For Quick Alerts
  ALLOW NOTIFICATIONS  
  For Daily Alerts

  10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'

  |
  KGF Movie : ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ ಕೆಜಿಎಫ್ ಹಾಗು ಬಾಹುಬಲಿ ಸಿನಿಮಾ | Oneindia Kannada

  ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದ 'ಬಾಹುಬಲಿ' ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಮುಗಿಯುತ್ತಾ ಬಂದರೂ, ಈ ಚಿತ್ರದ ದಾಖಲೆಗಳು ಮಾತ್ರ ಇನ್ನು ನಿಂತಿಲ್ಲ. ಭಾರತದ ಬಾಕ್ಸ್ ಅಫೀಸ್ ಚಿಂದಿ ಉಡಾಯಿಸಿದ್ದ 'ಬಾಹುಬಲಿ' ಜಗತ್ತಿನಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಸಿತ್ತು.

  ಆ ಚಿತ್ರದಂತೆ ಕನ್ನಡದ 'ಕೆಜಿಎಫ್' ಸಿನಿಮಾನೂ ಸದ್ದು ಮಾಡಿ ಅಬ್ಬರಿಸಿದೆ. ಈಗಲೂ ಅಬ್ಬರಿಸುತ್ತಲೇ ಇದೆ. ಐದು ಭಾಷೆಯಲ್ಲಿ ತೆರೆಕಂಡಿದ್ದ 'ಕೆಜಿಎಫ್' ನೂರು ಕೋಟಿಗೂ ಅಧಿಕ ಕಲೆಕ್ಷನ್ ಕಂಡ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಬರೆದು, ಇಡೀ ಭಾರತ ಕನ್ನಡದತ್ತ ನೋಡುವಾಗೆ ಮಾಡಿತ್ತು.

  ರೇಟಿಂಗ್ ನಲ್ಲಿ ಬಾಹುಬಲಿ, ಜೀರೋ, ಮಾರಿ ಚಿತ್ರಗಳನ್ನ ಹಿಂದಿಕ್ಕಿದ ಕೆಜಿಎಫ್.!

  ಇದೀಗ, ಈ ಎರಡು ಚಿತ್ರಗಳು ಬಾಲಿವುಡ್ ಇಂಡಸ್ಟ್ರಿಯಲ್ಲಿ ವಿಶೇಷವಾದ ದಾಖಲೆ ಮಾಡಿದೆ. 10 ವರ್ಷದ ಬಾಲಿವುಡ್ ಚಿತ್ರಗಳ ಪೈಕಿ 'ಕೆಜಿಎಫ್' ಮತ್ತು 'ಬಾಹುಬಲಿ' ಟಾಪ್ ಹತ್ತರಲ್ಲಿ ಸ್ಥಾನ ಪಡೆದುಕೊಂಡಿದೆ. ಮುಂದೆ ಓದಿ.....

  ಓರ್ಮ್ಯಾಕ್ಸ್ ಮೀಡಿಯಾ ರೇಟಿಂಗ್

  ಓರ್ಮ್ಯಾಕ್ಸ್ ಮೀಡಿಯಾ ರೇಟಿಂಗ್

  ಓರ್ಮ್ಯಾಕ್ಸ್ ಮೀಡಿಯಾ ಎಂಬ ಸಂಸ್ಥೆ ಪ್ರಕಟ ಮಾಡಿರುವ ಪ್ರಕಾರ, ಹತ್ತು ವರ್ಷದಲ್ಲಿ ಅತಿ ಹೆಚ್ಚು ಲೈಕ್ಸ್ ಹೊಂದಿರುವ ಚಿತ್ರಗಳ ಪೈಕಿ ಸೌತ್ ಇಂಡಿಯಾದ ಮೂರು ಚಿತ್ರಗಳು ಸ್ಥಾನ ಪಡೆದಿರುವುದು ನಿಜಕ್ಕೂ ಶ್ಲಾಘನೀಯ. ಇದರಲ್ಲಿ ಕನ್ನಡದ ಕೆಜಿಎಫ್ ಮತ್ತು ಬಾಹುಬಲಿ ಎರಡು ಭಾಗಗಳು ಸೇರಿವೆ.

  ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.!

  ಬಾಹುಬಲಿ ಎರಡೂ ಸಿನಿಮಾ ಇದೆ

  ಬಾಹುಬಲಿ ಎರಡೂ ಸಿನಿಮಾ ಇದೆ

  2009 ರಿಂದ 2019ರವರೆಗೂ ಪ್ರೇಕ್ಷಕರು ಮೆಚ್ಚಿಕೊಂಡಿರುವ ಚಿತ್ರಗಳ ಪೈಕಿ ಟಾಪ್ 10 ಸಿನಿಮಾಗಳನ್ನ ಪಟ್ಟಿ ಮಾಡಲಾಗಿದೆ. ಮೊದಲ ಸ್ಥಾನದಲ್ಲಿ ತ್ರಿ ಇಡಿಯೆಟ್ಸ್ ಇದ್ರೆ ಎರಡನೇ ಸ್ಥಾನ ಹಾಗೂ ಮೂರನೇ ಸ್ಥಾನದಲ್ಲಿ ಬಾಹುಬಲಿ-2 (85 ಅಂಕ) ಮತ್ತು ಬಾಹುಬಲಿ-1 (83 ಅಂಕ) ಸಿನಿಮಾಗಳಿವೆ. ಬಾಲಿವುಡ್ ನೆಲದಲ್ಲಿ ಸೌತ್ ಇಂಡಿಯಾ ಸಿನಿಮಾಗಳು ಕಮಾಲ್ ಮಾಡಿರುವುದು ನಿಜಕ್ಕೂ ವಿಶೇಷ.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  ಏಳನೇ ಸ್ಥಾನದಲ್ಲಿ ಕೆಜಿಎಫ್

  ಏಳನೇ ಸ್ಥಾನದಲ್ಲಿ ಕೆಜಿಎಫ್

  ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಕೂಡ ಟಾಪ್ ಹತ್ತರಲ್ಲಿ ಕಾಣಿಸಿಕೊಂಡಿರುವುದು ಬಹುದೊಡ್ಡ ಗೆಲುವು. ಕ್ವೀನ್, ಭಜರಂಗಿ ಭಾಯಿಜಾನ್ ಅಂತಹ ಸಿನಿಮಾಗಳನ್ನ ಹಿಂದಿಕ್ಕಿ ಕೆಜಿಎಫ್ (79 ಅಂಕ) ಏಳನೇ ಸ್ಥಾನ ಪಡೆದಿದೆ.

  'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

  43 ಸಿನಿಮಾಗಳು 70ಕ್ಕೂ ಹೆಚ್ಚು ಅಂಕ ಪಡೆದಿದೆ

  43 ಸಿನಿಮಾಗಳು 70ಕ್ಕೂ ಹೆಚ್ಚು ಅಂಕ ಪಡೆದಿದೆ

  ಅಂದ್ಹಾಗೆ, ಸುಮಾರು 43ಕ್ಕೂ ಅಧಿಕ ಚಿತ್ರಗಳು 70 ಅಂಕ ಪಡೆದಿವೆ. ಆದ್ರೆ, ಟಾಪ್ ಹತ್ತರಲ್ಲಿ ಸ್ಥಾನ ಪಡೆಯಲು ಆಗಲಿಲ್ಲ. ಇನ್ನುಳಿದಂತೆ ಸಂಜು, ಕ್ವೀನ್, ಭಜರಂಗಿ ಭಾಯಿಜಾನ್, ದಂಗಲ್, ಭಾಗ್ ಮಿಲ್ಕೆ ಭಾಗ್, ಬರ್ಫಿ ಚಿತ್ರಗಳು ಟಾಪ್ ಹತ್ತರಲ್ಲಿದೆ.

  English summary
  OrmaxWOM Top 10 most-liked Hindi films of 2018 based on audience Word-of-Mouth rating. 10 films cross the 70-mark in 2018, compared to only five films in 2017. Baahubali got top two position in Top 10 list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X