For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್

  |

  ಸಿ ಎಂ ಯಡಿಯೂರಪ್ಪ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಚಿತ್ರರಂಗದ ಬಹು ವರ್ಷದ ಕನಸಾಗಿದ್ದ ಫಿಲ್ಮ್ ಸಿಟಿಗೆ 500 ಕೋಟಿ ಅನುದಾನ ಘೋಷಿಸಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿಯೆ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

  ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು: ನಟ ಯಶ್ | Yash | Mysore | Film City | Filmibeat Kannada

  ಈ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಚಿತ್ರರಂಗದ ಪರವಾಗಿ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯಶ್ ಫಿಲ್ಮ್ ಸಿಟಿ ಮೈಸೂರಿನಲ್ಲಿ ಆದರೆ ಒಳ್ಳೆಯದು ಎಂದಿದ್ದಾರೆ. ಮುಂದೆ ಓದಿ..

  ರಾಜ್ಯ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿ ಸುದ್ದಿ ನೀಡಿದ ಯಡಿಯೂರಪ್ಪರಾಜ್ಯ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿ ಸುದ್ದಿ ನೀಡಿದ ಯಡಿಯೂರಪ್ಪ

  ಅವತ್ತೆ ಹೇಳಿದ್ದರು ಸಿಎಂ

  ಅವತ್ತೆ ಹೇಳಿದ್ದರು ಸಿಎಂ

  ಅಂತರಾಷ್ಟ್ರೀಯ ನಲನಚಿತ್ರೋತ್ಸವದಲ್ಲಿ ಮಾತನಾಡಿದ್ದ ಯಶ್ ಫಿಲ್ಮ್ ಸಿಟಿ ನಿರ್ಮಾಣ ಮಾಡಿ ಎಂದು ಸಿ ಎಂ ಬಳಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಹೇಳಿದ ಯಶ್ "ತಕ್ಷಣ ಮಾಡುತ್ತೇನೆ ಎಂದು ಮೊನ್ನೆಯಷ್ಟೆ ಸಿಎಂ ಹೇಳಿದ್ದರು. ಈ ಬಾರಿಯ ಬಜೆಟ್ ನಲ್ಲಿಯೆ ಮಾಡುತ್ತೇನೆ ಎಂದಿದ್ದರು. ಹಾಗೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.

  ಸಿನಿಮಾ ಎಜುಕೇಶನ್ ಇರಬೇಕು

  ಸಿನಿಮಾ ಎಜುಕೇಶನ್ ಇರಬೇಕು

  "ನಮ್ಮಲ್ಲಿ ವ್ಯವಸ್ಥೆ ಚೆನ್ನಾಗಿ ಇದ್ದಾರೆ ಸಿನಿಮಾ ಕಲಿಕೆಗೆ ಅವಕಾಶ ಸಿಗುತ್ತೆ. ದೊಡ್ಡದಾಗಿ ಯೋಚನೆ ಮಾಡಲು ಸಾಧ್ಯವಾಗುತ್ತೆ. ಇನ್ನು ಒಂದಿಷ್ಟು ವ್ಯವಸ್ತೆ ಆಗಬೇಕು. ಮುಖ್ಯವಾಗಿ ಸಿನಿಮಾ ಎಜುಕೇಶನ್ ತರ ಆಗಬೇಕು. ಕ್ರಿಯೆಟವ್ ಇರೋರಿಗೆ ಸಿನಿಮಾ ಒಳ್ಳೆಯ ಉದ್ಯಮ. ಎಲ್ಲಾ ಚೆನ್ನಾಗಿ ಆಗಬೇಕು ಎಂದರೆ ಸರ್ಕಾರ ಕೈ ಜೋಡಿಸಬೇಕು. ಆದಷ್ಟು ಬೇಗ ಫಿಲ್ಮ್ ಸಿಟಿ ಕಾರ್ಯರೂಪಕ್ಕೆ ಬರಲಿ". ಎಂದರು.

  ಮೈಸೂರಲ್ಲ..ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ- ಅಶ್ವತ್ಥ್ ನಾರಾಯಣ್ಮೈಸೂರಲ್ಲ..ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ- ಅಶ್ವತ್ಥ್ ನಾರಾಯಣ್

  ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದರೆ ಒಳ್ಳೆಯದು

  ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದರೆ ಒಳ್ಳೆಯದು

  "ವೈಯಕ್ತಿಕವಾಗಿ ಹೇಳುವುದಾದರೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದರೆ ಒಳ್ಳೆಯದು. ಯಾಕಂದರೆ ಜನಸಂಖ್ಯೆ ಕಮ್ಮಿ ಇದೆ. ಟ್ರಾಫಿಕ್ ಕೂಡ ಇರಲ್ಲ. ಇನ್ನು ಮೈಸೂರು ಸಿನಿಮಾಗೆ ಪೂರಕವಾಗಿದೆ" ಎಂದರು. "ಎಲ್ಲಾದರು ಆಗಲಿ ಆದರೆ ರಾಜ್ಯಕ್ಕೆ ಫಿಲ್ಮ್ ಸಿಟಿ ಬೇಕು" ಎಂದು ಯಶ್ ಹೇಳಿದ್ದಾರೆ.

  ಹೆಸರಘಟ್ಟದಲ್ಲಿ ಮಾಡುವುದಾಗಿ ಹೇಳಿದ್ದರು

  ಹೆಸರಘಟ್ಟದಲ್ಲಿ ಮಾಡುವುದಾಗಿ ಹೇಳಿದ್ದರು

  ಬೆಂಗಳೂರಿನ ಹೊರವಲಯ ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ಮಾಡುವ ಪ್ಲಾನ್ ಇದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾಯಾರಣ್ ಹೇಳಿದ್ದರಂತೆ. ಈ ಬಗ್ಗೆ ಯಶ್ ಕೂಡ ಚರ್ಚೆ ಮಾಡಿರುವುದಾಗಿ ಹೇಳಿದ್ದಾರೆ. "ಹೆಸರಘಟ್ಟದಲ್ಲಿ ಆದರೆ ಟ್ರಾಫಿಕ್ ಸಮಸ್ಯೆ ಆಗುತ್ತೆ ಎಂದು ಹೇಳಿದ್ದೆ. ಹಾಗಾಗಿ ಹೆಸಘಟ್ಟಕ್ಕೆ ನೇರ ರಸ್ತೆ ಸಂಪರ್ಕ ಮಾಡುವುದಾಗಿ ಹೇಳಿದ್ದಾರೆ" ಎಂದಿದ್ದಾರೆ.

  ಸಾಕಷ್ಟು ಮಂದೆ ಹಿರಿಯರಿದ್ದಾರೆ ಡಿಸೈಡ್ ಮಾಡುತ್ತಾರೆ

  ಸಾಕಷ್ಟು ಮಂದೆ ಹಿರಿಯರಿದ್ದಾರೆ ಡಿಸೈಡ್ ಮಾಡುತ್ತಾರೆ

  ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಹಿರಿಯರಿದ್ದಾರೆ. ಎಲ್ಲರೂ ಡಿಸೈಡ್ ಮಾಡಿ ನಿರ್ಧಾರ ತೆಗೆದುಕೊಳ್ಳಲಿ. ಆದರೆ ಫಿಲ್ಮ್ ಸಿಟಿ ಮಾಡಿಕೊಟ್ಟಿದ್ದಾರೆ ಎಂದು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

  Read more about: yash film city ಯಶ್
  English summary
  Kannada Actor Yash speak about Film City. He said that Film city Should be built in Mydure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X