»   » ತೆಲುಗು ತೆರೆಗೆ ರಾಕಿಂಗ್ ಸ್ಟಾರ್ ರಾಮಾಚಾರಿ!

ತೆಲುಗು ತೆರೆಗೆ ರಾಕಿಂಗ್ ಸ್ಟಾರ್ ರಾಮಾಚಾರಿ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನ ಚಿಂದಿ ಚಿತ್ರಾನ್ನ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'.

ಬರೋಬ್ಬರಿ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಇದೀಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ! [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]


Yash starrer MR and MRS Ramachari to be remade in Tollywood

ಹೌದು, ಗಾಂಧಿನಗರದಲ್ಲಿ ಪರಭಾಷೆಯ ರೀಮೇಕ್ ಚಿತ್ರಗಳದ್ದೇ ಅಬ್ಬರವಾಗಿರುವ ಈಗಿನ ಕಾಲದಲ್ಲಿ ಕನ್ನಡ ಚಿತ್ರವೊಂದು ಟಾಲಿವುಡ್ ನಲ್ಲಿ ರೆಡಿಯಾಗುತ್ತಿದೆ ಅಂದ್ರೆ ಖಂಡಿತ ಕನ್ನಡ ಸಿನಿ ಪ್ರಿಯರು ಹೆಮ್ಮೆ ಪಡಲೇಬೇಕು. [ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ']


ಅಂದ್ಹಾಗೆ, ಟಾಲಿವುಡ್ ಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ಕೊಂಡೊಯ್ಯುತ್ತಿರುವುದು 'ಮೈನಾ' ಮತ್ತು 'ಮೈತ್ರಿ' ಚಿತ್ರಗಳ ನಿರ್ಮಾಪಕ, ಕನ್ನಡಿಗ, ರಾಜ್ ಕುಮಾರ್. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ನೋಡಿ ಮನಸಾರೆ ಮೆಚ್ಚಿಕೊಂಡ ರಾಜ್ ಕುಮಾರ್, ತಕ್ಷಣ ಅದನ್ನ ತೆಲುಗಿನಲ್ಲಿ ರೀಮೇಕ್ ಮಾಡುವುದಕ್ಕೆ ನಿರ್ಧರಿಸಿದರಂತೆ.


ಹಾಗೆ ನೋಡಿದರೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರ ತೆಲುಗಿನಲ್ಲಿ 'ಕೋಡೇ ನಾಗು' ಆಗಿ ತೆರೆಕಂಡಿತ್ತು. ಶೋಭನ್ ಬಾಬು ಅಭಿನಯಿಸಿದ್ದ 'ಕೋಡೇ ನಾಗು' ಚಿತ್ರ ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು.


Yash starrer MR and MRS Ramachari to be remade in Tollywood

''ಇಲ್ಲಿ 'ನಾಗರಹಾವು' ಹೇಗೆ ಹಿಟ್ ಆಗಿತ್ತೋ, ಹಾಗೆ ಅಲ್ಲೂ 'ಕೋಡೇ ನಾಗು' ಸಿನಿಮಾ ಸಕ್ಸಸ್ ಆಗಿತ್ತು. ಹೀಗಾಗಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ರೀಮೇಕ್ ಮಾಡಿದ್ರೆ ವರ್ಕೌಟ್ ಆಗುತ್ತೆ. ಅಲ್ಲಿನ ನೇಟಿವಿಟಿಗೂ ಹೊಂದಾಣಿಕೆ ಆಗುತ್ತೆ ಅನ್ನುವ ನಂಬಿಕೆ ಮೇಲೆ ಚಿತ್ರವನ್ನ ರೀಮೇಕ್ ಮಾಡುತ್ತಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ರಾಜ್ ಕುಮಾರ್ ಹೇಳಿದ್ದಾರೆ.


'ವೀರ ಕನ್ನಡಿಗ' ಚಿತ್ರವನ್ನ ನಿರ್ಮಿಸಿದ್ದ ತೆಲುಗಿನ ಖ್ಯಾತ ನಿರ್ಮಾಪಕ ಕೆ.ಎಸ್.ರಾಮಾ ರಾವ್ ಜೊತೆಗೂಡಿ ರಾಜ್ ಕುಮಾರ್ ಟಾಲಿವುಡ್ ನಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರೆಡಿ ಮಾಡುತ್ತಿದ್ದಾರೆ. [ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ']


ಹಾಗಾದ್ರೆ, ಇಲ್ಲಿನ ಯಶ್ ಪಾತ್ರವನ್ನ ಅಲ್ಲಿ ಪೋಷಿಸುತ್ತಿರುವುದು ಯಾರು ಅಂದ್ರೆ, ಚಿರಂಜೀವಿ ಅಕ್ಕನ ಮಗ ಸಾಯಿ ಧರಂ ತೇಜ. ತೆಲುಗಿನಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರೀಮೇಕ್ ಮಾಡಬೇಕು ಅಂತ ರಾಜ್ ಕುಮಾರ್ ಮೊದಲು ಅಂದುಕೊಂಡಾಗ, ಮೆಗಾ ಸ್ಟಾರ್ ಚಿರಂಜೀವಿಗೆ ಸ್ಪೆಷಲ್ ಶೋ ಅರೇಂಜ್ ಮಾಡಿದ್ದರಂತೆ.


Yash starrer MR and MRS Ramachari to be remade in Tollywood

ಸಿನಿಮಾ ನೋಡಿದ ಚಿರಂಜೀವಿ ಫುಲ್ ಖುಷ್ ಆಗಿ, ತಮ್ಮ ಅಕ್ಕನ ಮಗ ಸಾಯಿ ಧರಂ ತೇಜ ಹೆಸರನ್ನ ಸೂಚಿಸಿದ್ದರಂತೆ. ಚಿರು ಮಾತಿನಂತೆ ಈಗ ಜೂನಿಯರ್ 'ಕೋಡೇ ನಾಗು' ಆಗುತ್ತಿದ್ದಾರೆ ಸಾಯಿ ಧರಂ ತೇಜ. [ಬಾಕ್ಸಾಫೀಸಲ್ಲಿ 'ರಾಮಾಚಾರಿ' ಕೆಣಕುವ ಗಂಡು ಯಾರೂ ಇಲ್ಲ!]


ಸದ್ಯಕ್ಕೆ ಹೀರೋ ಒಬ್ಬರನ್ನ ಬಿಟ್ಟರೆ, ತೆಲುಗಿನಲ್ಲಿ ಆಕ್ಷನ್ ಕಟ್ ಹೇಳುವ ನಿರ್ದೇಶಕರು, ಸಾಯಿ ಧರಂಗೆ ಹೀರೋಯಿನ್ ಯಾರು ಅನ್ನೋದಿನ್ನೂ ಮಾತುಕತೆ ಹಂತದಲ್ಲಿದೆ. ಅಂತೂ ಹೊಸ ಹೊಸ ರೆಕಾರ್ಡ್ ಬರೆಯುತ್ತಿರುವ 'ರಾಮಾಚಾರಿ' ಮುಡಿಗೆ ಮತ್ತೊಂದು ಹಿರಿಮೆಯ ಗರಿ ಸಿಕ್ಕಿದೆ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash starrer MR and MRS Ramachari to be remade in Telugu. Rajkumar, Producer of 'Myna' and 'Mythri' has bagged the remake rights of the movie. Sai Dharam Tej is roped into play the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada