»   » ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

Posted By:
Subscribe to Filmibeat Kannada
ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ನೇರ ನುಡಿ | Filmibeat Kannada

ಚುನಾವಣೆ ಸಮೀಪ ಬರುತ್ತಿದ್ದಂತೆ ಸಿನಿಮಾರಂಗದ ಸ್ಟಾರ್ ಗಳು ರಾಜಕೀಯ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡಲು ಶುರುವಾಗುತ್ತೆ. ಸ್ಪರ್ಧೆ ಮಾಡಲಿಲ್ಲ ಅಂದರು ರಾಜಕೀಯ ವ್ಯಕ್ತಿಗಳ ಪರವಾಗಿ ಪ್ರಚಾರಕ್ಕೆ ಸ್ಟಾರ್ ಗಳನ್ನ ಕರೆತರುವುದು ಸರ್ವೇ ಸಾಮಾನ್ಯ. ಈಗಾಗಲೇ ಮಾಲಾಶ್ರೀ, ಸಾಧುಕೋಕಿಲ ಇನ್ನೂ ಅನೇಕರು ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಯಶೋಮಾರ್ಗ ಸಂಸ್ಥೆ ಆರಂಭ ಮಾಡಿ ಜನರ ಸೇವೆಗೆ ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಈ ಚುನಾವಣೆಯಲ್ಲಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸಾಕಷ್ಟು ಪೊಲಿಟಿಕಲ್ ಲೀಡರ್ ಗಳ ಸ್ನೇಹ ಹೊಂದಿರುವ ಯಶ್ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲವಂತೆ.

ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ

Yash said he would not campaign for any political party and person

ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರ ದ ಮುಹೂರ್ತ ದ ಸಂದರ್ಭದಲ್ಲಿ ಭಾಗಿ ಆಗಿದ್ದ ಯಶ್ "ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗಿತ್ತಿಲ್ಲ.ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು, ಇಲ್ಲವೇ ನನಗೆ ಅಂತವರ ಬಗ್ಗೆ ಗೋತ್ತಿರಬೇಕು.

Yash said he would not campaign for any political party and person

ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ.ಪಕ್ಷದ ಪ್ರಚಾರಕ್ಕೆ ಹೋಗುವುದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ". ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಒಟ್ಟಾರೆ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳ ಮಧ್ಯೆ ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ ಎಂದು ಯಶ್ ನೇರವಾಗಿ ಹೇಳಿದ್ದಾರೆ.

ಟ್ರೆಂಡ್ ಆಯ್ತು ಶರಣ್ ಹಾಡಿದ ಉತ್ತರ ಕರ್ನಾಟಕದ ಜವಾರಿ ಹಾಡು

English summary
Kannada actor Rocking star Yash said he would not campaign for any political party and person and I do not like being personally involved in the political campaign,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X