»   » 'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಯಶ್ ಹೇಳೋದೇ ಬೇರೆ.!

'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಯಶ್ ಹೇಳೋದೇ ಬೇರೆ.!

Posted By:
Subscribe to Filmibeat Kannada
Yash Reaction About Arjun Reddy Movie | Filmibeat Kannada

ಕಳೆದ ಕೆಲ ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಕುರಿತು ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಅದೇನಪ್ಪಾ ಅಂದ್ರೆ, ತೆಲುಗಿನ ಬ್ಲಾಕ್ ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಈ ಚಿತ್ರಕ್ಕೆ ಯಶ್ ನಾಯಕರಾಗಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ 'ಅರ್ಜುನ್ ರೆಡ್ಡಿ' ರೀಮೇಕ್ ಹಕ್ಕು ಖರೀದಿಸಿರುವ ರಾಕ್ ಲೈನ್ ವೆಂಕಟೇಶ್ ಅವರು, ಯಶ್ ಈ ಸಿನಿಮಾ ಮಾಡಬೇಕು, ಅವರನ್ನೇ ಅಪ್ರೋಚ್ ಮಾಡಲಾಗುತ್ತೆ ಎಂದಿದ್ದರು.

ಇದೀಗ, ರಾಕಿಂಗ್ ಸ್ಟಾರ್ ಯಶ್ 'ಅರ್ಜುನ್ ರೆಡ್ಡಿ' ಚಿತ್ರದ ರೀಮೇಕ್ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ.....

ಇನ್ನು ಮಾತುಕತೆ ಆಗಿಲ್ಲ

ಇತ್ತೀಚೆಗಷ್ಟೇ ಫೇಸ್ ಬುಕ್ ಲೈವ್ ಗೆ ಬಂದಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಅಭಿಮಾನಿಯೊಬ್ಬ 'ಅರ್ಜುನ್ ರೆಡ್ಡಿ ರೀಮೇಕ್ ಮಾಡ್ತೀರಾ' ಎಂದು ಕೇಳಿದರು. ಇದಕ್ಕೆ ಯಶ್ ಉತ್ತರಿಸಿದ್ದು, ಈ ಬಗ್ಗೆ 'ಇನ್ನು ಮಾತುಕತೆ ಆಗಿಲ್ಲ' ಎಂದರು.

ಈ ಚಿತ್ರ ಮಾಡಿದ್ರೆ, ಯಶ್ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ.!

ಮುಂದೆ ನೋಡೋಣ ಎಂದ ಯಶ್

''ಅಂತಹ ಸಮಯ ಬಂದಾಗ ನಾನೇ ಹೇಳ್ತೀನಿ. ನಾನು ನೋಡ್ಬೇಕು ಅಲ್ವಾ.! ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

'ಫೇಸ್ ಬುಕ್ ಲೈವ್'ನಲ್ಲಿ ಯಶ್ ಬಿಚ್ಚಿಟ್ಟ 5 ಇಂಟ್ರೆಸ್ಟಿಂಗ್ ವಿಷ್ಯಗಳು

ಮಾಡಿದ್ರು ಮಾಡಬಹುದು

ಸದ್ಯ, 'ಕೆ.ಜಿ.ಎಫ್' ಚಿತ್ರದ ಚಿತ್ರೀಕರಣದಲ್ಲಿ ಯಶ್ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಮುಗಿದ ನಂತರ ಬಹುಶಃ 'ಅರ್ಜುನ್ ರೆಡ್ಡಿ' ಚಿತ್ರದ ರೀಮೇಕ್ ಬಗ್ಗೆ ಚರ್ಚೆ ನಡೆಸಬಹುದು.

ಸದ್ಯಕ್ಕಂತೂ ಯಶ್ ಮಾಡಲ್ಲ

ಒಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನ ಕನ್ನಡದಲ್ಲಿ ಯಶ್ ಮಾಡಲಿದ್ದಾರೆ, ಅವರು ಮಾಡಿದ್ರೆ ಚೆನ್ನಾಗಿರುತ್ತೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಯಶ್ ಸದ್ಯಕ್ಕೆ ಅಂತ ಬೆಳವಣಿಗೆ ಏನು ಆಗಿಲ್ಲ ಅಂತಿದ್ದಾರೆ. ಹೀಗಾಗಿ, ಮತ್ತಷ್ಟು ದಿನ ಕಾದು ನೋಡೋಣ. ಅಲ್ಲಿಯವರೆಗೂ 'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಬರಿ ಚರ್ಚೆ ಮಾತ್ರ.

'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಬಹಿರಂಗ ಪಡಿಸಿದ ರಾಕಿಂಗ್ ಸ್ಟಾರ್.!

English summary
Kannada Actor, Rocking Star Yash Gives Clarification about Telugu Movie Arjun reddy remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X