For Quick Alerts
  ALLOW NOTIFICATIONS  
  For Daily Alerts

  Yash: 'ಕೆಜಿಎಫ್ 2' ಬಿಡುಗಡೆಗೂ ಮುನ್ನವೇ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ ಯಶ್

  |

  'ಕೆಜಿಎಫ್ 2' ಸಿನಿಮಾದ ಪ್ರಚಾರದಲ್ಲಿ ಯಶ್ ಮತ್ತವರ ತಂಡ ಬ್ಯುಸಿಯಾಗಿದ್ದಾರೆ. ಕಳೆದೆರಡು ವಾರಗಳಿಂದ ಯಶ್ ದೇಶದ ಪ್ರಮುಖ ನಗರಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ದೆಹಲಿ, ಮುಂಬೈ, ಚೆನ್ನೈ, ಕೇರಳದ ಕೆಲವು ನಗರಗಳಿಗೆ ವಿಸಿಟ್ ಕೊಟ್ಟ ಬಳಿಕ ಕರ್ನಾಟಕದಲ್ಲೂ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ಗ್ಯಾಪ್‌ನಲ್ಲಿಯೇ ಯಶ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

  Recommended Video

  Prashanth Neel | Yash | KGF 2 ಈ ರೀತಿ ಆಗೋಕೆ ಯಶ್ ಕಾರಣ | Filmibeat Kannada|

  ಎಲ್ಲಿ ನೋಡಿದರೂ ಕೆಜಿಎಫ್ 2 ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಎಲ್ಲಾ ಕಡೆ ಟಿಕೆಟ್ ಬುಕಿಂಗ್ ಆಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ಸಿನಿಮಾ ನೋಡಲು ಕಾತುರದಿಂದ ಕಾದು ಕೂತಿದ್ದಾರೆ. ಬುಕಿಂಗ್ ಓಪನ್ ಮಾಡಿದೆ ಕೆಲವೇ ಗಂಟೆಗಳಲ್ಲಿ ಲಕ್ಷ ಗಟ್ಟಲೆ ಟಿಕೆಟ್‌ಗಳು ಬುಕ್ ಆಗಿವೆ.

  KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!

  ದೇಶದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ಕ್ರೇಜ್ ಇದ್ದರೂ, ಯಶ್ ಪ್ರಚಾರವನ್ನು ಮಾತ್ರ ನಿಲ್ಲಿಸಿಲ್ಲ. ಇದರ ಜೊತೆ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯುವುದನ್ನು ಮರೆತಿಲ್ಲ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗಲೇ ಯಶ್ ಟೆಂಪಲ್ ರನ್ ಆರಂಭಿಸಿದ್ದಾರೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಳಿಕ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಪಡೆದಿದ್ದಾರೆ.

   ಯಶ್ ಟೆಂಪಲ್ ರನ್

  ಯಶ್ ಟೆಂಪಲ್ ರನ್

  'ಕೆಜಿಎಫ್ 2' ಸಿನಿಮಾ ಬಿಡುಗಡೆ ಇನ್ನು ನಾಲ್ಕು ದಿನಗಳು ಮಾತ್ರ ಉಳಿದಿದೆ. ಆಗಲೇ ಯಶ್ ಮತ್ತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ( ಏಪ್ರಿಲ್ 10) ಬೆಂಗಳೂರಿನಲ್ಲಿ 'ಕೆಜಿಎಫ್ 2' ಕನ್ನಡ ಅವತರಣಿಕೆಯ ಪ್ರಚಾರ ಮಾಡಿದ್ದ ಯಶ್, ಮಾರನೇ ದಿನವೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

   ಹೆಲಿಕಾಪ್ಟರ್‌ನಲ್ಲಿ ದೇವಸ್ಥಾನಕ್ಕೆ ಬಂದ ರಾಕಿ

  ಹೆಲಿಕಾಪ್ಟರ್‌ನಲ್ಲಿ ದೇವಸ್ಥಾನಕ್ಕೆ ಬಂದ ರಾಕಿ

  ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಬಳಿಕ ರಸ್ತೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಪಡೆದ ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಪಡೆದಿದ್ದಾರೆ.

   'ಕೆಜಿಎಫ್ 2' ಬಗ್ಗೆ ವೀರೇಂದ್ರ ಹೆಗ್ಗಡೆ ಮಾಹಿತಿ

  'ಕೆಜಿಎಫ್ 2' ಬಗ್ಗೆ ವೀರೇಂದ್ರ ಹೆಗ್ಗಡೆ ಮಾಹಿತಿ

  'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮುನ್ನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯರವರನ್ನು ಯಶ್ ಭೇಟಿಯಾಗಿದ್ದರು. ಈ ವೇಳೆ ವೀರೇಂದ್ರ ಹೆಗ್ಗಡೆಯವರು 'ಕೆಜಿಎಫ್ 2; ಸಿನಿಮಾ ಹಾಗೂ ಯಶ್‌ಗೆ ಆಶೀರ್ವಾದ ಮಾಡಿದ್ದಾರೆ. ಬಳಿಕ ಸಿನಿಮಾದ ಬಗ್ಗೆ ಮಾಹಿತಿಯನ್ನು ಯಶ್‌ ಬಳಿಯಿಂದ ಪಡೆದುಕೊಂಡಿದ್ದಾರೆ ಎನ್ನಲಾಗಲಿದೆ.

   ತೆಲುಗು ರಾಜ್ಯಗಳಲ್ಲಿ 'ಕೆಜಿಎಫ್ 2' ಪ್ರಚಾರ

  ತೆಲುಗು ರಾಜ್ಯಗಳಲ್ಲಿ 'ಕೆಜಿಎಫ್ 2' ಪ್ರಚಾರ

  'ಕೆಜಿಎಫ್ 2' ಸಿನಿಮಾ ಆಂಧ್ರ ಹಾಗೂ ತೆಲಂಗಾಣ ಎರಡರಲ್ಲೂ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಹೀಗಾಗಿ ಯಶ್ ಎರಡು ದಿನಗಳ ಕಾಲ ಈ ಎರಡೂ ರಾಜ್ಯಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಯಶ್ ಎರಡು ದಿನದ ಭೇಟಿ ನಿಗದಿಯಾಗಿದ್ದು, ಧೂಳೆಬ್ಬಿಸಲು ಸಜ್ಜಾಗಿ ನಿಂತಿದ್ದಾರೆ. ಹೀಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಯಶ್ ರಾಜ್ಯದಿಂದ ರಾಜ್ಯಕ್ಕೆ ಓಡಾಡುತ್ತಿದ್ದಾರೆ.

  English summary
  Yash Visited Kukke Subramanya And Dharmasthala Temple Ahead of KGF 2 Release. Know More
  Sunday, April 10, 2022, 14:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X