For Quick Alerts
  ALLOW NOTIFICATIONS  
  For Daily Alerts

  'ಅದು ನಮ್ಮ ಸಿನಿಮಾ ವೃತ್ತಿಯ ಆರಂಭವಷ್ಟೇ ಆಗಿರಲಿಲ್ಲ': ಮೊದಲ ಸಿನಿಮಾ ಸ್ಮರಿಸಿದ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಎಂಬ ಹ್ಯಾಷ್ ಟ್ಯಾಗ್ ಸದಾ ಟ್ರೆಂಡ್‌ನಲ್ಲಿರುವುದು ಇದಕ್ಕೆ ಸಾಕ್ಷಿ. ಹಾಗೆಂದು ಆ ಸಂಭ್ರಮಕ್ಕೆ ಕೆಜಿಎಫ್ ಚಿತ್ರವೇನೂ ಪ್ರಮುಖ ಕಾರಣವಲ್ಲ. ಚಿತ್ರರಂಗದಲ್ಲಿ ನಾಯಕ ನಟನಾಗಿ ಯಶ್ 12 ವರ್ಷಗಳನ್ನು ಪೂರೈಸಿದ್ದಾರೆ. ಇದನ್ನು ಅಭಿಮಾನಿಗಳು ವಿಶೇಷ ಹಬ್ಬದಂತೆ ಆಚರಿಸಿದ್ದಾರೆ. ಆದರೆ ಈ ಹನ್ನೆರಡರ ಮೈಲುಗಲ್ಲು ದಾಟಿರುವುದು ಯಶ್ ಅವರಿಗೆ ತಿಳಿದಿರುವುದು ತಡವಾಗಿ.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ನಾಯಕ ನಟನಾಗಿ ತಮ್ಮ ಸಿನಿಮಾ ರಂಗದ ಪಯಣಕ್ಕೆ 12 ವರ್ಷ ತುಂಬಿದ ಖುಷಿಯನ್ನು ಯಶ್ ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮನ್ನು ಒಬ್ಬ ಹೀರೋ ಆಗಿ ಪರಿಚಯಿಸಿದ ಚಿತ್ರತಂಡವನ್ನು ನೆನೆದು ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಜನಮನ ಗೆದ್ದಿದ್ದಾರೆ. ಯಶ್ ಮೊದಲು ಸಿನಿಮಾದಲ್ಲಿ ನಟಿಸಿದ್ದು 'ಜಂಭದ ಹುಡುಗಿ' ಚಿತ್ರದಲ್ಲಿ. ಆದರೆ ನಾಯಕ ನಟನಾಗಿ ಪರಿಚಯವಾಗಿದ್ದು 2008ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ. ಮುಂದೆ ಓದಿ...

  ಸಿನಿಮಾ ಬದುಕಷ್ಟೇ ಅಲ್ಲ

  ಸಿನಿಮಾ ಬದುಕಷ್ಟೇ ಅಲ್ಲ

  'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ 12 ವರ್ಷಗಳಾಯಿತು ಎನ್ನುವುದು ಈಗಷ್ಟೇ ಅರಿವಾಯಿತು. ನನ್ನನ್ನು ಮತ್ತು ರಾಧಿಕಾ ಇಬ್ಬರನ್ನೂ ಜತೆಯಾಗಿ ಪರಿಚಯಿಸಿದ ಸಿನಿಮಾ. ಆಗ ಶುರುಮಾಡಿದ್ದು ನಮ್ಮ ಸಿನಿಮಾ ಜೀವನವನ್ನಷ್ಟೇ ಅಲ್ಲ ಎನ್ನುವ ಯೋಚನೆಯೂ ಇರಲಿಲ್ಲ ಎಂದು ಯಶ್ ಹೇಳಿದ್ದಾರೆ.

  ಚಿತ್ರರಂಗಕ್ಕೆ ಯಶ್ ಸಿಕ್ಕು 12 ವರ್ಷ: ಅಭಿಮಾನಿಗಳಿಂದ ಸಂಭ್ರಮಾಚರಣೆಗೆ ಸಿದ್ಧತೆಚಿತ್ರರಂಗಕ್ಕೆ ಯಶ್ ಸಿಕ್ಕು 12 ವರ್ಷ: ಅಭಿಮಾನಿಗಳಿಂದ ಸಂಭ್ರಮಾಚರಣೆಗೆ ಸಿದ್ಧತೆ

  ಮೊಗ್ಗಿನ ಮನಸ್ಸಿನಿಂದ ಶುರು

  ಮೊಗ್ಗಿನ ಮನಸ್ಸಿನಿಂದ ಶುರು

  'ನಂದಗೋಕುಲ' ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದ ನಿಜ ಜೀವನದ ಜೋಡಿ, ಯಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಆರಂಭ ಕೊಟ್ಟಿದ್ದು 'ಮೊಗ್ಗಿನ ಮನಸ್ಸು'. ಕಾಲೇಜು ಮೆಟ್ಟಿಲೇರಿದ ತರುಣ- ತರುಣಿಯರ ಮನಸ್ಸಿನ ತಲ್ಲಣ, ಪ್ರೇಮದ ಸೆಳೆತಗಳನ್ನು ಕಟ್ಟಿಕೊಟ್ಟಿದ್ದ ಈ ಚಿತ್ರ, ಸೂಪರ್ ಹಿಟ್ ಆಗಿತ್ತು. ಹಲವು ಪ್ರಶಸ್ತಿಗಳನ್ನೂ ತಂದುಕೊಟ್ಟಿತ್ತು.

  ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಯಶ್

  ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಯಶ್

  ಇಂತಹ ವಿಶೇಷ ಸಿನಿಮಾಕ್ಕಾಗಿ ನಮ್ಮ ಚಿತ್ರದ ನಿರ್ಮಾಪಕರಾದ ಇ. ಕೃಷ್ಣಪ್ಪ ಮತ್ತು ಗಂಗಾಧರ್ ಅವರಿಗೆ ಧನ್ಯವಾದಗಳು. ನಮ್ಮ ಛಾಯಾಗ್ರಾಹಕ ಚಂದ್ರು ಸರ್ ಹಾಗೂ ನನ್ನನ್ನು ನಂಬಿದ್ದಕ್ಕಾಗಿ ನಮ್ಮ ನಿರ್ದೇಶಕ ಶಶಾಂಕ್ ಅವರಿಗೆ ವಿಶೇಷ ಕೃತಜ್ಞತೆಗಳು ಎಂದು ಯಶ್ ತಮ್ಮ ಪಯಣಕ್ಕೆ ಬುನಾದಿ ಹಾಕಿದ ಚಿತ್ರತಂಡವನ್ನು ಸ್ಮರಿಸಿದ್ದಾರೆ.

  ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್‌ಪಿ ಬಂದಿದ್ದೆಷ್ಟು?ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್‌ಪಿ ಬಂದಿದ್ದೆಷ್ಟು?

  ಕೆಜಿಎಫ್‌ನ ಹೊಸ ಸ್ಟಿಲ್

  ಕೆಜಿಎಫ್‌ನ ಹೊಸ ಸ್ಟಿಲ್

  ಈ ನಡುವೆ ಅಭಿಮಾನಿಗಳು ಕಾತರದಿಂದ ಕಾದಿರುವ 'ಕೆಜಿಎಫ್ ಚಾಪ್ಟರ್ 2' ಚಿತ್ರದಿಂದಲೂ ವಿಶೇಷ ಗಿಫ್ಟ್ ಸಿಕ್ಕಿದೆ. 12 ವರ್ಷದ ವೃತ್ತಿ ಬದುಕು ಪೂರೈಸಿದ ಸವಿ ಗಳಿಗೆಗಾಗಿ ಕೆಜಿಎಫ್ ಚಾಪ್ಟರ್ 2ನ ಯಶ್ ಅವರ ಹೊಸ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ. ಕೈಯಲ್ಲಿ ಕ್ಯಾಮೆರಾ ಹಿಡಿದು ಕುಳಿತಿರುವ ಈ ಪೋಸ್ ಕಂಡು ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ.

  'ದುನಿಯಾ' ಚಿತ್ರದ ಈ ಪಾತ್ರದಲ್ಲಿ ಯಶ್ ನಟಿಸಬೇಕಿತ್ತು, ಆದರೆ ಕೈ ತಪ್ಪಿದ್ದು ಹೇಗೆ ಗೊತ್ತೇ?'ದುನಿಯಾ' ಚಿತ್ರದ ಈ ಪಾತ್ರದಲ್ಲಿ ಯಶ್ ನಟಿಸಬೇಕಿತ್ತು, ಆದರೆ ಕೈ ತಪ್ಪಿದ್ದು ಹೇಗೆ ಗೊತ್ತೇ?

  English summary
  Yash has remembered the beginning of his film career with Radhika Pandit in Moggina Manasu 12 years ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X