ್ ಎಂದು ಕಾಲೆಳೆದಿದ್ದರು.

    ಶ್ರೀರಾಮುಲು ಪರ 'ಮಾಸ್ಟರ್ ಪೀಸ್' ಯಶ್ ಮತಯಾಚನೆಶ್ರೀರಾಮುಲು ಪರ 'ಮಾಸ್ಟರ್ ಪೀಸ್' ಯಶ್ ಮತಯಾಚನೆ

    ಈ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ಉತ್ತರ ಕೊಟ್ಟಿದ್ದಾರೆ. ನೆಲಮಂಗಲದ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಎಂ.ವಿ.ನಾಗರಾಜು ಪರ ಪ್ರಚಾರ ನಡೆಸಿದ ನಂತರ ತಿಪ್ಪೇಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಹಾಗಿದ್ರೆ, ಯಶ್ ಏನಂದ್ರು.? ಮುಂದೆ ಓದಿ....

    ಹೌದು, ಅವರ ಮುಂದೆ ನಾನು ಬಚ್ಚಾನೇ

    ಹೌದು, ಅವರ ಮುಂದೆ ನಾನು ಬಚ್ಚಾನೇ

    ''ರಾಜಕೀಯ ಒಂದು ಗೇಮ್. ಅದು ನಿಜ ಇರಬೇಕು. ಅವರ ವಯಸ್ಸೇನು, ಅವರು ತುಂಬಾ ಹಿರಿಯರು, ಅವರ ಮುಂದೆ ನಾನು ಬಚ್ಚಾನೆ. ಅದನ್ನ ಜನ ಡಿಸೈಡ್ ಮಾಡುತ್ತಾರೆ'' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಶ್ರೀರಾಮುಲುಗಾಗಿ ಪ್ರಚಾರ ಮಾಡಿದೆ

    ಶ್ರೀರಾಮುಲುಗಾಗಿ ಪ್ರಚಾರ ಮಾಡಿದೆ

    ''ರಾಜಕೀಯದಲ್ಲಿ ಒಬ್ಬ ಗೆಲ್ಲಬೇಕಾದರೆ ನಾಲ್ಕು ಜನ ಸೋಲಲೇಬೇಕು. ಶ್ರೀರಾಮುಲು ನನಗೆ ಪರಿಚಯ ಹೀಗಾಗಿ ಅವರ ಹಾಗೂ ನನ್ನ ಅಭಿಮಾನಿಗಳಿಗೋಸ್ಕರ ಪ್ರಚಾರ ಮಾಡಿದೆ. ಜನಕ್ಕೆ ಏನೂ ಮಾಡಬೇಕು ಅನ್ನೋದು ನನ್ನ ಬುದ್ಧಿವಂತಿಕೆ, ವ್ಯವಸ್ಥೆಯನ್ನು ಬದಲಾಯಿಸುವ ನಂಬಿಕೆ ನನ್ನಲ್ಲಿಲ್ಲ. ಶಕ್ತಿವಂತರು, ಬುದ್ಧಿವಂತರು, ಜನರ ಪ್ರೀತಿಗಳಿಸಲು ಪ್ರಯತ್ನ ಪಡುವವರಿಗೆ ನಾನು ಸಹಕಾರಿಯಾಗುತ್ತೇನೆ'' ಎಂದು ಯಶ್ ಅಭಿಪ್ರಾಯ ಪಟ್ಟಿದ್ದಾರೆ.

    ಚುನಾವಣೆ ಪ್ರಚಾರಕ್ಕೆ ನಟ ಯಶ್ ಧುಮುಕಿರುವುದರ ಹಿಂದಿನ ಗುಟ್ಟು ರಟ್ಟು.!ಚುನಾವಣೆ ಪ್ರಚಾರಕ್ಕೆ ನಟ ಯಶ್ ಧುಮುಕಿರುವುದರ ಹಿಂದಿನ ಗುಟ್ಟು ರಟ್ಟು.!

    ವಿರೋಧಿಗಳಲ್ಲಿ ಭಯ ಹುಟ್ಟಿರಬಹುದು

    ವಿರೋಧಿಗಳಲ್ಲಿ ಭಯ ಹುಟ್ಟಿರಬಹುದು

    ''ನಾನು ಪ್ರಚಾರ ಮಾಡುವ ಸ್ಥಳಗಳಲ್ಲಿ ವಿರೋಧಿಗಳಿಗೆ ಭಯ ಹುಟ್ಟಿರಬಹುದು. ನಾನು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳ ಗೆಲುವು ಸೋಲಿಗಿಂತ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ'' ಎಂದು ತಿರುಗೇಟು ನೀಡಿದ್ರು.

    ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗ ಪತ್ರ ಬರೆದ ಸುದೀಪ್ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗ ಪತ್ರ ಬರೆದ ಸುದೀಪ್

    ಕೆಟ್ಟವನು ಎಂದವರು, ಒಳ್ಳೆಯವನು ಅಂದಿದ್ದಾರೆ

    ಕೆಟ್ಟವನು ಎಂದವರು, ಒಳ್ಳೆಯವನು ಅಂದಿದ್ದಾರೆ

    ''ಕಲಾವಿದನಾಗಿ ಜನ ನನಗೆ ಪ್ರೀತಿ ತೋರಿಸುತ್ತಾ ಇದ್ದಾರೆ. ಅದಕ್ಕೆ ನಾನು ಏನು ಮಾಡಬೇಕು ಅಂತಾ ಅವರ ಪರವಾಗಿ ಯೋಚನೆ ಮಾಡುತ್ತಾ ಇದ್ದೇನೆ. ನನಗೆ ಒಳ್ಳೆಯವನು ಕೆಟ್ಟವನು ಅನ್ನಿಸಿಕೊಳ್ಳುವ ಬಗ್ಗೆ ಯೋಚನೆ ಇಲ್ಲ. ಎಸ್ಟೋ ಸಲ ಕೆಟ್ಟೋನು ಎಂದವರು ನಂತರ ಒಳ್ಳೆಯವನು ಅಂದಿದ್ದಾರೆ'' ಎಂದು ಯಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    English summary
    Kannada actor, Rocking star yash has react on molakalmuru mla thippeswamy controversial statement.
    Wednesday, May 9, 2018, 10:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X