»   » ಯಶ್ ಬಹುಕೋಟಿ ವೆಚ್ಚದ 'ಕೆಜಿಎಫ್' ಶೂಟಿಂಗ್ ಗೆ ಮುಹೂರ್ತ ಫಿಕ್ಸ್!

ಯಶ್ ಬಹುಕೋಟಿ ವೆಚ್ಚದ 'ಕೆಜಿಎಫ್' ಶೂಟಿಂಗ್ ಗೆ ಮುಹೂರ್ತ ಫಿಕ್ಸ್!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿರುವ ಬಹುಕೋಟಿ ವೆಚ್ಚದ 'ಕೆಜಿಎಫ್' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದು, ಹೊಸ ವರ್ಷದಿಂದ ಶೂಟಿಂಗ್ ಶುರು ಮಾಡಲಿದೆ.

ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಬಜೆಟ್ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ 'ಕೆಜಿಎಫ್' ಸಿನಿಮಾ ಹಲವು ವಿಚಾರಗಳಿಗೆ ವಿಶೇಷವೆನಿಸಿದೆ.[ಯಶ್ ಕೆ.ಜಿ.ಎಫ್ ಚಿತ್ರದ ಮುಹೂರ್ತ ಯಾವಾಗ ಗೊತ್ತಾ? ]

'ಮಾಸ್ಟರ್ ಪೀಸ್' ಚಿತ್ರದ ನಂತರ ರಾಕಿಂಗ್ ಸ್ಟಾರ್ ಹಾಗೂ 'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ 'ಕೆಜಿಎಫ್' ಮೂಡಿಬರಲಿದ್ದು, ಯಶ್ ಅಭಿಮಾನಿಗಳಿಗೆ ಈ ವರ್ಷ ಬಿಗ್ ಧಮಾಕ ಆಗಲಿದೆ.

ಹೊಸ ವರ್ಷದಿಂದ 'ಕೆಜಿಎಫ್' ಶುರು!

ಇಷ್ಟು ದಿನ ಮದುವೆಯ ಬ್ಯುಸಿಯಲ್ಲಿದ್ದ ರಾಕಿಂಗ್ ಸ್ಟಾರ್ ಯಶ್, ಹೊಸ ವರ್ಷದಿಂದ ತಮ್ಮ ಬಹುಕೋಟಿ ವೆಚ್ಚದ ಸಿನಿಮಾವನ್ನ ಶುರು ಮಾಡಲಿದ್ದಾರೆ. 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ನಂತರ ವಿಶ್ರಾಂತಿಯಲ್ಲಿರುವ ಯಶ್, ಹೊಸ ಪ್ರಾಜೆಕ್ಟ್ ನ್ನ ಕೈಗೆತ್ತಿಕೊಳ್ಳಲಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಚಿತ್ರೀಕರಣ ಸ್ಟಾರ್ಟ್!

ಈಗಾಗಲೇ ಚಿತ್ರದ ಮುಹೂರ್ತ ಮುಗಿಸಿ ಸೈಲಾಂಟ್ ಆಗಿರುವ 'ಕೆಜಿಎಫ್', ಸಂಕ್ರಾಂತಿ ಹಬ್ಬಕ್ಕೆ ಚಿತ್ರೀಕರಣ ಶುರು ಮಾಡಲಿದೆಯಂತೆ. ಜನವರಿ 15 ರಿಂದ 'ಕೆಜಿಎಫ್' ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಲಿದೆಯಂತೆ.

ಬಹುಕೋಟಿ ವೆಚ್ಚದ 'ಕೆಜಿಎಫ್'!

ಮೂಲಗಳ ಪ್ರಕಾರ 'ಕೆಜಿಎಫ್' ಚಿತ್ರದ ಬಜೆಟ್ ಸುಮಾರು 40ಕೋಟಿ ಆಗಲಿದೆ ಅಂತೆ. ಒಂದು ಪಕ್ಷ ಇದು 40 ಕೋಟಿ ಬಜೆಟ್ ಸಿನಿಮಾವಾದ್ರೆ, ಇದು ಕನ್ನಡದ ಮಟ್ಟಿಗೆ ಅತಿ ದೊಡ್ಡ ಬಜೆಟ್ ಚಿತ್ರವೆನಿಸಿಕೊಳ್ಳಲಿದೆ.

'ಉಗ್ರಂ' ಪ್ರಶಾಂತ್ ನೀಲ್ ಆಕ್ಷನ್ ಕಟ್!

'ಉಗ್ರಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪ್ರಶಾಂತ್ ನೀಲ್, 'ಕೆಜಿಎಫ್' ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

'ಕೆಜಿಎಫ್' ನೈಜ ಘಟನೆ!

ಅಂದ್ಹಾಗೆ, 'ಕೆಜಿಎಫ್' ಚಿತ್ರದ ಕಥೆ 1970 ನಡೆದ ನೈಜ ಘಟನೆಯಾಗಿದೆ. ಆ ಕಾಲದ ವ್ಯಕ್ತಿಯೊಬ್ಬನ ಸುತ್ತ ನಡೆಯುವ ಕಥೆ. ಈ ಚಿತ್ರಕ್ಕಾಗಿ ಅಂದಿನ ಕಾಲದ ದೃಶ್ಯಗಳನ್ನ ಬೆಳ್ಳಿತೆರೆ ಮೇಲೆ ರೀ-ಕ್ರಿಯೇಟ್ ಮಾಡಲಾಗುತ್ತಿದೆ. ಹೀಗಾಗಿ ಇದು ರೆಟ್ರೋ ಸ್ಟೈಲ್ ನಲ್ಲಿ ಮೂಡಿಬರುವ ಸಾಧ್ಯತೆಯಿದೆ ಅಂತೆ.

'ಕೆಜಿಎಫ್' ಚಿತ್ರದ ತಾಂತ್ರಿಕ ತಂಡ

'ಕೆಜಿಎಫ್' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವುದು ವಿಜಯ್‌ ಕಿರಗಂದೂರು. ಈ ಹಿಂದೆ 'ಮಾಸ್ಟರ್ ಪೀಸ್' ಚಿತ್ರವನ್ನ ನಿರ್ಮಾಣ ಮಾಡಿದ್ದ ವಿಜಯ್, 'ಕೆಜಿಎಫ್'ಗೂ ನಿರ್ಮಾಪಕರಾಗಿದ್ದಾರೆ. ಭುವನ್ ಗೌಡ ಛಾಯಗ್ರಹಣ ಮಾಡಲಿದ್ದಾರೆ.

English summary
The Most Eexpensive Kannada Movie of Sandalwood, 'KGF' Starring Kannada Actor Yash is One of the Much Anticipated Films. To be Directed by Prashanth Neel, the movie is about an Ambitious Man who is in his 70’s. The filmmaker has revealed that the film will be Shooting in January 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada