»   » ಲಕ್ಷಗಟ್ಟಲೇ ವೀಕ್ಷಕರನ್ನು ಸಂಪಾದಿಸಿದ 'ಅಣ್ಣಂಗೆ ಲವ್ ಆಗಿದೆ'

ಲಕ್ಷಗಟ್ಟಲೇ ವೀಕ್ಷಕರನ್ನು ಸಂಪಾದಿಸಿದ 'ಅಣ್ಣಂಗೆ ಲವ್ ಆಗಿದೆ'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾ ರಿಲೀಸ್ ಆಗಿ ಭಾರಿ ಸೌಂಡ್ ಮಾಡಿ ಯಶಸ್ವಿ ಪ್ರದರ್ಶನ ಕಂಡು ಕೋಟಿ ಕೋಟಿ ಬಾಚಿಕೊಂಡು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿರುವ ವಿಚಾರ ನಿಮಗೆ ಗೊತ್ತೇ ಇದೆ.

ಇದೀಗ ಅದೇ ಚಿತ್ರದ 'ಅಣ್ಣಂಗೆ ಲವ್ ಆಗಿದೆ' ಹಾಡು ಯೂಟ್ಯೂಬ್ ನಲ್ಲಿ ಸುಮಾರು 10 ಲಕ್ಷ ವೀಕ್ಷಕರನ್ನು ಸಂಪಾದಿಸುವ ಮೂಲಕ ಮತ್ತೊಂದು ಸುದ್ದಿ ಮಾಡಿದೆ. ಈ ಹಾಡನ್ನು ರಾಕಿಂಗ್ ಸ್ಟಾರ್ ಯಶ್ ಅವರೇ ಹಾಡಿದ್ದರು.[250 ಥಿಯೇಟರ್ ಗಳಲ್ಲಿ 25 ದಿನಗಳನ್ನು ಪೂರೈಸಿದ 'ಮಾಸ್ಟರ್ ಪೀಸ್']

ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ 'ಮಿ.ಅಂಡ್ ಮಿಸಸ್ ರಾಮಾಚಾರಿ' ಚಿತ್ರದ 'ಅಣ್ತಮ್ಮ' ಹಾಡನ್ನು ಹಾಡಿದ ನಂತರ ಈ ಬಾರಿ 'ಮಾಸ್ಟರ್ ಪೀಸ್' ಗೆ 'ಅಣ್ಣಂಗೆ ಲವ್ ಆಗಿದೆ' ಹಾಡನ್ನು ಹಾಡಿದ್ದರು.

ಸಂಭಾಷಣೆಕಾರರಾಗಿದ್ದ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಅವರು ಯಶ್ ಅವರ ಜೊತೆ ಡ್ಯುಯೆಟ್ ಹಾಡಿದ್ದರು.['ಮಾಸ್ಟರ್ ಪೀಸ್' ಚಿತ್ರದ ಸೂಪರ್ ಹಾಡು ಕೇಳಿ...ಒಂದ್ ಸ್ಟೆಪ್ ಹಾಕ್ಬಿಡಿ...]

ಇನ್ನು ಮಂಜು ಮಾಂಡವ್ಯ ಅವರ ಸಾಹಿತ್ಯದಲ್ಲಿ ಮೂಡಿಬಂದಿದ್ದ, ಸೂಪರ್ ಹಿಟ್ ಆಗಿ 10 ಲಕ್ಷ ವೀಕ್ಷಕರನ್ನು ಸಂಪಾದಿಸಿರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಹಲವಾರು ಸ್ಪೆಷಾಲಿಟೀಸ್ ಗಳನ್ನು ಹೊಂದಿದೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ರಾಕಿಂಗ್ ಸ್ಟಾರ್ ಯಶ್

'ಅಣ್ಣಂಗೆ ಲವ್ ಆಗಿದೆ' ಹಾಡು ಯಶ್ ಅವರ ಸಿನಿ ಬದುಕಿನಲ್ಲಿ ತುಂಬಾ ಮುಖ್ಯ ಪಾತ್ರ ವಹಿಸಿದ ಹಾಡಾಗಿದೆ. ಈ ಹಾಡಿನಲ್ಲಿ ಯಶ್ ಮತ್ತು ನಟಿ ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಸುಮಾರು 1000 ಸಹ ಕಲಾವಿದರು ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 1000 ಸಹ ನೃತ್ಯಗಾರರನ್ನು ಸೇರಿಸಿಕೊಂಡು ಮಾಡಿದ ಸಾಹಸ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಇದು ಮೊದಲನೇ ಬಾರಿ.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]

ಕ್ಯೂಟ್ ಶಾನ್ವಿ ಶ್ರೀವಾತ್ಸವ್

ತೆಲುಗಿನ 'ಲವ್ಲಿ' ಚಿತ್ರದಲ್ಲಿ ಸಾಯಿ ಕುಮಾರ್ ಮಗ ನಟ ಆದಿ ಅವರ ಜೊತೆ ಮಿಂಚಿದ್ದ ನಟಿ ಶಾನ್ವಿ ಶ್ರೀವಾತ್ಸವ್ ಅವರು ತದನಂತರ ಚಿರು ಸರ್ಜಾ ಅವರ ಜೊತೆ 'ಚಂದ್ರಲೇಖ' ಚಿತ್ರದಲ್ಲಿ ಮಿಂಚಿದ್ದರು. ಇದೇ ಮೊದಲ ಬಾರಿಗೆ ಯಶ್ ಅವರ ಜೊತೆ 'ಮಾಸ್ಟರ್ ಪೀಸ್' ಚಿತ್ರದಲ್ಲಿ ನಟಿಸಿದ್ದರು.

ಬೆಸ್ಟ್ ಕೆಮಿಸ್ಟ್ರಿ

ಯಶ್ ಅವರು ಹಾಡಿರುವ 'ಅಣ್ಣಂಗೆ ಲವ್ ಆಗಿದೆ' ಹಾಡಿನಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಮತ್ತು ಯಶ್ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದು, ತೆರೆಯ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಖತ್ತಾಗೆ ವರ್ಕೌಟ್ ಆಗಿತ್ತು.

ಕೊರಿಯೋಗ್ರಾಫರ್ ಮುರಳಿ

ಕನ್ನಡ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರು ಯಶ್ ಮತ್ತು ಶಾನ್ವಿ ಅವರ 'ಅಣ್ಣಂಗೆ ಲವ್ ಆಗಿದೆ' ಹಾಡಿನ ನೃತ್ಯಕ್ಕೆ, ನೃತ್ಯ ನಿರ್ದೇಶನ ಮಾಡಿದ್ದರು. (ಚಿತ್ರದಲ್ಲಿ: ಹಾಡಿನ ಮೇಕಿಂಗ್ ಸಂದರ್ಭದಲ್ಲಿ ಯಶ್ ಕಂಡಿದ್ದು ಹೀಗೆ).

ನಿರ್ದೇಶಕ ಮಂಜು ಮಾಂಡವ್ಯq

ಇಲ್ಲಿಯವರೆಗೆ ಸಂಭಾಷಣೆಗಾರರಾಗಿದ್ದ ಮಂಜು ಮಾಂಡವ್ಯ ಅವರು ಇದೇ ಮೊದಲ ಬಾರಿಗೆ ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಮೊದಲು ಯಶ್ ಅವರ ಜೊತೆ 'ರಾಜಾಹುಲಿ' ಚಿತ್ರದಲ್ಲಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದರು.

ಹಾಡಿನ ವಿಡಿಯೋ ನೋಡಿ

ಸೂಪರ್ ಹಿಟ್ 'ಅಣ್ಣಂಗೆ ಲವ್ ಆಗಿದೆ' ಹಾಡಿನ ವಿಡಿಯೋ ಝಲಕ್ ಇಲ್ಲಿದೆ ನೋಡಿ..

English summary
Kannada Actor Yash's 'Annange Love Aagidhe' Song from 'Masterpiece' Crosses 10 Lakh Views. Actor Yash, Actress Shanvi Srivastava in the lead role. The movie is directed by Manju Mandavya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada