For Quick Alerts
  ALLOW NOTIFICATIONS  
  For Daily Alerts

  'Y19'ಗೆ ಯಶ್ ಭರ್ಜರಿ ತಯಾರಿ: ಹೇಗಿದೆ ರಾಕಿ ಭಾಯ್ ಕಸರತ್ತು?

  |

  ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಯಶ್ ಮುಂದಿನ ಸಿನಿಮಾ ಯಾವುದು ಅಂತ ತಿಳಿಯಲು ಫ್ಯಾನ್ಸ್ ಕಾತರರಾಗಿದ್ದಾರೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಸುದ್ದಿ ಹೊರ ಬಿದ್ದಿಲ್ಲ. ಆದರೆ ಯಶ್ ಮುಂದಿನ ಚಿತ್ರದ ಬಗ್ಗೆ ಹೊಸ ಸುದ್ದಿ ಸಿಕ್ಕಿದೆ.

  ಕೆಜಿಎಫ್ ಸರಣಿ ಸಿನಿಮಾಗಳು ನಟ ಯಶ್‌ಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿದೆ. ಅದರಲ್ಲೂ ಕೆಜಿಎಫ್ 2 ಸಿನಿಮಾದಿಂದ ಕನ್ನಡ ನಟನೊಬ್ಬನ ಸಿನಿಮಾ 1500 ಕೋಟಿ ರೂ. ಗಳಿಗೆ ಕಂಡಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲ. ಇಂಥಹ ದೊಡ್ಡ ಯಶಸ್ಸು ಕಂಡ ಯಶ್ ಮುಂದಿನ ಹೆಜ್ಜೆ ಹುಷಾರಾಗಿ ಇಡುವ ಅಗತ್ಯತೆ ಇದೆ.

  ಕನ್ನಡ ಚಿತ್ರರಂಗಕ್ಕೆ ಪೂಜಾ ಹೆಗ್ಡೆ ಎಂಟ್ರಿ? ಹೀರೊ ಯಾರು?ಕನ್ನಡ ಚಿತ್ರರಂಗಕ್ಕೆ ಪೂಜಾ ಹೆಗ್ಡೆ ಎಂಟ್ರಿ? ಹೀರೊ ಯಾರು?

  ಹಾಗಾಗಿ ಅಷ್ಟು ಸುಲಭಕ್ಕೆ ಯಶ್ ನಿರ್ಮಾಪಕರು ಸಿಗುತ್ತಾರೆ ಎಂದು ಯಾವುದೋ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಮುಂದಿನ ಸಿನಿಮಾ ಆಯ್ಕೆಯನ್ನು ಹುಷಾರಾಗಿ ಮಾಡುತ್ತಿದ್ದಾರೆ. ಹಾಗಾಗಿ ಕೊಂಚ ತಡವಾಗುತ್ತಿದೆ. ಆದರೆ ಯಶ್ ತೆರೆಮರೆಯಲ್ಲಿ ತಮ್ಮ 19ನೇ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸಿಸದ್ದಾರೆ ಎನ್ನಲಾಗಿದೆ.

  ತೆರೆಮರೆಯಲ್ಲಿ ಯಶ್ ಭರ್ಜರಿ ತಯಾರಿ!

  ತೆರೆಮರೆಯಲ್ಲಿ ಯಶ್ ಭರ್ಜರಿ ತಯಾರಿ!

  ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರಂತೆ. ಅಲ್ಲದೇ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿದ್ದಾರೆ. ವರ್ಕೌಟ್ ಜೊತೆಗೆ ಯಶ್ ಡಯಟ್ ಕೂಡ ಶುರು ಮಾಡಿದ್ದಾರಂತೆ. ಮುಂದಿನ ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರಂತೆ. ಈ ಬಗ್ಗೆ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶ್ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದಾರೆ.

  ಬೋನಿ ಕಪೂರ್ ಮೆಚ್ಚಿದ '777 ಚಾರ್ಲಿ': 5ನೇ ದಿನದ ಕಲೆಕ್ಷನ್ ಎಷ್ಟು?ಬೋನಿ ಕಪೂರ್ ಮೆಚ್ಚಿದ '777 ಚಾರ್ಲಿ': 5ನೇ ದಿನದ ಕಲೆಕ್ಷನ್ ಎಷ್ಟು?

  ನರ್ತನ್ ಉತ್ತಮ ಕಥೆ!

  ನರ್ತನ್ ಉತ್ತಮ ಕಥೆ!

  ಯಶ್ ಮುಂದಿನ ಸಿನಿಮಾ ಕೆಜಿಎಫ್ 3 ಅಲ್ಲ, ನಿರ್ದೇಶಕ ನರ್ತನ್ ಸಿನಿಮಾ ಮಾಡಲು ಯಶ್ ಸಿದ್ದವಾಗಿದ್ದಾರೆ. ಇನ್ನು ನರ್ತನ್ ಕೂಡ ನಟ ಯಶ್‌ಗೆ ಸರಿಹೊಂದುವ ಹಾಗೆ ಕತೆಯನ್ನು ರೆಡಿಮಾಡಿಕೊಂಡಿದ್ದಾರೆ. ಈ ವಿಚಾರವನ್ನೂ ಕೂಡ ಕಿಟ್ಟಿ ಹಂಚಿಕೊಂಡಿದ್ದಾರೆ. ಹಾಗಾಗಿ ಕಥೆಗೆ ತಕ್ಕ ಹಾಗ ತಮ್ಮ ಲುಕ್ ಬದಲಿಸಿಕೊಳ್ಳಲು ಯಶ್ ವರ್ಕೌಟ್ ಶುರುಮಾಡಿದ್ದಾರೆ. ಇನ್ನು ನರ್ತನ್ ಭರವಸೆಯ ನಿರ್ದೇಶಕ ಹಾಗಾಗಿ ಕಥೆಯ ಮೇಲೆ ಅದಾಗಲೇ ನಿರೀಕ್ಷೆ ಹುಟ್ಟಿಕೊಂಡಿದೆ.

  ಯಶ್‌ಗೆ ಪೂಜಾ ಹೆಗ್ಡೆ ನಾಯಕಿ!

  ಯಶ್‌ಗೆ ಪೂಜಾ ಹೆಗ್ಡೆ ನಾಯಕಿ!

  ಇನ್ನು ಯಶ್ ಮುಂದಿನ ಚಿತ್ರಕ್ಕೆ ನಟಿ ಯಾರು ಎನ್ನುವುದು ಕೂಡ ರಿವೀಲ್ ಆಗಿದೆ. ನಟಿ ಪೂಜಾ ಹೆಗ್ಡೆ ಯಶ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಪೂಜಾ ಹೆಗ್ಡೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಸುದ್ದಿ ಬಹುತೇಕ ಖಚಿತವಾಗಿದೆ. ಆದರೆ ಚಿತ್ರತಂಡ ಈ ಎಲ್ಲಾ ವಿಚಾರಗಳನ್ನು ಅಧಿಕೃತಗೊಳಿಸುವುದು ಬಾಕಿ ಇದೆ. ಸದ್ಯ ಒಂದೊಂದೇ ವಿಚಾರಗಳು ರಿವೀಲ್ ಆಗ್ತಿದ್ದು, ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

  ಸಾಗರದ ಕೆಳದಿ ಅರಸರ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ ಯಶ್ 'ಯಶೋಮಾರ್ಗ'ಸಾಗರದ ಕೆಳದಿ ಅರಸರ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ ಯಶ್ 'ಯಶೋಮಾರ್ಗ'

  Y19 ಲಾಂಚ್ ಯಾವಾಗ?

  Y19 ಲಾಂಚ್ ಯಾವಾಗ?

  ಇಷ್ಟೇಲ್ಲಾ ಸುದ್ದಿಗಳು ಹರಿದಾಡುತ್ತಾ ಇದ್ದರೂ, ಚಿತ್ರತಂಡ ಮಾತ್ರ ಸಿನಿಮಾದ ಈ ಬಗ್ಗೆ ಏನೂ ಮಾತಾಡದೇ ಸುಮ್ಮನಿದೆ. ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು.ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಇನ್ನು ಯಶ್ ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದೆ ಎಂದು ಕೂಡ ಹೇಳಲಾಗಿದೆ.

  English summary
  Yash starts for his next Movie, Film Directed By Narthan, know More,
  Wednesday, June 15, 2022, 13:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X