»   » ಮೈಸೂರಲ್ಲಿ ಪ್ರೇಕ್ಷಕರೊಂದಿಗೆ 'ರನ್ನ' ನೋಡಿದ ಯಶ್

ಮೈಸೂರಲ್ಲಿ ಪ್ರೇಕ್ಷಕರೊಂದಿಗೆ 'ರನ್ನ' ನೋಡಿದ ಯಶ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದು ಬಣ. ಇವರಿಬ್ಬರಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಂಡ್ರೆ ಆಗಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಿದ್ದಾರೆ.

ಇಂತಹ ಗಾಸಿಪ್ ಗಳು ದಿನಕ್ಕೊಂದು ಗಾಂಧಿನಗರದಲ್ಲಿ ಹರಿದಾಡುತ್ತಲೇ ಇರುತ್ತದೆ. ಒಬ್ಬರ ವಿರುದ್ಧ ಮತ್ತೊಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರಚಾಟ ನಡೆಸುತ್ತಾರೆ. ಇದರಿಂದ ಸ್ಟಾರ್ ಗಳಿಗೂ ಕಿರಿಕಿರಿಯಾಗ್ಬಿಟಿದೆ. ['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]


Yash watches Sudeep starrer 'Ranna' in Mysuru

ನಿಜಹೇಳ್ಬೇಕಂದ್ರೆ, ಸ್ಟಾರ್ ಗಳೆಲ್ಲರೂ ಒಂದಾಗಿದ್ದಾರೆ. ಅವರ ಅಭಿಮಾನಿಗಳ ಅಭಿಮಾನದ ಅತಿರೇಕ ಅವರುಗಳ ಮಧ್ಯೆ ಕಂದಕ ಸೃಷ್ಟಿಸುತ್ತಿರುವುದಕ್ಕೆ ಕಾರಣವಾಗುತ್ತಿದೆ. ಈಗ ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡುವುದಕ್ಕೆ ಖುದ್ದು ನಟರು ಮುಂದೆ ಬರುತ್ತಿದ್ದಾರೆ.


'ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೇಲೆ ನನಗೆ ಅಪಾರ ಅಭಿಮಾನ ಇದೆ', ಅಂತ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದರು. ಈಗ ರಾಕಿಂಗ್ ಸ್ಟಾರ್ ಯಶ್ ಸರದಿ. [ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]


ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರವನ್ನ ಯಶ್ ವೀಕ್ಷಿಸಿದ್ದಾರೆ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಇಂದು (ಜೂನ್ 5) 'ರನ್ನ' ಚಿತ್ರವನ್ನ ಯಶ್ ಕಣ್ತುಂಬಿಕೊಂಡಿದ್ದಾರೆ. ಹಾಗೆ ಯಶ್, 'ರನ್ನ' ಚಿತ್ರವನ್ನ ನೋಡಲೇಬೇಕು ಅಂತಿದ್ದರೆ, ಚಿತ್ರತಂಡ ಸ್ಪೆಷಲ್ ಶೋ ಅರೇಂಜ್ ಮಾಡುತ್ತಿತ್ತು. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]


ಆದ್ರೆ, ಅದು ಯಶ್ ಗೆ ಬೇಕಾಗಿರ್ಲಿಲ್ಲ. ಅಭಿಮಾನಿಗಳ ಮನಸ್ಸಲ್ಲಿ ಇರುವ ಗೊಂದಲಕ್ಕೆ ಶುಭಂ ಹಾಡುವುದಕ್ಕೆ ಅಭಿಮಾನಿಗಳ ಸಮ್ಮುಖದಲ್ಲೇ ಕೂತು 'ರನ್ನ' ಚಿತ್ರವನ್ನ ಯಶ್ ವೀಕ್ಷಿಸಿದ್ದಾರೆ. ಅಂತೂ, ಸ್ಯಾಂಡಲ್ ವುಡ್ ನಲ್ಲಿ ನಟರ ಮಧ್ಯೆ ಬೆನ್ನು ತಟ್ಟುವ ಕಾಯಕ ಶುರುವಾಗಿರುವುದು ಉತ್ತಮ ಬೆಳವಣಿಗೆಯೇ ಸರಿ. (ಫಿಲ್ಮಿಬೀಟ್ ಕನ್ನಡ)

English summary
Finally, Kannada Stars are coming forward to put an end to the Fan fights. Rocking Star Yash has watched 'Ranna' movie in Shantala theater, Mysuru today (June 5th) to clear the air between him and Sudeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada