»   » ಬಾಕ್ಸಾಫೀಸಲ್ಲಿ 'ರಾಮಾಚಾರಿ' ಕೆಣಕುವ ಗಂಡು ಯಾರೂ ಇಲ್ಲ!

ಬಾಕ್ಸಾಫೀಸಲ್ಲಿ 'ರಾಮಾಚಾರಿ' ಕೆಣಕುವ ಗಂಡು ಯಾರೂ ಇಲ್ಲ!

Posted By:
Subscribe to Filmibeat Kannada

''ನಾನ್ ಬರೋವರೆಗೂ ಬೇರೆಯವರ ಹವಾ...ನಾನ್ ಬಂದ್ಮೇಲೆ ನಂದೇ ಹವಾ'' ಅಂತ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡ್ತಿದ್ದ ಹಾಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಆಗಿ ಹೇಳಿ ವಿಲನ್ ಗಳನ್ನ ಹಿಗ್ಗಾಮುಗ್ಗಾ ಜಾಡಿಸುತ್ತಾರೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಈ ಸನ್ನಿವೇಶ ಬರೀ ತೆರೆ ಮೇಲೆ ಮಾತ್ರ ಸೀಮಿತವಾಗಿಲ್ಲ. ಬಾಕ್ಸಾಫೀಸ್ ಕಲೆಕ್ಷನ್ ವಿಷಯದಲ್ಲೂ ಯಶ್ ಹವಾ ಎಂಥದ್ದು ಅಂತ 'ಅಣ್ತಮ್ಮ' ಸಾಬೀತು ಪಡಿಸಿದ್ದಾರೆ.


Yash starrer MR and MRS Ramachari to join 50 crore club

ರಿಲೀಸ್ ಆದ ಮೊದಲ ದಿನವೇ ಕೋಟಿಗಟ್ಟಲೆ ಕಲೆಕ್ಷನ್ ಮಾಡಿದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಇದೀಗ 50 ಕೋಟಿ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಮೊನ್ನೆಯಷ್ಟೇ ರಾಜ್ಯಾದ್ಯಂತ 98ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ, 20ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಫ್ ಸೆಂಚುರಿ ಬಾರಿಸಿದೆ. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]


ಎಲ್ಲಾ ಥಿಯೇಟರ್ ಗಳಲ್ಲೂ ರಾಮಾಚಾರಿ ಅಬ್ಬರ ಇನ್ನೂ ಜೋರಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ, ದೂರದ ಕ್ಯಾಲಿಫೋರ್ನಿಯಾ, ಜರ್ಮನಿ, ಸಿಂಗಾಪುರ್, ಮಲೇಶಿಯಾ ಸೇರಿದಂತೆ ವಿದೇಶಗಳಲ್ಲೂ ರಾಮಾಚಾರಿ ಆರ್ಭಟಿಸುತ್ತಿದ್ದಾನೆ. [ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ']


Yash starrer MR and MRS Ramachari to join 50 crore club

ಎಲ್ಲಾ ಕಡೆ ಉತ್ತಮ ಗಳಿಕೆ ಮಾಡುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸದ್ಯದಲ್ಲೇ 50 ಕೋಟಿ ಕ್ಲಬ್ ಗೆ ಸೇರುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದಕ್ಕೆ ಸಜ್ಜಾಗಿದೆ.


ಕನ್ನಡ ಚಿತ್ರರಂಗದ ಮಾರುಕಟ್ಟೆ ತುಂಬಾ ಕಮ್ಮಿ. ಒಂದು ಚಿತ್ರ ಮೂರು ವಾರ ಓಡಿ, 10 ಕೋಟಿ ಲಾಭ ಬಂದರೆ ಹೆಚ್ಚು ಅನ್ನುವ ಕಾಲದಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂದ್ರೆ ಸ್ಯಾಂಡಲ್ ವುಡ್ ನಿಜಕ್ಕೂ ಹೆಮ್ಮೆ ಪಡಬೇಕಾಗಿರುವ ವಿಚಾರ. [ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ']


Yash starrer MR and MRS Ramachari to join 50 crore club

ಆಂಗ್ರಿ ಯಂಗ್ ಮ್ಯಾನ್ ಯಶ್ ಜೊತೆ ಮುದ್ದು ಹುಡುಗಿ ರಾಧಿಕಾ ಪಂಡಿತ್ ಜೋಡಿ, ವಿ.ಹರಿಕೃಷ್ಣ ಸಂಗೀತ, ಯುವ ಪ್ರತಿಭೆ ಸಂತೋಷ್ ಅನಂದರಾಮ್ ಚೊಚ್ಚಲ ಪರಿಶ್ರಮ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಯಶಸ್ಸಿನ ಹಿಂದಿನ ಕಾರಣ. ['ಯಶ್' ಮುಂದೆ ಮಂಡಿಯೂರುತ್ತಿವೆ ಪರಭಾಷಾ ಚಿತ್ರಗಳು]


50 ದಿನಕ್ಕೆ 50 ಕೋಟಿ ಬಾಚಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' 100 ದಿನಗಳನ್ನ ತಲುಪುವ ವೇಳೆಗೆ ಬಾಲಿವುಡ್ ರೇಂಜಿಗೆ 100 ಕೋಟಿ ಕ್ಲಬ್ ಓಪನ್ ಮಾಡಿದರೂ ಅಚ್ಚರಿ ಇಲ್ಲ. ಎಷ್ಟೇ ಆಗಲಿ, ರೋಷದ 'ರಾಮಾಚಾರಿ'ಯನ್ನ ಕೆಣಕುವ ಗಂಡು ಯಾರಿದ್ದಾರೆ ಹೇಳಿ?! (ಏಜೆನ್ಸೀಸ್)

English summary
Rocking Star Yash starrer MR and MRS Ramachari has created New Record in Sandalwood Box Office by Collecting Rupees 50 Crores in 50 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada