For Quick Alerts
  ALLOW NOTIFICATIONS  
  For Daily Alerts

  ಈ 500ನೇ ಫೋಟೋ ರಾ‍ಧಿಕಾ ಪಂಡಿತ್‌ಗೆ ತುಂಬಾನೇ ಸ್ಪೆಷಲ್!

  |

  ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ ಎನಿಸಿಕೊಂಡಿದೆ. ಈ ಜೋಡಿ ಸಿನಿಮಾ ತೆರೆಯ ಮೇಲೆ ಎಷ್ಟು ಅದ್ಭುತವಾಗಿ ಮಿಂಚಿತ್ತೋ, ಅಷ್ಟೇ ಅದ್ಭುತವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕೂಡ ಸದಾ ಕಂಗೊಳಿಸುತ್ತಿರುತ್ತದೆ. ನಟ ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್.

  ನೀವು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಹೆಚ್ಚಿನ ಮಾಹಿತಿ ಸಿಗುವುದೇ ರಾಧಿಕಾ ಪಂಡಿತ್ ಅವರಿಂದಲೇ. ಯಾಕೆಂದರೆ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಕುಟುಂಬದ ಆಗು-ಹೋಗುಗಳು, ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

  ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಆಗಮಿಸಿದ ಯಶ್ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಆಗಮಿಸಿದ ಯಶ್

  ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಹಾಗಂತ ಅಭಿಮಾನಿಗಳಿಂದ ದೂರಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಸಕ್ರಿಯವಾಗಿರುತ್ತಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಾರೆ. ಆದರೀಗ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋ ಒಂದು ಕಮಾಲ್ ಮಾಡುತ್ತಿದೆ.

  ಆದಿಲಕ್ಷ್ಮಿ ಪುರಾಣ ದ ಬಳಿಕ ಅಭಿನಯಕ್ಕೆ ಬ್ರೇಕ್

  ರಾಧಿಕಾ ಪಂಡಿತ್ ಕಿರುತೆರೆಯಿಂದ ಬೆಳ್ಳಿಪರದೆಗೆ ಎಂಟ್ರಿಕೊಟ್ಟು, ಕನ್ನಡ ಸಿನಿಮಾರಂಗದ ಟಾಪ್ ನಟಿಯಾಗಿ ಮೆರೆದವರು. ದಶಕದ ಕಾಲ ಕನ್ನಡ ಚಿತ್ರರಂಗದ ಉತ್ತುಂಗದಲ್ಲಿದ್ದ ರಾಧಿಕಾ ಪಂಡಿತ್, ನಟ ಯಶ್ ಅವರನ್ನು ಮದುವೆಯಾದ ಬಳಿಕ ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. 'ಆದಿಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ಯಾವ ಚಿತ್ರವನ್ನು ರಾಧಿಕಾ ಪಂಡಿತ್ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಕೌಟುಂಬಿಕ ಜೀವನವನ್ನು ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.

  'ಕೆಜಿಎಫ್ 2' ಪ್ರಚಾರ ಬದಿಗಿಟ್ಟು ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಯಶ್'ಕೆಜಿಎಫ್ 2' ಪ್ರಚಾರ ಬದಿಗಿಟ್ಟು ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಯಶ್

  ಕುಟುಂಬದ ಫೋಟೋ ಹಂಚಿಕೊಂಟ ನಟಿ!

  ಕುಟುಂಬದ ಫೋಟೋ ಹಂಚಿಕೊಂಟ ನಟಿ!

  ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ಹಾಕುವ ಪೋಸ್ಟ್‌ಗಳು ಕೂಡ ವೈರಲ್ ಆಗಿಬಿಡುತ್ತವೆ. ಇದೀಗ ಹೊಸದೊಂದು ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ಪಂಡಿತ್ ಜೊತೆಗೆ ಅವರ ಪತಿ ಮತ್ತು ಇಬ್ಬರು ಮಕ್ಕಳಾದ ಐರಾ ಮತ್ತು ಯಥರ್ವ ಕೂಡ ಇದ್ದಾರೆ. ಇದು ಇವರ ಫ್ಯಾಮಿಲಿ ಫೋಟೋ. ಮುದ್ದಾದ ದಂಪತಿಗಳ ಜೊತೆ ಮುದ್ದಾದ ಮಕ್ಕಳು ಕೂಡ ಫೋಟೋಗೆ ಪೋಸ್ ಕೊಟ್ಟಿದಾರೆ. ಈ ಫೋಟೋವನ್ನು ಹಂಚಿಕೊಂಡು ಇದು ಯಾಕೆ ವಿಶೇಷ ಎನ್ನುವುದನ್ನು ಕೂಡ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

  ಇದು ರಾಧಿಕಾ ಹಂಚಿಕೊಂಡ 500ನೇ ಪೋಸ್ಟ್!

  ಫ್ಯಾಮಿಲಿ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿದ್ದ ಹಾಗೆ, ಈ ಫೋಟೋ ವೈರಲ್ ಆಗಿದೆ. ಇದೇ ಫೋಟೋವನ್ನ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳಲು ಕಾರಣ ಇದೆ. ಇನ್ಸ್ಟಾಗ್ರಾಮ್ ನಲ್ಲಿ ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಾ ಇರುವ 500ನೇ ಪೋಸ್ಟ್ ಇದು. ಹಾಗಾಗಿ ಈ ಫೋಟೋ ವಿಶೇಷವಾಗಿ ಇರಬೇಕು ಎನ್ನುವ ಕಾರಣಕ್ಕೆ ರಾಧಿಕಾ ಪಂಡಿತ್ ತಮ್ಮ ಮುದ್ದು ಮಕ್ಕಳ ಜೊತೆಗೆ ರಾಕಿಂಗ್ ಪತಿ ಇರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ " ಇದು ನನ್ನ ಐನೂರನೇ ಫೋಟೋ ಇದು ವಿಶೇಷವಾಗಿರಲಿ." ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

  ರಾಧಿಕಾ ಪಂಡಿತ ಕಮ್‌ಬ್ಯಾಕ್ ಯಾವಾಗ?

  ನಟಿ ರಾಧಿಕಾ ಪಂಡಿತ್ ವಿಚಾರ ಬಂದಾಗಲೆಲ್ಲಾ ಮತ್ತೆ ತೆರೆಯ ಮೇಲೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ. ಇತ್ತೀಚಿಗೆ ನಟಿ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ. ಹಾಗಾಗಿ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಗುಸುಗುಸು ಕೂಡ ಆಗಾಗ ಕೇಳಿ ಬರುತ್ತೆ. ಆದರೆ ಇಲ್ಲಿ ತನಕ ರಾಧಿಕಾ ಪಂಡಿತ್ ಮಾತ್ರ ತಮ್ಮ ಕಮ್‌ಬ್ಯಾಕ್ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿಲ್ಲ. ಆದರೆ ಅವರ ಕಮ್‌ಬ್ಯಾಕ್‌ಗಾಗಿ ಅಭಿಮಾನಿಗಳಂತೂ ಕಾದು ಕುಳಿತಿದ್ದಾರೆ.

  English summary
  Yash Wife Radhika Pandit shared her family photo as 500th post on Instagram. Fans replied cute.
  Thursday, July 7, 2022, 8:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X