»   » 'ಅಣ್ತಮ್ಮ'ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

'ಅಣ್ತಮ್ಮ'ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

Posted By:
Subscribe to Filmibeat Kannada

ಕಳೆದ ವರ್ಷ 'ಮಿ.ಅಂಡ್ ಮಿಸಸ್ ರಾಮಾಚಾರಿ' ಅಂತ ಪ್ರೇಕ್ಷಕರನ್ನು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಿದಂತೆ. ಈ ವರ್ಷ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಬಾಕ್ಸಾಫೀಸ್ ನಲ್ಲಿ ರಾಕ್ ಆಗಿದ್ದಾರೆ ಅನ್ನೋದಕ್ಕೆ ಡೌಟೇ ಇಲ್ಲ.

ಟ್ರೈಲರ್ ಮತ್ತು ಪೋಸ್ಟರ್ ಗಳ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಯಶ್ ಅವರ 'ಮಾಸ್ಟರ್ ಪೀಸ್' ಗೆ ನಿನ್ನೆ (ಡಿಸೆಂಬರ್ 24) ಎಲ್ಲೆಡೆ ಅದ್ದೂರಿ ಚಾಲನೆ ದೊರೆತಿದೆ.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]

Yash starrer 'Masterpiece' collects Rs 8 crore in 1 day

ಅಂದಹಾಗೆ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಮಾಸ್ಟರ್ ಪೀಸ್' ಸಿನಿಮಾ ಒಂದೇ ದಿನದಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ? ಬರೋಬ್ಬರಿ 8 ಕೋಟಿ.

ಹೌದು ನಿನ್ನೆ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಂಡಿರುವ ಸಿನಿಮಾ ಒಂದೇ ದಿನಕ್ಕೆ 8 ಕೋಟಿ ಬಾಚಿಕೊಂಡು ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ಅಲ್ಲದೇ ಇಂದು ಕೂಡ ಅತೀ ಹೆಚ್ಚು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.['ಮಾಸ್ಟರ್ ಪೀಸ್' ಸಿನಿಮಾ ಟಿಕೆಟ್ ಗಾಗಿ ಗುಂಪುಗಳ ನಡುವೆ ಘರ್ಷಣೆ]

ಹೊರ ರಾಜ್ಯಗಳಲ್ಲಿ ಕೂಡ ಇಂದು 'ಮಾಸ್ಟರ್ ಪೀಸ್' ಸಿನಿಮಾ ತೆರೆ ಕಂಡಿದ್ದು, ಹೈದ್ರಾಬಾದ್, ಮತ್ತು ಚೆನ್ನೈನ ಮಾಯಾಜಾಲ ಚಿತ್ರಮಂದಿರದಲ್ಲಿ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.

Yash starrer 'Masterpiece' collects Rs 8 crore in 1 day

ಸದ್ಯಕ್ಕೆ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಸಿನಿಮಾ ಸ್ಯಾಂಡಲ್ ವುಡ್ ನ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿದೆ. ಜೊತೆಗೆ 'ರನ್ನ', 'ರಣವಿಕ್ರಮ'ನಿಗಿಂತ ಅಣ್ತಮ್ಮ ಡಬಲ್ ಕಲೆಕ್ಷನ್ ಮಾಡಿದ್ದಾರೆ.[ಟ್ವಿಟ್ಟರ್ ನಲ್ಲಿ 'ಮಾಸ್ಟರ್ ಪೀಸ್' ಚಿಂದಿ ಚಿತ್ರಾನ್ನ]

ಇನ್ನು ನಾಳೆಯ ದಿನ ಬೇರೆ ಬೇರೆ ಕಡೆ ಚಿತ್ರದ ಪ್ರಚಾರ ಮಾಡಲು 'ಮಾಸ್ಟರ್ ಪೀಸ್' ಚಿತ್ರತಂಡ ಪ್ಲಾನ್ ಮಾಡುತ್ತಿದ್ದು, ಬೇರೆ ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

English summary
According to the sources, Kannada Actor Yash starrer Kannada Movie 'Masterpiece' 1 Day box office collection is Rs.8 Crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada