For Quick Alerts
  ALLOW NOTIFICATIONS  
  For Daily Alerts

  ಕೇಕ್ ನಲ್ಲೂ ಯಶ್ ದಾಖಲೆ: ರಾಕಿ ಬರ್ತ್ ಡೇ ಗೆ ವಿಶ್ವದ ಅತಿ ದೊಡ್ಡ ಕೇಕ್

  |
  ಅಭಿಮಾನಿಗಳಿಂದ ತಯಾರಾಗ್ತಿದೆ ವಿಶ್ವದ ಅತಿ ದೊಡ್ಡ ಕೇಕ್ | YASH | KGF2 | FILMIBEAT KANNADA

  ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತರಹೇವಾರಿ ಕೇಕ್ ಗಳನ್ನು ತರುವುದು ಸಾಮಾನ್ಯ. ಆದರೆ, ಅವುಗಳಲ್ಲಿ ಕೆಲವು ಅಭಿಮಾನಿಗಳ ಕೇಕ್ ಬೇರೆಲ್ಲ ಕೇಕ್ ಗಳಿಗಿಂತ ವಿಭಿನ್ನ ಅನಿಸುತ್ತದೆ.

  ತೂಕ, ಬಣ್ಣ, ವಿನ್ಯಾಸ ಹೀಗೆ ಯಾವುದೋ ಒಂದು ಕಾರಣಕ್ಕೆ ಯಾವುದಾದರೂ ಒಂದು ಕೇಕ್ ಹೈಲೈಟ್ ಆಗುತ್ತದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬರ್ತ್ ಡೇ ಕೇಕ್ ಮೂಲಕ ದಾಖಲೆ ಬರೆಯಲು ಹೊರಟಿದ್ದಾರೆ. 'ಕೆಜಿಎಫ್' ನಿಂದ ಎಲ್ಲ ದಾಖಲೆ ಉಡೀಸ್ ಮಾಡಿದ್ದ ವೀರನಿಗೆ ಅತಿ ದೊಡ್ಡ ಕೇಕ್ ಅನ್ನು ಅರ್ಪಿಸುತ್ತಿದ್ದಾರೆ.

  ಈ ವರ್ಷ ಎದುರಾಳಿಗಳಾಗಿ ನಿಲ್ಲಲಿದ್ದಾರಾ ಜೋಡೆತ್ತುಗಳು?ಈ ವರ್ಷ ಎದುರಾಳಿಗಳಾಗಿ ನಿಲ್ಲಲಿದ್ದಾರಾ ಜೋಡೆತ್ತುಗಳು?

  ಜನವರಿ 8 ರಂದು ಯಶ್ ಹುಟ್ಟುಹಬ್ಬ ಇದೆ. ಈ ವರ್ಷ ಆ ದಿನವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಣೆ ಮಾಡಲು ನಿರ್ಧಾರ ಮಾಡಿದ್ದಾರೆ. ವೇಣು ಗೌಡ ಎಂಬ ಅಭಿಮಾನಿಯೊಬ್ಬರು ಈ ಅದ್ದೂರಿ ಕಾರ್ಯಕ್ರಮಕ್ಕೆ ತಕ್ಕ ಹಾಗೆ ದೊಡ್ಡ ಕೇಕ್ ಅನ್ನು ತಯಾರು ಮಾಡಿಸುತ್ತಿದ್ದಾರೆ.

  5000 ಕೆಜಿಯ ಕೇಕ್

  5000 ಕೆಜಿಯ ಕೇಕ್

  ಈ ವರ್ಷದ ಯಶ್ ಹುಟ್ಟುಹಬ್ಬಕ್ಕೆ ಅತಿ ದೊಡ್ಡ ಕೇಕ್ ಸಿದ್ಧವಾಗುತ್ತಿದೆ. ಬರೋಬ್ಬರಿ 5000 ಕೆಜಿಯ ಕೇಕ್ ಅನ್ನು ರಾಕಿ ಕತ್ತರಿಸಲಿದ್ದಾರೆ. ಈ ಕೇಕ್ ಮೂಲಕ ಯಶ್ ಅಭಿಮಾನಿ ಹೊಸ ದಾಖಲೆ ಬರೆಯಲು ಹೊರಟಿದ್ದಾರೆ. ವೇಣು ಗೌಡ ಎಂಬ ಅಭಿಮಾನಿ ಈ ಕೇಕ್ ಅನ್ನು ಮಾಡಿಸುತ್ತಿದ್ದಾರೆ. ವಿಶೇಷ ಅಂದರೆ, ವಿಶ್ವದ ಯಾವ ನಟನಿಗೂ ಇಷ್ಟು ದೊಡ್ಡ ಕೇಕ್ ಅನ್ನು ಅಭಿಮಾನಿಗಳು ಹುಟ್ಟುಹಬ್ಬಕ್ಕೆ ತಂದಿಲ್ಲ.

  ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಬರ್ತ್ ಡೇ

  ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಬರ್ತ್ ಡೇ

  ಪ್ರತಿ ವರ್ಷ ಯಶ್ ತಮ್ಮ ಹುಟ್ಟುಹಬ್ಬವನ್ನು ಹೊಸಕೆರೆಹಳ್ಳಿಯ ತಮ್ಮ ನಿವಾಸದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಅಲ್ಲಿಯೇ ನೂರಾರು ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಅವರ ಬರ್ತ್ ಡೇ ಸ್ಥಳ ಬದಲಾಗಿದೆ. ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಬರ್ತ್ ಡೇ ನಡೆಯಲಿದೆ. ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಸ್ಥಳ ಬದಲು ಮಾಡಲಾಗಿದೆ.

  ನ್ಯೂ ಇಯರ್ ಅಂತ ಎಣ್ಣೆ ಏಟಲ್ಲಿ ಗಾಡಿ ಓಡಿಸುವವರಿಗೆ ಯಶ್ ಕೊಟ್ಟ ಸಂದೇಶ ಇದು.!ನ್ಯೂ ಇಯರ್ ಅಂತ ಎಣ್ಣೆ ಏಟಲ್ಲಿ ಗಾಡಿ ಓಡಿಸುವವರಿಗೆ ಯಶ್ ಕೊಟ್ಟ ಸಂದೇಶ ಇದು.!

  ಅಭಿಮಾನಿಗಳಿಗೆ ಮುಕ್ತ ಆಹ್ವಾನ

  ಅಭಿಮಾನಿಗಳಿಗೆ ಮುಕ್ತ ಆಹ್ವಾನ

  ಯಶ್ ಹುಟ್ಟುಹಬ್ಬಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ವತಿಯಿಂದ ಎಲ್ಲ ಅಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. 'ಕೆಜಿಎಫ್' ಸಿನಿಮಾದ ನಂತರ ಯಶ್ ಕ್ರೇಜ್ ಜೋರಾಗಿದ್ದು, ಅಭಿಮಾನಿಗಳ ಸಂಖ್ಯೆ ಡಬಲ್ ಆಗಲಿದೆ. ಜನವರಿ 7 ರಂದು ಮಧ್ಯರಾತ್ರಿ ಹಾಗೂ 8 ರಂದು ಸಂಜೆಯವರೆಗೂ ಕಾರ್ಯಕ್ರಮ ನಡೆಯಲಿದೆ.

  ಕಳೆದ ವರ್ಷ ಆಚರಣೆ ಇರಲಿಲ್ಲ

  ಕಳೆದ ವರ್ಷ ಆಚರಣೆ ಇರಲಿಲ್ಲ

  ಕಳೆದ ವರ್ಷ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ನಟ ಅಂಬರೀಶ್ ವಿಧಿವಶರಾಗಿದ್ದು, ಯಶ್ ತಮ್ಮ ಹುಟ್ಟುಹಬ್ಬದ ಅಚರಣೆ ನಿರಾಕರಿಸಿದ್ದರು. ಹುಟ್ಟುಹಬ್ಬ ಆಚರಣೆ ಇರುವುದಿಲ್ಲ ಎಂದು ಅಭಿಮಾನಿಳಿಗೆ ಮನವಿ ಮಾಡಿದ್ದರು. ಕಳೆದ ವರ್ಷ ಯಶ್ ರನ್ನು ಭೇಟಿ ಮಾಡಲು ಸಾಧ್ಯವಾಗದೆ ಇದ್ದ ಅಭಿಮಾನಿಗಳಿಗೆ, ಈ ವರ್ಷ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.

  Filmfare Awards South 2019: ಅತ್ಯುತ್ತಮ ನಟ ಯಶ್, ನಟಿ ಮಾನ್ವಿತಾ ಕಾಮತ್Filmfare Awards South 2019: ಅತ್ಯುತ್ತಮ ನಟ ಯಶ್, ನಟಿ ಮಾನ್ವಿತಾ ಕಾಮತ್

  English summary
  KGF star Yash will create a record even in the birthday cake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X