»   » ಗೋವಾ, ನೀರಿನ ಹೋರಾಟ ಮತ್ತು ನಿಶ್ಚಿತಾರ್ಥ: ಯಶ್ ಹೇಳಿದ 'ಕತ್ತೆ' ಕತೆ

ಗೋವಾ, ನೀರಿನ ಹೋರಾಟ ಮತ್ತು ನಿಶ್ಚಿತಾರ್ಥ: ಯಶ್ ಹೇಳಿದ 'ಕತ್ತೆ' ಕತೆ

Posted By:
Subscribe to Filmibeat Kannada

''ಅಲ್ಲ..ನಮ್ಮ ಊರಿನ ಹುಡುಗ ಆಗಿ, ಹೋಗಿ ಹೋಗಿ ಗೋವಾದಲ್ಲಿ ನಿಶ್ಚಿತಾರ್ಥ ಮಾಡ್ಕೊಳ್ಬೇಕಿತ್ತಾ? ಕಳಸಾ-ಬಂಡೂರಿ, ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ರೂ, ಗೋವಾದಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳುವುದು ಏನಿತ್ತು?''

''ರಾಧಿಕಾ ಪಂಡಿತ್ ಅಜ್ಜಿ ಮನೆ ಗೋವಾದಲ್ಲಿ ಇರಬಹುದು. ಆದ್ರೆ, ರಾಧಿಕಾ-ಯಶ್...ಇಬ್ಬರೂ ಸ್ಟಾರ್ ಆಗಿರುವುದು ಕರ್ನಾಟಕದಲ್ಲಿ. ಇಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಬದಲು ಗೋವಾಗೆ ಹೋಗ್ಬೇಕಿತ್ತಾ? ಸ್ಟಾರ್ ಗಳೆಲ್ಲಾ ಬರೀ ಬಾಯಿ ಮಾತಿಗೆ ಮಾತ್ರ ಮೀಸಲು''

ಹೀಗಂತ ಯದ್ವಾ-ತದ್ವಾ ಕಾಮೆಂಟ್ ಗಳು ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಎಂಗೇಜ್ ಮೆಂಟ್ ಸಂದರ್ಭದಲ್ಲಿ ಬಂದಿತ್ತು. [ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ]

ಇದಕ್ಕೆ ಯಶ್ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಅವರು ಹೇಳಿದ 'ಕತ್ತೆ ಕತೆ!'

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರ ಜೊತೆ ಮಾತನಾಡುವಾಗ 'ಕತ್ತೆ ಕತೆ'ಯನ್ನ ಯಶ್ ಹೇಳುವ ಮೂಲಕ ವಿವಾದಕ್ಕೆ ಶುಭಂ ಹಾಡಿದರು. ಮುಂದೆ ಓದಿ....

ಊಹೆ ಇತ್ತು

''ಜವಾಬ್ದಾರಿ ಸ್ಥಾನದಲ್ಲಿ ನಿಂತುಕೊಂಡು ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರೆ ಏನೇನಾಗುತ್ತೆ ಅಂತ ನಾನು ಊಹಿಸಿದ್ದೆ. ಯೋಚನೆ ಮಾಡದೆ ನಾನು ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ'' - ಯಶ್ [ನಿಶ್ಚಿತಾರ್ಥ ಮಾಡಿಕೊಳ್ಳುವುದೇ ಉಂಟಂತೆ: ಕಾಗೆ ಹಾರಿಸಿದ್ದು ಯಾಕೆ?]

ಕೆಲವರ ಕಿತಾಪತಿ ಇದು

''ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತ ಆಗಿಲ್ಲ. ಕೆಲವರು ಇರ್ತಾರೆ, ಅವರು ಹೀಗೆ....ಒಂದು ಕತೆ ಇದೆ. ಕತ್ತೆ ಜೊತೆ ಅಪ್ಪ-ಮಗ ಹೋಗುವ ಕತೆ'' - ಯಶ್ [ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

ದಡ್ಡರು!

''ಕತ್ತೆ ಜೊತೆ ಅಪ್ಪ-ಮಗ ನಡ್ಕೊಂಡು ಹೋಗುವಾಗ, 'ಇದೇನಿದು, ಕತ್ತೆ ಇದ್ದರೂ ಅಪ್ಪ-ಮಗ ನಡ್ಕೊಂಡು ಹೋಗ್ತಿದ್ದಾರಲ್ಲ, ದಡ್ಡರು' ಅಂತ ಜನ ಮಾತನಾಡಿಕೊಂಡರಂತೆ'' - ಯಶ್

ಕತ್ತೆ ಮೇಲೆ ಮಗ ಕೂತಾಗ....

''ಆಮೇಲೆ, ಕತ್ತೆ ಮೇಲೆ ಮಗನನ್ನ ಕೂರಿಸಿದರಂತೆ ಅಪ್ಪ. ಆಗ 'ಅಷ್ಟೊಂದು ವಯಸ್ಸಾಗಿರುವ ಅಪ್ಪ ನಡ್ಕೊಂಡು ಹೋಗ್ತಿದ್ದಾರೆ. ಮಗ ಕತ್ತೆ ಮೇಲೆ ಕೂತಿದ್ದಾನೆ' ಅಂತ ಜನ ಮಾತನಾಡಿಕೊಂಡರಂತೆ'' - ಯಶ್

ಕತ್ತೆ ಮೇಲೆ ಅಪ್ಪ ಕೂತಾಗ...

''ಆಮೇಲೆ, ಕತ್ತೆ ಮೇಲೆ ಅಪ್ಪ ಕೂತ್ಕೊಂಡಾಗ 'ಉಲ್ಟಾ' ಹೇಳಿದ್ರಂತೆ' ಹಾಗಾಯ್ತು ಇದು'' - ಯಶ್

ತಲೆ ಕೆಡಿಸಿಕೊಂಡಿಲ್ಲ!

''ಹೀಗಾಗಿ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲು ಆಗಲ್ಲ. ಒಂದು ಖುಷಿ ಸಂದರ್ಭ. ಅದನ್ನ ಹಂಚಿಕೊಳ್ಳಬೇಕು'' - ಯಶ್

ಮದುವೆ ಮಾತ್ರ ಬೆಂಗಳೂರಿನಲ್ಲೇ

''ಒಂದಂತೂ ಸತ್ಯ. ನಮ್ಮ ಮದುವೆ ನಮ್ಮ ಊರು ಅಂದ್ರೆ ಬೆಂಗಳೂರಿನಲ್ಲೇ ಆಗುತ್ತೆ'' - ಯಶ್

ನಾನು ಭಾರತೀಯ

''ನಿಶ್ಚಿತಾರ್ಥ ಮಾತ್ರ ಅತ್ತೆ ಊರು. ಅವರ ಊರು, ಅವರ ಆಸೆಯಂತೆ ಆಯ್ತು. ನಾನು ಭಾರತೀಯ. ಅದರ ಮೇಲೆ ಇದೊಂದು ಪ್ರೈವೇಟ್ ಅಫೇರ್'' - ಯಶ್

ಬಾಯಿ ಮಾತಲ್ಲ, ಕೆಲಸ ಮಾಡಿದ್ದೇನೆ!

''ಉತ್ತರ ಕರ್ನಾಟಕದ ಜನರ ಬಗ್ಗೆ ಯಾವುದೇ ವಿಷಯ ಬಂದಾಗಲೂ ನಾನೇ ಮೊದಲು ಮುಂದೆ ನಿಂತು ಹೋರಾಟ ಮಾಡಿದ್ದೀನಿ. ಅದು ಅಲ್ಲದೇ, ನನ್ನದೇ ಆದ 'ಯಶೋ ಮಾರ್ಗ' ಸಂಸ್ಥೆ ಕಡೆಯಿಂದ ನೀರಿನ ವಿಷಯ ಬಂದಾಗ ಕೆಲಸ ಕೂಡ ಮಾಡಿಕೊಟ್ಟಿದ್ದೇನೆ. ಬಾಯಿ ಮಾತಲ್ಲಿ ಮಾತ್ರ ಮಾತನಾಡಿಲ್ಲ'' - ಯಶ್

ನೀರು-ಜಲ ಹೋರಾಟಕ್ಕೆ ಬಂದೇ ಬರುವೆ

''ಎಲ್ಲಕ್ಕಿಂತ ಹೆಚ್ಚಾಗಿ ನಾವು ಭಾರತೀಯರು. ನಾನು ಪಾಕಿಸ್ತಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ನಾನು ಉತ್ತರ ನೀಡಬೇಕಿತ್ತು. ನಾನು ಭಾರತದಲ್ಲೇ ಮಾಡಿಕೊಂಡಿರೋದು. ಎಲ್ಲರೂ ಭಾರತೀಯರು. ನೀರು-ಜಲ ಅಂತ ಬಂದಾಗ ನಾವು ಯಾವತ್ತೂ ಮುಂದೆ ಬರ್ತೀವಿ'' - ಯಶ್

English summary
Kannada Actor Yash hits back on Hate Mongers by narrating a moral story. But which is that story.? Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada