For Quick Alerts
  ALLOW NOTIFICATIONS  
  For Daily Alerts

  'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!

  By Harshitha
  |

  ಅದು 2015 ರ ಸಮಯ... 'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಹಾಗೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'... ಹೀಗಾಗಿ ಸತತ ಸೆಂಚುರಿ ಬಾರಿಸುತ್ತಲೇ ಇದ್ದ ಯಶ್ ಗೆ ಅಭಿಮಾನಿ ಬಳಗ ಹೆಚ್ಚಾದಂತೆ ಬದ್ಧವೈರಿಗಳೂ ಹೆಚ್ಚಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಶುರು ಆಯ್ತು.

  ಅಷ್ಟಕ್ಕೂ, ಇಂತಹ ಮಾತುಗಳು ಕೇಳಿ ಬರಲು ಕಾರಣ ನಟ ಯಶ್ ರವರ ಕಾರಿನ ಮೇಲಾದ ಅಟ್ಯಾಕ್.!

  ರಾಕಿಂಗ್ ಸ್ಟಾರ್ ಯಶ್ ರವರ ಕಪ್ಪು ಬಣ್ಣದ ಕಾರಿನ ಮೇಲೆ ಕಲ್ಲು ತೂರಿ ದಾಂಡಿಗರು ದಾಳಿ ನಡೆಸಿದ್ದರು. ಯಶ್ ಕಾರಿನ ಮುಂಭಾಗ ಜಖಂಗೊಂಡಿತ್ತು. ಈ ಅಟ್ಯಾಕ್ ಹಿಂದೆ 'ಯಾರೋ' ಇದ್ದಾರೆ ಎಂಬ ರೂಮರ್ಸ್ ಹಬ್ಬಿದರೂ, ಹೊಸ ವಿವಾದ ಸೃಷ್ಟಿಸಬಾರದು ಎನ್ನುವ ಕಾರಣಕ್ಕೆ ಯಶ್ ಈ ಪ್ರಕರಣದ ಬಗ್ಗೆ ಅಂದು ತುಟಿಕ್ ಪಿಟಿಕ್ ಎಂದಿರಲಿಲ್ಲ.

  ಈ ಅಟ್ಯಾಕ್ ಬಗ್ಗೆ ಇಷ್ಟು ದಿನ ಸೈಲೆಂಟ್ ಆಗಿದ್ದ ಯಶ್ ನಿನ್ನೆ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ, ಯಶ್ ಮೇಲೆ ಅಟ್ಯಾಕ್ ನಡೆದಿದ್ದು ನಿಜವೇ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಪ್ರಶ್ನೆಗೆ ಉತ್ತರಿಸದೆ ಯಶ್ ಗೆ ಬೇರೆ ದಾರಿ ಇರಲಿಲ್ಲ.!

  ಪ್ರಶ್ನೆಗೆ ಉತ್ತರಿಸದೆ ಯಶ್ ಗೆ ಬೇರೆ ದಾರಿ ಇರಲಿಲ್ಲ.!

  ಬನಶಂಕರಿಯಲ್ಲಿ ಇರುವ ತಮ್ಮ ಬಾಡಿಗೆ ಮನೆಯ ವಿವಾದದ ಬಗ್ಗೆ ಸ್ಪಷ್ಟನೆ ನೀಡಲು ನಿನ್ನೆ ಸಂಜೆ ನಟ ಯಶ್ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಈ ವೇಳೆ, ಅಭಿಮಾನಿಗಳ ಪ್ರಶ್ನೆಗಳಿಗೂ ನಟ ಯಶ್ ಉತ್ತರಿಸಲು ಶುರು ಮಾಡಿದರು. ಆಗಲೇ ನೋಡಿ ಅಭಿಮಾನಿಯೊಬ್ಬರು ''ನಿಮ್ಮ ಮೇಲೆ ರೌಡಿ ಅಟ್ಯಾಕ್ ಆಗಿತ್ತಲ್ವಾ? ಯಾರು ಅದನ್ನ ನಡೆಸಿದ್ದು?'' ಅಂತ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸದೇ ಯಶ್ ಗೆ ಬೇರೆ ದಾರಿಯೇ ಇರಲಿಲ್ಲ.

  ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?

  ನಟ ಯಶ್ ಕೊಟ್ಟ ಉತ್ತರ ಏನು.?

  ನಟ ಯಶ್ ಕೊಟ್ಟ ಉತ್ತರ ಏನು.?

  ''ನನ್ನ ಮೇಲೆ ರೌಡಿ ಅಟ್ಯಾಕ್ ಆಗಿಲ್ಲ. ಅದು ಕೂಡ ರೂಮರ್.! ನನ್ನ ಕಾರ್ ಮೇಲೆ ಅಟ್ಯಾಕ್ ಆಗಿತ್ತು. ದಪ್ಪ ಕಲ್ಲು ಬಿದ್ದಿತ್ತು. ಹಾಗೆ ಮಾಡಿದ್ದು ಯಾರು? ಮಾಡಿಸಿದ್ದು ಯಾರು? ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ, ನನ್ನ ಮೇಲೆ ಯಾರೋ ಅಟ್ಯಾಕ್ ಮಾಡಿಸಿದ್ದಾರೆ ಅಂತ ರೂಮರ್ಸ್ ಓಡಾಡುತ್ತಿತ್ತು'' - ನಟ ಯಶ್

  ಯಶ್ ಮೇಲಿನ ದಾಳಿಗೆ 'ಬಾಸ್' ನಂಬರ್ ಕಾರಣವಾಯ್ತಾ?ಯಶ್ ಮೇಲಿನ ದಾಳಿಗೆ 'ಬಾಸ್' ನಂಬರ್ ಕಾರಣವಾಯ್ತಾ?

  ಪೊಲೀಸ್ ಪ್ರೊಟೆಕ್ಷನ್ ಇತ್ತು

  ಪೊಲೀಸ್ ಪ್ರೊಟೆಕ್ಷನ್ ಇತ್ತು

  ''ಪೊಲೀಸ್ ಡಿಪಾರ್ಟ್ಮೆಂಟ್ ಇಂದ ಇಬ್ಬರು ಆಫೀಸರ್ಸ್ ನನ್ನ ಜೊತೆಯೇ ಎರಡರಿಂದ ಮೂರು ತಿಂಗಳ ಕಾಲ ಇದ್ದರು'' - ನಟ ಯಶ್

  ಆತ ನನ್ನ ಅಭಿಮಾನಿ ಅಂತೆ!

  ಆತ ನನ್ನ ಅಭಿಮಾನಿ ಅಂತೆ!

  ''ಯಾವುದೋ ಒಬ್ಬ ವ್ಯಕ್ತಿಯ ಹೆಸರು ಬಂದಿತ್ತು. ಆ ವ್ಯಕ್ತಿ ನನ್ನ ಬಳಿ ಬಂದು, ''ನಾನು ನಿಮ್ಮ ಅಭಿಮಾನಿ. ರಾಮಾಚಾರಿ ಚಿತ್ರವನ್ನ ಐದು ಬಾರಿ ನೋಡಿದ್ದೇನೆ. ಇದು ಸುಳ್ಳು ರೂಮರ್. ಯಾರೋ ನನ್ನ ಮೇಲೆ ಕಂಪ್ಲೇಂಟ್ ಮಾಡಲು ನಿಮ್ಮ ಹೆಸರು ಬಳಸಿಕೊಂಡಿದ್ದಾರೆ'' ಅಂತ ಮಾತನಾಡಿ ಹೋದರು. ಸ್ವಲ್ಪ ದಿನ ಆದ್ಮೇಲೆ ಎಲ್ಲವೂ ಸರಿ ಹೋಯ್ತು'' - ನಟ ಯಶ್

  ಏನಿದು ಅಟ್ಯಾಕ್ ಘಟನೆ.?

  ಏನಿದು ಅಟ್ಯಾಕ್ ಘಟನೆ.?

  ಆಟೋ ಮತ್ತು ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ನಲ್ಲಿ ಬಂದ ದಾಂಡಿಗರು ಶೇಷಾದ್ರಿಪುರಂನಲ್ಲಿ ಸಾಗುತ್ತಿದ್ದ ಯಶ್ ಅವರ ಕಪ್ಪು ಬಣ್ಣದ ಕಾರಿನ ಮೇಲೆ ದೊಡ್ಡ ಕಲ್ಲು ತೂರಿದ್ದರು. ಇದ್ದಾಗಿದ್ದು 2015 ರಲ್ಲಿ. ಘಟನೆ ನಡೆದಾಗ ಯಶ್ ಕಾರಿನಲ್ಲಿ ಇರಲಿಲ್ಲ. ಯಶ್ ಸ್ನೇಹಿತರು ಕಾರನ್ನ ತೆಗೆದುಕೊಂಡು ಶೇಷಾದ್ರಿಪುರಂಗೆ ಬಂದಿದ್ದರು. ಕಾರನ್ನ ಹಿಂಬಾಲಿಸಿ ಆಟೋ ಮತ್ತು ಪಲ್ಸರ್ ಬೈಕ್ ನಲ್ಲಿ ಬಂದ ಯುವಕರು 'ಯಶ್ ಎಲ್ಲಿ' ಅಂತ ಕೇಳಿದ್ದಾರೆ. ಯಶ್ ಸ್ನೇಹಿತರು 'ಇಲ್ಲಾ' ಅಂದಿದ್ದಾರೆ. ಅದಾಗಲೇ ಕುಡಿದ ಮತ್ತಿನಲ್ಲಿದ್ದ ದಾಂಡಿಗರು ಕಾರಿನ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದರು. ದಾಳಿ ಮಾಡಿದವರ ಗುರುತು ಮತ್ತು ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಯಶ್ ಪೊಲೀಸರ ಬಳಿ ದೂರು ದಾಖಲಿಸಿರಲಿಲ್ಲ. ಆದ್ರೆ, ಮುಂಜಾಗ್ರತ ಕ್ರಮವಾಗಿ ಪೊಲೀಸ್ ಪ್ರೊಟೆಕ್ಷನ್ ನೀಡಲಾಗಿತ್ತು.

  English summary
  Rocking Star Yash revealed the complete details about the attack on his car which happened in 2015. Read the article to know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X