Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಯಲಾದ ಯಶ್ ಮನೆ ಬಾಡಿಗೆ 'ಡ್ರಾಮಾ'
ಎಲ್ಲಾ ಸುದ್ದಿ ವಾಹಿನಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚುತ್ತಿದ್ದಾರೆ. ಅದು ಮನೆ ಬಾಡಿಗೆ ಕಟ್ಟದ ಆರೋಪದ ಮೇಲೆ.
ಟಾಪ್ ಸ್ಟಾರ್ ಆಗಿ ಅಗ್ರ ಶ್ರೇಯಾಂಕದಲ್ಲಿರುವ ನಟ ಯಶ್ ಗೆ ಬಾಡಿಗೆ ಕಟ್ಟುವಷ್ಟು ದುಡ್ಡು ಇಲ್ವಾ ಅಂತ ನೀವು ಕೇಳ್ಬಹುದು. ಅದ್ರೆ, ಅಸಲಿ ಸಂಗತಿ ಏನು ಅಂದ್ರೆ, ಈಗ ವಿವಾದ ಸೃಷ್ಟಿಸುತ್ತಿರುವ ಬನಶಂಕರಿ 3ನೇ ಹಂತದಲ್ಲಿರುವ ಡಾ.ಮುನಿಪ್ರಸಾದ್ ಮಾಲೀಕತ್ವದ ಮನೆಯಲ್ಲಿ ಯಶ್ ಮತ್ತು ಕುಟುಂಬ ವಾಸವಿಲ್ಲ..!
21 ಲಕ್ಷ ರೂಪಾಯಿ ಬಾಡಿಗೆ ಹಣ ಬಾಕಿ ಇರುವುದು ಮನೆ ಮಾಲೀಕರಿಗೆ ಸಮಸ್ಯೆಯೇ ಅಲ್ಲ. ಅವರಿಗೆ ಅವರ ಮನೆ ಬೇಕು. ಅದನ್ನ ಯಶ್ ಮತ್ತು ಕುಟುಂಬ ನೀಡುತ್ತಿಲ್ಲ. ಇದಕ್ಕೆ ಕಾರಣ ಏನು? ವಾಸವಿಲ್ಲದೇ, ಇತ್ತ ಬಾಡಿಗೆ ಕೊಡದೆ, ಮನೆಯನ್ನ ಬಿಟ್ಟುಕೊಡದೆ ಯಶ್ ಮತ್ತು ಕುಟುಂಬ ಸತಾಯಿಸುತ್ತಿರುವುದೇಕೆ? ಆ ಅಸಲಿ ಸತ್ಯ ಇಲ್ಲಿದೆ. ಮುಂದೆ ಓದಿ.....

ಮೊದಲು ಬಾಡಿಗೆ ಮನೆಯಲ್ಲಿದ್ದ ಯಶ್ ಮತ್ತು ಕುಟುಂಬ
ಬಣ್ಣದ ಲೋಕದಲ್ಲಿ ಯಶ್ ಹೆಸರು ಮಾಡುವುದಕ್ಕೆ ಶುರುವಾದ ಮೇಲೆ, ಘನತೆಗೆ ತಕ್ಕಂತೆ ದೊಡ್ಡ ಮನೆ ಇರಬೇಕು ಅನ್ನುವ ಕಾರಣಕ್ಕೆ 5 ನೇ ಕ್ರಾಸ್, 3 ನೇ ಬ್ಲಾಕ್, 3 ನೇ ಹಂತ, ಬನಶಂಕರಿಯಲ್ಲಿರುವ ನಂ.755 ನೇ ಮನೆಯಲ್ಲಿ 2010 ರಿಂದ ನಟ ಯಶ್ ಮತ್ತು ಕುಟುಂಬ ಬಾಡಿಗೆಗೆ ವಾಸವಿತ್ತು. [ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"]

ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಶಿಫ್ಟ್..!
ಕಳೆದ ಒಂದು ವರ್ಷದಿಂದ ಈಗ ವಿವಾದ ಸೃಷ್ಟಿಸುತ್ತಿರುವ ಮನೆಯಲ್ಲಿ ಯಶ್ ಮತ್ತು ಕುಟುಂಬ ವಾಸವಿಲ್ಲ. ಅಲ್ಲಿಂದ ಕೊಂಚ ದೂರ, ಅಂದ್ರೆ ಮೂರು ರಸ್ತೆಗಳ ಅಂತರದಲ್ಲಿ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಸ್ವಂತ ಮನೆಯನ್ನ ಯಶ್ ಖರೀದಿಸಿದ್ದಾರೆ. ಸ್ವಂತ ಮನೆಯಲ್ಲೇ ಈಗ ಎಲ್ಲರೂ ವಾಸ ಇದ್ದಾರೆ. ನಿನ್ನೆ ಯಶ್ ತಾಯಿ ಪುಷ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೂ ಕೂಡ ಅವರ ಸ್ವಂತ ಮನೆಯಲ್ಲೇ..! [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

ವಾಸವಿಲ್ಲ..! ಆದರೂ ಬಿಟ್ಟುಕೊಡುವುದಿಲ್ಲ..!
ಸ್ವಂತ ಮನೆ ಖರೀದಿಸಿ, ಇಡೀ ಕುಟುಂಬ ಅಲ್ಲಿಗೆ ಶಿಫ್ಟ್ ಆಗಿದ್ದರೂ, ಯಶ್ ಮತ್ತು ಕುಟುಂಬ ಈ ಮನೆಯನ್ನ ಬಿಟ್ಟುಕೊಡುತ್ತಿಲ್ಲ. ಬನಶಂಕರಿಯ ಮನೆಯಿಂದ ಯಶ್ ಗೆ ಏಳಿಗೆ ಸಿಕ್ಕಿದೆ. ಅದನ್ನ ಬಿಡಬಾರದು, ಆಫೀಸ್ ಆಗಿ ಪರಿವರ್ತಿಸಬೇಕು ಅನ್ನೋದು ಯಶ್ ಮತ್ತು ಕುಟುಂಬದ ಪ್ಲಾನ್. ಇದನ್ನ ಆಪ್ತರ ಬಳಿ ಯಶ್ ಹೇಳಿಕೊಂಡಿದ್ದಾರೆ ಕೂಡ. [ಯಶ್ ಮನೆ ಬಾಡಿಗೆ ರಂಪ ; ಹಿಂದಿರುವ ಪಿತೂರಿ ಯಾರದ್ದು?]

ಆಫೀಸ್ ಮಾಡೋಕೆ ಬಿಡಲ್ಲ.!
''ಬಾಡಿಗೆ ಕೊಟ್ಟಿರುವುದು ವಾಸ ಇರುವುದಕ್ಕೆ. ಆಫೀಸ್ ಮಾಡುವುದಕ್ಕೆ ನಾವು ಬಿಡಲ್ಲ. ಈಗಾಗಲೇ ಅವರು ಅನಧಿಕೃತವಾಗಿ ಚಿಟ್ ಫಂಡ್ ನಡೆಸುತ್ತಿದ್ದಾರೆ. ಅವರ ವ್ಯವಹಾರಕ್ಕೆ ನಮ್ಮ ಮನೆ ಯಾಕೆ ಬೇಕು?'' ಅನ್ನೋದು ಮನೆ ಮಾಲೀಕರ ಪ್ರಶ್ನೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

''ನಮ್ಮ ಮನೆ ಬಿಟ್ಟುಕೊಡಿ''
ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಸ್ಪಷ್ಟವಾಗಿ ಹೇಳಿದ್ದಿಷ್ಟು - ''ನಮಗೆ ನಮ್ಮ ಮನೆ ಬೇಕು. ಅವರು ಖಾಲಿ ಮಾಡಿದರೆ ಸಾಕು. ಮಗಳ ಮದುವೆ ಇದೆ. ಅವರಿಗೆ ನಾವು ಮನೆ ಕೊಡಬೇಕು''. [ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]

''ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ!''
''ನನ್ನ ನೇಟಿವಿಟಿ ಕನ್ನಡ. ನಾನು ಕನ್ನಡ ಜನತೆಗೆ ಸಲ್ಯೂಟ್ ಮಾಡ್ತೀನಿ. ನಾನು ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಕರ್ನಾಟಕ ಸರ್ಕಾರ ಈಸ್ ಬೆಸ್ಟ್. ವಿನಾಕಾರಣ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ'' ಅಂತ ಡಾ.ವನಜಾ ಹೇಳುತ್ತಾರೆ.['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

''ಯಶ್ ತುಂಬಾ ಒಳ್ಳೆಯವರು''
''ಯಶ್ ತುಂಬಾ ಪೊಲೈಟ್ ವ್ಯಕ್ತಿ. ತುಂಬಾ ಒಳ್ಳೆಯವರು. ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ 5 ಬಾರಿ ನೋಡಿದ್ದೀನಿ. ಅವರಿಗೂ ಈ ವಿವಾದಕ್ಕೂ ಸಂಬಂಧ ಇಲ್ಲ. ಅವರು ನಮಗೆ ಧಮ್ಕಿ ಹಾಕಿಲ್ಲ. ಇದಕ್ಕೆಲ್ಲಾ ಅವರ ತಾಯಿನೇ ಕಾರಣ. ಯಶ್ ಗೆ ಫೋನ್ ಮಾಡಿದಾಗ ಅವರ ನಂಬರ್ ಡೈವರ್ಟ್ ಆಗಿರ್ತಿತ್ತು'' - ಡಾ.ವನಜಾ ['ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!']

Renovation ಮಾಡಿಸಿಲ್ಲ..!
''ಯಶ್ ತಾಯಿ 40 ಲಕ್ಷ ರೂಪಾಯಿ ಕೊಟ್ಟು Interior Renovation ಮಾಡಿಸಿದ್ದೀವಿ ಅಂತಾರೆ. ಆದ್ರೆ, ಆ ತರಹ ಆಗಿಲ್ಲ. ನಮ್ಮದು ಹೊಸ ಮನೆ. ಎಲ್ಲಾ ನಾವೇ ಮಾಡಿಸಿ ಕೊಟ್ಟಿದ್ವಿ. ಇದೆಲ್ಲಾ ಸುಳ್ಳು'' - ಡಾ.ವನಜಾ.

'ಮನೆ ಖಾಲಿ ಮಾಡದೆ ಸತಾಯಿಸುತ್ತಿದ್ದಾರೆ'
''ಮನೆ ಖಾಲಿ ಮಾಡಿ ಅಂತ ಹೋದ ವರ್ಷ ಹೇಳಿದಾಗ, ಮಗಳ ಮದುವೆ ಅಂತ ಮೊದಲು ಅಂದ್ರು. ನಂತ್ರ ಮಗಳಿಗೆ ಮಗು ಆಯ್ತು ಅಂದ್ರು. ಈ ವರ್ಷ ಯಶ್ ಬರ್ತಡೆ ಅಂದ್ರು. ಹೀಗೆ ಕಾಲ ಹಾಕುತ್ತಾ ಬರ್ತಿದ್ದಾರೆ. 2011ರಲ್ಲೇ ಅವರ ಅಗ್ರೀಮೆಂಟ್ ಮುಗಿದಿದೆ. ಇನ್ನೂ ನಮಗೆ ಮನೆ ಬಿಟ್ಟುಕೊಡುತ್ತಿಲ್ಲ. ಕಾದು ಕಾದು ಸಾಕಾಗಿದೆ'' - ಡಾ.ವನಜಾ.

'ಕೈಕಾಲು ತೆಗೆಸ್ತೀವಿ. ನಿಮ್ಮನ್ನ ಮುಗಿಸ್ತೀವಿ'
''ನಮ್ಮ ಅಭಿಮಾನಿಗಳು ಜೋರಾಗಿದ್ದಾರೆ. ನಿಮ್ಮ ಕೈಕಾಲು ತೆಗಿಸ್ತೀವಿ. ನಿಮ್ಮನ್ನ ಮುಗಿಸ್ತೀವಿ ಅಂತ ಯಶ್ ತಾಯಿ ನಮಗೆ ಧಮ್ಕಿ ಹಾಕುತ್ತಾರೆ'' - ಡಾ.ವನಜಾ

ಬಾಡಿಗೆ ಕೊಡ್ತಾರಾ? ಮನೆ ಬಿಡ್ತಾರಾ?
ಮೂಲಗಳ ಪ್ರಕಾರ ಮನೆ ಬಿಟ್ಟುಕೊಡುವುದಕ್ಕೆ ಯಶ್ ಮತ್ತು ಕುಟುಂಬ ರೆಡಿಯಿಲ್ಲ. ಬಾಕಿ ಬಾಡಿಗೆ ತೀರಿಸಿ, ಸೆಟ್ಲ್ ಮಾಡಿಕೊಳ್ಳೋಕೆ ತಯಾರಿದ್ದಾರೆ. ಮುಂದಕ್ಕೆ ಹೆಚ್ಚು ಬಾಡಿಗೆ ಕೊಡುವುದಕ್ಕೂ ಸಿದ್ಧ. ಆದ್ರೆ, ಮನೆ ಮಾಲೀಕರಿಗೆ ಬಾಡಿಗೆ ಹಣಕ್ಕಿಂತ ಹೆಚ್ಚಾಗಿ ಮನೆ ಬೇಕಾಗಿದೆ. ಅದನ್ನ ಇವರು ಬಿಟ್ಟುಕೊಡಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಮುಂದಕ್ಕೆ ಯಾವ ತಿರುವು ಪಡೆದುಕೊಳ್ಳುವುದೋ, ನೀವೇ ಕಾದು ನೋಡಿ....