»   » 'ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!'

'ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಗೆ ಸಂಕಷ್ಟ ಎದುರಾಗಿದೆ. ಕಳೆದ ಒಂದು ವರ್ಷದಿಂದ ಬಾಡಿಗೆ ಕಟ್ಟದ ಆರೋಪ ನಟ ಯಶ್ ಮತ್ತು ಕುಟುಂಬದ ವಿರುದ್ಧ ಕೇಳಿ ಬಂದಿದೆ.

ಬಾಡಿಗೆ ಕೇಳೋಕೆ ಅಂತ ಮನೆಗೆ ಹೋದರೆ, ಮನೆ ಮಾಲೀಕರ ಮೇಲೆ ದಬ್ಬಾಳಿಕೆ ಮಾಡಿ 'ಗೆಟ್ ಔಟ್' ಅಂತ ಹೊರಗೆ ಕಳುಹಿಸಿ ಜೀವ ಬೆದರಿಕೆ ಹಾಕಿದ್ದಾರಂತೆ ಯಶ್ ತಾಯಿ ಪುಷ್ಪ. ಹಾಗಂತ ಮನೆ ಮಾಲೀಕರಾಗಿರುವ ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಆರೋಪಿಸಿದ್ದಾರೆ. [ಬಯಲಾಯ್ತು ಯಶ್ ಕುಟುಂಬದ 'ಕಿರಾತಕ' ಮುಖ]

ಇದೇ ವಿಚಾರವಾಗಿ ಗಿರಿನಗರ ಪೊಲೀಸ್ ಸ್ಟೇಷನ್ ಮತ್ತು ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಟ ಯಶ್ ಮತ್ತು ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಇಷ್ಟೆಲ್ಲಾ ರಗಳೆಯ ನಂತ್ರ ''ಇದು ಯಶ್ ಇಮೇಜ್ ಗೆ ಮಾಡುತ್ತಿರುವ ಡ್ಯಾಮೇಜ್'' ಅಂತ ಯಶ್ ತಾಯಿ ಪುಷ್ಪ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ, ಪುಷ್ಪ ಅವರ ಪ್ರತಿಕ್ರಿಯೆ ಏನು? ಅದನ್ನ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

''ನಮಗೆ ಗೊತ್ತಿಲ್ಲ''

''ನೋಟಿಸ್ ಕೊಟ್ಟಿದ್ದು ಅವರು. ಲಾಯರ್ ಹತ್ರ ಹೋಗಿ ಬಂದಿದ್ದೀವಿ. ಪೊಲೀಸ್ ಸ್ಟೇಷನ್ ಗೂ ಹೋಗಿ ಲೆಟರ್ ಕೊಟ್ಟು ಬಂದಿದ್ದೀವಿ. ಅವರು ನಮ್ಮ ಜೊತೆ ಚೆನ್ನಾಗೇ ಇದ್ದರು. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ.'' ಅಂತ ಖಾಸಗಿ ವಾಹಿನಿಗಳಿಗೆ ಯಶ್ ತಾಯಿ ಪುಷ್ಪ ಹೇಳಿಕೆ ನೀಡಿದ್ದಾರೆ.

''ಮಗನ ಇಮೇಜ್ ಡ್ಯಾಮೇಜ್ ಮಾಡ್ತೀವಿ''

''ನಿಮ್ಮ ಮಗ ಸೆಲೆಬ್ರಿಟಿ. ನಾವು ಚಾನೆಲ್ ಗೆ ಹೋಗ್ತೀವಿ. ನಿಮ್ಮ ಮಗನಿಗೆ ಹೆಸರು ಬಂದಿದೆ. ಅವರ ಇಮೇಜ್ ನ ಡ್ಯಾಮೇಜ್ ಮಾಡ್ತೀವಿ. ನಿಮ್ಮ ಮನೆ ಪಾತ್ರೆಯೆಲ್ಲಾ ಆಚೆಗೆ ಹಾಕ್ತೀವಿ. ನಮ್ಮ ಕಡೆ ತುಂಬಾ ಜನ ಇದ್ದಾರೆ'' ಅಂತ ಮನೆ ಮಾಲೀಕರು ನಮಗೆ ಬೆದರಿಕೆ ಹಾಕಿದರು ಅಂತ ಹೇಳ್ತಾರೆ ಯಶ್ ತಾಯಿ ಪುಷ್ಪ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

ಯಶ್ ಗೂ-ಇದಕ್ಕೂ ಟಚ್ ಇಲ್ಲ!

''ನಾವು ಇಲ್ಲಿಗೆ ಬಂದು ನಾಲ್ಕೈದು ವರ್ಷ ಆಯ್ತು. ಯಶ್ ಗೂ ಇದಕ್ಕೂ ಟಚ್ ಇಲ್ಲ. ಬಾಡಿಗೆ ತೆಗೆದುಕೊಳ್ಳುವುದಕ್ಕೆ ಅವರೇ ಬರ್ತಾಯಿಲ್ಲ. ಬಾಡಿಗೆ ಕೊಡುವುದಕ್ಕೆ ನಾವು ರೆಡಿ ಇದ್ದೀವಿ'' - ಯಶ್ ತಾಯಿ ಪುಷ್ಪ. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

''ಮನೆ ಖಾಲಿ ಮಾಡೋಕೆ ಆಗಲ್ಲ''

''ಗಲಾಟೆ ಶುರುಮಾಡಿದ್ದೇ ಅವರು. ನಾವಲ್ಲ. ಬಾಡಿಗೆ ಕಟ್ಟಿಲ್ಲ ಅನ್ನುವುದಕ್ಕೆ ಅವರು ದಾಖಲೆ ತೋರಿಸಲಿ. ನಾವೀಗ ಎಮರ್ಜೆನ್ಸಿಯಾಗಿ ಖಾಲಿ ಮಾಡೋಕೆ ಆಗಲ್ಲ. ನಮಗೂ ತೊಂದರೆ ಆಗುತ್ತೆ. ಅದಕ್ಕೆ ಟೈಮ್ ಕೇಳಿದ್ದೇವೆ. ಬಾಡಿಗೆ ಏನೇ ಇದ್ದರೂ ಕಟ್ಟಿ ಕೊಡುತ್ತೇವೆ'' - ಯಶ್ ತಾಯಿ ಪುಷ್ಪ.

ಕರ್ನಾಟಕದವರು ಚೀಪಂತೆ..!

''ಮನೆ ಮಾಲೀಕರು ಕರ್ನಾಟಕ ಜನತೆಯನ್ನ ಹೀನಾಯವಾಗಿ ಬೈದರು. ನೀವು ಚೀಪ್ ಮೆಂಟಾಲಿಟಿ ಜನ. ನಾವು ಆಂಧ್ರದವರು. ನಿಮ್ಮನ್ನ ಖಾಲಿ ಮಾಡಿಸೋದು ದೊಡ್ಡ ವಿಷಯ ಅಲ್ಲ ಅಂದ್ರು. ಅದಕ್ಕೆ ಗೆಟ್ ಔಟ್ ಅಂದಿದ್ದು ನಿಜ. ಈ ಕಿತ್ತಾಟ ಆರು ತಿಂಗಳಿನಿಂದ ನಡೆಯುತ್ತಿದೆ. ಬಾಡಿಗೆ ಕೊಡುತ್ತೇವೆ, ಪರಿಹಾರ ಮಾಡಿಕೊಳ್ಳೋಣ ಅಂದರೂ ಅವರು ರೆಡಿಯಿಲ್ಲ. ಕೋರ್ಟ್ ಗೆ ಹೋಗಿದ್ದಾರೆ. ಈಗ ಎಲ್ಲಾ ಚಾನೆಲ್ ಗಳಿಗೂ ಬಂದಿದ್ದಾರೆ'' - ಯಶ್ ತಾಯಿ ಪುಷ್ಪ.

ಕೋರ್ಟ್ ಗೆ ಹಾಜರಾಗುವಂತೆ ಸೂಚನೆ

ಬಾಡಿಗೆ ಕಟ್ಟದ ಆರೋಪದ ಮೇಲೆ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಮನೆ ಅಗ್ರೀಮೆಂಟ್ ಯಶ್ ಅವರ ತಾಯಿ ಪುಷ್ಪ ಹೆಸರಿನಲ್ಲಿರುವ ಕಾರಣ, ಮುಂದಿನ ವಿಚಾರಣೆಯಂದು ಕೋರ್ಟ್ ಗೆ ಹಾಜರಾಗುವಂತೆ ಪುಷ್ಪ ಅವರಿಗೆ ಸಿಟಿ ಸಿವಿಲ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

21 ಲಕ್ಷ ರೂಪಾಯಿ ಕೊಡಬೇಕು..!

4 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಕಳೆದು, ಬರೋಬ್ಬರಿ 21,37,972 ರೂಪಾಯಿಗಳನ್ನ ಮನೆ ಮಾಲೀಕರಿಗೆ ಯಶ್ ಮತ್ತು ಕುಟುಂಬ ನೀಡಿ, ಮನೆ ಖಾಲಿ ಮಾಡಿಕೊಡಬೇಕು ಅನ್ನೋದು ಡಾ.ಮುನಿಪ್ರಸಾದ್ ಅವರ ಬೇಡಿಕೆ.

English summary
Kannada Actor Yash is in news for not paying his house rent. The issue is in City Civil Court. Meanwhile, Yash's mother Pushpa has reacted to the media. Read the article to know Pushpa's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada