»   » 'ಕಾಫಿತೋಟ' ಟ್ರೇಲರ್ ನೋಡಿ ತಮ್ಮ ಧಾರಾವಾಹಿ ದಿನಗಳನ್ನು ನೆನಪಿಸಿಕೊಂಡ ಯಶ್

'ಕಾಫಿತೋಟ' ಟ್ರೇಲರ್ ನೋಡಿ ತಮ್ಮ ಧಾರಾವಾಹಿ ದಿನಗಳನ್ನು ನೆನಪಿಸಿಕೊಂಡ ಯಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಕಾಫಿತೋಟ' ಸಿನಿಮಾದ ಸದ್ದು ಜೋರಾಗಿದೆ. ಇಷ್ಟು ದಿನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ.

ಇತ್ತೀಚಿಗಷ್ಟೆ ನಟ ರಾಕಿಂಗ್ ಸ್ಟಾರ್ ಯಶ್ 'ಕಾಫಿತೋಟ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ನೋಡಿ ಸಖತ್ ಇಷ್ಟ ಪಟ್ಟ ಯಶ್ ಅವರ ಮಾತುಗಳಲ್ಲಿ ಮೆಚ್ಚುಗೆ ಸೂಚಿಸಿದರು.

ಈ ಹಿಂದೆ ನಿರ್ದೇಶಕ ಸೀತಾರಾಮ್ ಅವರ ಧಾರಾವಾಹಿಯಲ್ಲಿ ನಟಿಸಿದ್ದ ಯಶ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದರು. ಮುಂದೆ ಓದಿ...

ಅವರ ಧಾರಾವಾಹಿಯಲ್ಲಿ ನಟಿಸಿದ್ದೆ

''ಕನ್ನಡ ಟಿವಿ ಜಗತ್ತಿನಲ್ಲಿ ಕ್ರಾಂತಿ ಮಾಡಿದವರು ಅಂದರೆ ಅದು ಟಿ.ಎನ್.ಸೀತಾರಾಮ್ ಸರ್. ಯುವಕರು ಮತ್ತು ಬುದ್ದಿಜೀವಿಗಳನ್ನು ಟಿವಿ ನೋಡುವ ಹಾಗೆ ಮಾಡಿದ್ದು ಅವರ ಧಾರಾವಾಹಿಗಳು. ನಾನು ಕೂಡ ಅವರ ನಿರ್ಮಾಣದ ಒಂದು ಧಾರಾವಾಹಿಯಲ್ಲಿ ನಟಿಸಿದ್ದೆ'' - ಯಶ್, ನಟ

ಅವರ ಸಾಮರ್ಥ್ಯ ಕಾಣುತ್ತಿದೆ

''ಕಾಫಿತೋಟ ಸಿನಿಮಾದ ಟ್ರೇಲರ್ ನೋಡಿದರೆ ಅಲ್ಲಿ ಅವರ ಸಾಮರ್ಥ್ಯ ಕಾಣುತ್ತಿದೆ. ಟ್ರೇಲರ್ ನಲ್ಲಿ ಸಣ್ಣ ಸಸ್ಪೆನ್ಸ್ ಮತ್ತು ಕೋರ್ಟ್ ವಿಷಯಗಳು ಅದ್ಭುತವಾಗಿ ತುಂಬಿದೆ. ಬಹಳ ಖುಷಿ ಮತ್ತು ಹೆಮ್ಮೆಯಿಂದ ಈ ಕಾರ್ಯಕ್ರಮಕ್ಕೆ ನಾನು ಬಂದಿದ್ದೇನೆ'' - ಯಶ್, ನಟ

ತುಂಬ ನಿರೀಕ್ಷೆ ಇದೆ

''ಸೀತಾರಾಮ್ ಸರ್ ಸಿನಿಮಾ ಅಂದರೆ ಒಂದಷ್ಟು ಕುತೂಹಲ ಇರುತ್ತದೆ. ಆ ರೀತಿಯ ಅಂಶಗಳು ಇಲ್ಲಿ ಕಾಣಿಸುತ್ತಿದೆ. ಮತ್ತು ಅವರೇ ಇಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ನನಗೂ ತುಂಬ ನಿರೀಕ್ಷೆ ಇದೆ.'' - ಯಶ್, ನಟ

ಅಶೋಕ್ ಕಶ್ಯಪ್ ಕ್ಯಾಮರಾ

''ಕಾಫಿತೋಟ ಚಿತ್ರಕ್ಕೆ ಅಶೋಕ್ ಕಶ್ಯಪ್ ಅವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ಅವರ ನಿರ್ದೇಶನದ 'ನಂದ ಗೋಕುಲ' ಧಾರಾವಾಹಿಯಲ್ಲಿ ನಾನು ಮತ್ತು ರಾಧಿಕಾ ಇಬ್ಬರು ನಟಿಸುತ್ತಿದ್ವಿ. ಎಲ್ಲ ದೊಡ್ಡವರು ಸೇರಿ ಈ ಸಿನಿಮಾ ಮಾಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ.'' - ಯಶ್, ನಟ

English summary
Rocking Star Yash spoke about 'Kaafi Thota' movie trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada