»   » 'ವಿಷ್ಣು ರಾಷ್ಟ್ರೀಯ ಉತ್ಸವ'ದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಗುಣಗಾನ

'ವಿಷ್ಣು ರಾಷ್ಟ್ರೀಯ ಉತ್ಸವ'ದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಗುಣಗಾನ

Posted By:
Subscribe to Filmibeat Kannada

'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'ಕ್ಕೆ ಕೇವಲ ಗಂಟೆಗಳು ಮಾತ್ರ ಬಾಕಿ ಇದೆ. ವಿಷ್ಣು ಅಭಿಮಾನಿಗಳೆಲ್ಲ ದೆಹಲಿ ಕಡೆ ಪ್ರಯಾಣ ಬೆಳಸಿದ್ದಾರೆ. ತಮ್ಮ ಆರಾಧ್ಯ ದೈವಕ್ಕೆ ರಾಷ್ಟ್ರ ಮಟ್ಟದ ನಮನ ಸಲ್ಲಿಸಲು ಕಾತುರರಾಗಿದ್ದಾರೆ.

ಈ ಕಾರ್ಯಕ್ರಮ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಎನಿಸಿದ್ದು, ಸ್ಯಾಂಡಲ್ ವುಡ್ ಸಿನಿ ತಾರೆಯರು ಕೂಡ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬ್ಯಾಂಕಾಕ್ ನಲ್ಲಿರುವ ಕಿಚ್ಚ ಸುದೀಪ್ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಶುಭ ಕೋರಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್ ವಿಷ್ಣು ಅವರ ಉತ್ಸವದ ಬಗ್ಗೆ ಗುಣಗಾನ ಮಾಡಿದ್ದಾರೆ.

ಹಾಗಿದ್ರೆ, 'ಮಿಸ್ಟರ್ ರಾಮಾಚಾರಿ', ರಿಯಲ್ 'ರಾಮಾಚಾರಿ' ಬಗ್ಗೆ ಏನಂದ್ರು? ಮುಂದೆ ಓದಿ.....

'ವಿಷ್ಣು ಉತ್ಸವ' ನಮ್ಮಂತವರಿಗೆ ಸ್ಪೂರ್ತಿ

''ವಿಷ್ಣು ಸರ್ ಅವರು ಇಲ್ಲ ಅಂದ್ರೂ ಕೂಡ, ಅವರ ಅಭಿಮಾನಿಗಳು ಪ್ರೀತಿ ಇದೆ ಅಲ್ವಾ, ಅದು ಬೇರೆ ಕಲಾವಿದರಿಗೆ ದೊಡ್ಡ ಉದಾಹರಣೆ. ನಮ್ಮಂತ ಕಲಾವಿದರಿಗಂತೂ ಇದು ಸ್ಪೂರ್ತಿ ಆಗುತ್ತೆ. ಅಷ್ಟು ದೊಡ್ಡ ಅಭಿಮಾನದಿಂದ, ಅವರಿಲ್ಲ ಎಂಬ ಕೊರಗಿಲ್ಲದೆ, ಅವರು ಇಲ್ಲೇ ಇದ್ದಾರೆ ಎಂಬ ಮಟ್ಟಿಗೆ ಅವರನ್ನ ಪ್ರೀತಿಸುತ್ತಿರುವುದು, ಗೌರವಿಸುತ್ತಿರುವುದು, ಹಂತ ಹಂತವಾಗಿ ನಾವು ನೋಡ್ತಾ ಬಂದಿದ್ದೀವಿ'' - ಯಶ್, ನಟ

ವಿಷ್ಣುವರ್ಧನ್ ಕರ್ನಾಟಕದ ಆಸ್ತಿ

''ವಿಷ್ಣುವರ್ಧನ್ ಅವರ ಅಭಿಮಾನಿಗಳೆಲ್ಲಾ ಒಂದು ಹೆಜ್ಜೆ ಮುಂದೆ ಹೋಗಿ, ದೆಹಲಿಯಲ್ಲಿ ಡಾ.ವಿಷ್ಣುವರ್ದನ್ ಅವರ ಉತ್ಸವ ನಡೆಸುತ್ತಿದ್ದಾರೆ. ವಿಷ್ಣು ಸರ್ ನಮ್ಮ ಕರ್ನಾಟಕದ ಆಸ್ತಿ. ಅವರು ಇದ್ದಾಗಲೇ ಇಡೀ ಭಾರತ ಅಂದಾಗ, ಕರ್ನಾಟಕದಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು. ದಕ್ಷಿಣ ಭಾರತದ ಸ್ಮಾರ್ಟ್ ಹೀರೋ ಎಂದು ಕರೆಯುತ್ತಿದ್ದರು'' - ಯಶ್, ನಟ

ದೇಶದ ಮೂಲೆ ಮೂಲೆಗೂ ತಲುಪಬೇಕು

''ಅಂತಹ ವ್ಯಕ್ತಿ, ಅವರ ಹಿರಿಮೆ, ರಾಜ್ಯದ, ದೇಶದ ಮೂಲೆ ಮೂಲೆಗೆ ತಲುಪಬೇಕು. ಯಾರಿಲ್ಲ ಅಂದ್ರು, ಅಭಿಮಾನಿಗಳು ಇದನ್ನ ಮಾಡ್ತಿದ್ದಾರೆ. ಇದು ಹೆಚ್ಚಿನ ಖುಷಿ ಮತ್ತು ನಮಗೂ ಸ್ಪೂರ್ತಿ''

ನನ್ನ ರಾಕಿ ಸಿನಿಮಾ ನೋಡಿ ಮೆಚ್ಚಿದ್ದರು

''ನಾನು ಫಸ್ಟ್ ಟೈಮ್ ಕಲಾವಿದರ ಸಂಘಕ್ಕೆ ಹೋದಾಗ, ವಿಷ್ಣು ಸರ್ ದೂರದಿಂದ ನೋಡಿ, ರಾಕಿ ಸಿನಿಮಾ ನೋಡಿದೆ, ಚೆನ್ನಾಗಿದೆ ಎಂದು ಖುಷಿಯಿಂದ ಹೇಳಿದ್ದರು. ನನಗೆ ಈಗಲೂ ಕಾಡುತ್ತೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಅವರಿಗೆ ಅರ್ಪಿಸಿ ಮಾಡಿದ ಸಿನಿಮಾ. ಆ ಸಿನಿಮಾದಲ್ಲಿ ನಾನು ನಿಮ್ಮಂತಯೇ ಅವರ ಅಭಿಮಾನಿ ಆಗಿ ಅಭಿನಯಿಸಿದ್ದೆ'' - ಯಶ್, ನಟ

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಅವರಿಗೆ ಅರ್ಪಣೆ

''ಅವರ ಆರ್ಶೀವಾದಿಂದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ರಾಜ್ಯದಲ್ಲಿ ದೊಡ್ಡ ಮಟ್ಟಕ್ಕೆ ಹೋಗಿತ್ತು. ಅವರ ಪ್ರೀತಿ ಹಾರೈಕೆ ನನ್ನ ಮೇಲೆ ಇದೆ ಎಂಬುದನ್ನ ಅದರ ಮೂಲಕ ನಂಬಿದ್ದೆ. ಅಂತಹ ಮಾಹನ್ ಚೇತನಕ್ಕೆ ನೀವು ಈ ರೀತಿ ಗೌರವ ಸಲ್ಲಿಸುತ್ತಿರುವುದು ನಿಜವಾಗಲೂ ಒಳ್ಳೆಯ ಕೆಲಸ'' - ಯಶ್, ನಟ

ನಿಮ್ಮ ಬೆಂಬಲಕ್ಕೆ ನಾನು ಸದಾ ಸಿದ್ದ

''ನನ್ನ ಹಾರೈಕೆ ಕೂಡ ನಿಮ್ಮೆಲ್ಲರ ಜೊತೆ ಇದೆ. ಒಳ್ಳೆಯದಾಗಲಿ, ಶುಭವಾಗಲಿ, ಈ ಉತ್ಸವ ನಿಲ್ಲದೆ ನಿರಂತರವಾಗಿ ನಡೆಯಲಿ, ಸಾಕಷ್ಟು ಜನಕ್ಕೆ ಮಾದರಿಯಾಗಲಿ'' - ಯಶ್, ನಟ

ವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶ

English summary
rocking star yash Talk about dr vishnuvardhan and dr vishnuvardhan national festival at delhi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada