»   » ಒರಾಯನ್ ಮಾಲ್ ನಲ್ಲಿ ರಾಕಿಂಗ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ'

ಒರಾಯನ್ ಮಾಲ್ ನಲ್ಲಿ ರಾಕಿಂಗ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಣ್ಣಾವ್ರ ಕುಟುಂಬಕ್ಕೆ ಆತ್ಯಾಪ್ತರು ಅಂತ ಎಲ್ಲರಿಗೂ ಗೊತ್ತು. ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಡಾ.ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅಪ್ಪಟ ಅಭಿಮಾನಿಯಾಗಿರುವ ಯಶ್, ಇದೀಗ ಸ್ಟಾರ್ ಆದ್ಮೇಲಂತೂ ಅವರೊಂದಿಗೆ ತೀರಾ ಕ್ಲೋಸ್ ಆಗ್ಬಿಟ್ಟಿದ್ದಾರೆ.

ಮೀಟ್ ಮಾಡಬೇಕು ಅನಿಸಿದ್ರೆ, ಸೀದಾ ಅವರ ಶೂಟಿಂಗ್ ಸ್ಪಾಟ್ ಗೆ ತೆರಳುವ ಯಶ್, ಇತ್ತೀಚೆಗೆ ಶಿವಣ್ಣನ 'ವಜ್ರಕಾಯ', ಪುನೀತ್ ರ 'ಧೀರ ರಣವಿಕ್ರಮ' ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಅಂತದ್ದೇ ಮತ್ತೊಂದು ಸನ್ನಿವೇಶ ನಿನ್ನೆ (ಫೆಬ್ರವರಿ 26) ಒರಾಯನ್ ಮಾಲ್ ನಲ್ಲಿ ನಡೆಯಿತು. ['ವಜ್ರಕಾಯ'ದಲ್ಲಿ ಸೆಂಚುರಿ ಸ್ಟಾರ್ ಜೊತೆ ರಾಕಿಂಗ್ ಸ್ಟಾರ್?!]


ಎಲ್ಲಾ ಕಡೆ ಅಪ್ಪು ಅಭಿನಯದ 'ಮೈತ್ರಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹೇಳಿ ಕೇಳಿ ಯಶ್ ಗೆ ಅಪ್ಪು ಅಂದ್ರೆ ಅಚ್ಚುಮೆಚ್ಚು. ಅಂಥದ್ರಲ್ಲಿ ಸಿನಿಮಾ ಸೂಪರ್ ಅಂದ್ರೆ ಯಶ್ ಸುಮ್ನೆ ಕೂರೋಕೆ ಆಗುತ್ತಾ? ಖಂಡಿತ ಇಲ್ಲ.


Yash watches Puneeth Rajkumar starrer Mythri in Orion Mall

ಹೇಗಾದರೂ ಮಾಡಿ 'ಮೈತ್ರಿ' ಚಿತ್ರವನ್ನ ನೋಡಲೇಬೇಕು ಅಂತ ನಿರ್ಧರಿಸಿದ್ದ ಯಶ್, ಶೂಟಿಂಗ್ ನಡೆಯುತ್ತಿದ್ದರೂ ಕೊಂಚ ಬಿಡುವು ಮಾಡಿಕೊಂಡು 4 ಗಂಟೆ ಸುಮಾರಿಗೆ ಒರಾಯನ್ ಮಾಲ್ ಗೆ ಹಾಜರಾದರು. [ಪುನೀತ್ 'ಮೈತ್ರಿ' ಚಿತ್ರಕ್ಕೆ ವಿಮರ್ಶೆಗಳ ಮುಕ್ತ ಪ್ರಶಂಸೆ]


ಸಾಮಾನ್ಯ ಪ್ರೇಕ್ಷಕರಂತೆ ಚಿತ್ರಮಂದಿರದಲ್ಲಿ ಕೂತು 'ಮೈತ್ರಿ' ಚಿತ್ರವನ್ನ ಕಣ್ತುಂಬಿಕೊಂಡರು. ''ಮೈತ್ರಿ ಸಿನಿಮಾ ತುಂಬಾ ಚೆನ್ನಾಗಿದೆ. ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು. ರಿಲೀಸ್ ಆದಾಗಿನಿಂದಲೂ 'ಮೈತ್ರಿ' ಚಿತ್ರವನ್ನ ನೋಡಬೇಕು ಅಂದುಕೊಳ್ಳುತ್ತಿದೆ. ಇವತ್ತು ಸಾಧ್ಯವಾಯ್ತು. ಇಡೀ ತಂಡಕ್ಕೆ ನನ್ನ ಶುಭಾಶಯ'' ಅಂತ ಚಿತ್ರ ನೋಡಿದ ಬಳಿಕ ಯಶ್ ಹೇಳಿದರು.


ಹಾಗಂತ ಯಶ್ ಗಾಗಿ ಸ್ಪೆಷಲ್ ಶೋ ಅರೇಂಜ್ ಮಾಡಿರಲಿಲ್ಲ. ಎಂದಿನಂತೆ ಸಾಗುತ್ತಿದ್ದ ಶೋ ನಲ್ಲಿ ಯಶ್ ಭಾಗಿಯಾಗಿ ಚಿತ್ರವನ್ನ ಮೆಚ್ಚಿಕೊಂಡಿದ್ದಕ್ಕೆ, ಅಲ್ಲಿ ನೆರೆದಿದ್ದ 'ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ಮತ್ತು ನಿರ್ಮಾಪಕ ರಾಜ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

English summary
Puneeth Rajkumar and Mohan Lal starrer 'Mythri' is receiving overwhelming response all over. Looking at the appraisals, Rocking Star Yash, also one among the fans of Puneeth Rajkumar did make an attempt to watch 'Mythri' yesterday (Feb 26th) in Orion Mall.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada