For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅಪ್ಪನಿಗೆ ಹೀಗಾ ಮಾಡೋದು ಯಶ್ ಪುತ್ರಿ ಐರಾ

  |

  ಯಶ್ -ರಾಧಿಕಾ ಪಂಡಿತ್ ದಂಪತಿ, ಮಕ್ಕಳ ಪೋಷಣೆಯ ಪ್ರತಿ ಹಂತವನ್ನು ಎಂಜಾಯ್ ಮಾಡುತ್ತಿದ್ದಾರೆ. ಯಶ್ ತಮ್ಮ ಬ್ಯುಸಿ ಜೀವನದ ನಡುವೆಯೂ ಮಕ್ಕಳಿಗಾಗಿ ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ.

  ಅಪ್ಪನಿಗೆ ಚಮಕ್ ಕೊಟ್ಟ ಐರಾ | Filmibeat Kannada

  ಯಶ್-ರಾಧಿಕಾ ಇಬ್ಬರೂ ಸಹ ತಮ್ಮ ಮಕ್ಕಳೊಂದಿಗಿನ ಕಳೆವ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

  ಇಂದು (ಅಕ್ಟೋಬರ್ 25) ರಂದು ಯಶ್ ತಮ್ಮ ಮುದ್ದು ಮಗಳು ಐರಾ ಜೊತೆಗಿನ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಪ್ಪ-ಮಗಳ ತಮಾಷೆಯ ವಿಡಿಯೋ ಬಹಳ ಸುಂದರವಾಗಿದೆ. ಕೆಲವೇ ನಿಮಿಷಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

  ಅಪ್ಪನಿಗೆ ಐಸ್‌ಕ್ರೀಂ ತಿನ್ನಿಸದ ಐರಾ

  ಯಶ್ ಮಗಳು ಐರಾ ಐಸ್‌ಕ್ರೀಂ ತಿನ್ನುತ್ತಿದ್ದಾಳೆ. ಯಶ್, ಪದೇ-ಪದೇ ಐಸ್‌ಕ್ರೀಂ ತಮಗೂ ಕೊಡುವಂತೆ ಕೇಳುತ್ತಾಳೆ. ಐರಾ ಸಹ ಸ್ಪೂನ್‌ನಲ್ಲಿ ಐಸ್‌ ಕ್ರೀಂ ಕೊಡುವಂತೆ ಮಾಡಿ ಮತ್ತೆ ತಾನೇ ತಿನ್ನುತ್ತಾಳೆ. ಈ ದೃಶ್ಯವನ್ನು ಅಮ್ಮ ರಾಧಿಕಾ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

  ರಾಧಿಕಾರನ್ನು ಫೂಲ್ ಮಾಡಿದ ಐರಾ

  ರಾಧಿಕಾರನ್ನು ಫೂಲ್ ಮಾಡಿದ ಐರಾ

  ಯಶ್‌ ಗೆ ಮಾತ್ರವಲ್ಲ ಅಮ್ಮ ರಾಧಿಕಾ ಗೂ ಹೀಗೆ ಮಾಡಿದ್ದಾಳೆ ಐರಾ. ಅಮ್ಮನಿಗೆ ಐಸ್‌ಕ್ರೀಂ ತಿನ್ನಿಸಲು ಬರುವ ಐರಾ ಮತ್ತೆ ತಾನೇ ತಿಂದು ಅಮ್ಮನನ್ನೂ ಫೂಲ್ ಮಾಡುತ್ತಾಳೆ. ಮಗಳ ಈ ಆಟ ನೋಡಿ ನಕ್ಕಿದ್ದಾರೆ ಯಶ್-ರಾಧಿಕಾ ದಂಪತಿ.

  ಅಪ್ಪನಿಂದಲೇ ಕಲಿತ 'ವಿದ್ಯೆ'

  ಅಪ್ಪನಿಂದಲೇ ಕಲಿತ 'ವಿದ್ಯೆ'

  ಆದರೆ ಮಗಳು ಈ 'ವಿದ್ಯೆ' ಕಲಿತಿದ್ದು ಅಪ್ಪನಿಂದಲೇ ಅಂತೆ. ತಾನೂ ಸಹ ಆಕೆಗೆ ಹೀಗೆ ಮಾಡುತ್ತೇನೆ, ಅದನ್ನೇ ಐರಾ ಈಗ ನನ್ನ ಮೇಲೆ ಪ್ರಯೋಗಿಸಿದ್ದಾಳೆ ಎಂದಿದ್ದಾರೆ ನಟ ಯಶ್. ಯಶ್ ಸಹ ಮಗಳಿಗೆ ಹೀಗೆಯೇ ಮಾಡುತ್ತಾರಂತೆ.

  ಹೈದರಾಬಾದ್‌ ನಲ್ಲಿ ಚಿತ್ರೀಕರಣ

  ಹೈದರಾಬಾದ್‌ ನಲ್ಲಿ ಚಿತ್ರೀಕರಣ

  ಸಿನಿಮಾ ವಿಷಯಕ್ಕೆ ಬರುವುದಾದರೆ, ಲಾಕ್‌ಡೌನ್ ಬಳಿಕ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮಂಗಳೂರಿನಲ್ಲಿ ಭರದಿಂದ ಚಿತ್ರೀಕರಣ ಮುಗಿಸಿದ ಬಳಿಕ ಈಗ ಹೈದರಾಬಾದ್‌ನಲ್ಲಿ ಚಿತ್ರೀಕರಣ ಸಾಗುತ್ತಿದೆ.

  English summary
  Actor Yash shares a funny moment with daughter Ayra in Facebook. Ayra fools Yash and Radhika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X