»   » 'ಗುಳ್ಟು' ಸಿನಿಮಾವನ್ನು ನೋಡ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್

'ಗುಳ್ಟು' ಸಿನಿಮಾವನ್ನು ನೋಡ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್

Posted By:
Subscribe to Filmibeat Kannada
ಗುಳ್ಟು ಸಿನೆಮಾ ಬಗ್ಗೆ ಯಶ್ ಮಾತು | Filmibeat Kannada

'ಗುಳ್ಟು' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡದಲ್ಲಿ ಬಂದ ಒಂದು ವಿಭಿನ್ನ ಪ್ರಯತ್ನವನ್ನು ಜನರು ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಎಲ್ಲ ಕಡೆ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಸಿಕ್ಕಿರುವ ಈ ರೆಸ್ಪಾನ್ಸ್ ಬಗ್ಗೆ ತಿಳಿದ ನಟ ಯಶ್ ನಾಳೆ 'ಗುಳ್ಟು' ಚಿತ್ರವನ್ನು ವೀಕ್ಷಿಸಲಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿರುವ ಯಶ್ ''ಒಂದು ಸಿನಿಮಾದ ಬಗ್ಗೆ ಬಹಳ ಕೇಳುತ್ತಿದ್ದೇನೆ. ತುಂಬ ಜನರು ಸಿನಿಮಾದ ಬಗ್ಗೆ ಒಳ್ಳೆಯ ಸಿನಿಮಾ ಅಂತ ಮಾತನಾಡುತ್ತಿದ್ದಾರೆ. ಕನ್ನಡಕ್ಕೆ ಇದು ವಿಶೇಷ ರೀತಿಯ ಸಿನಿಮಾ. ಒಬ್ಬ ಹೊಸ ಹುಡುಗ, ಹೊಸ ಟೀಂ ಒಂದು ಅದ್ಬುತ ಸೃಷ್ಟಿ ಮಾಡಿದೆ. ಈ ರೀತಿಯ ಒಳ್ಳೆಯ ಸಿನಿಮಾ ಬಂದಾಗ ಎಲ್ಲರೂ ಪ್ರೋತ್ಸಾಹ ನೀಡಿ. ನೀವು ಕೂಡ ಈ ಸಿನಿಮಾ ನೋಡಿ. ನಾನು ಇದೇ ಶುಕ್ರವಾರ ಸಿನಿಮಾ ನೋಡುತ್ತೇನೆ'' ಎಂದಿದ್ದಾರೆ.

Yash will watch Gultoo kannada movie tomorrow

ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

ಗುಳ್ಟು ಸಿನಿಮಾ ವಿಮರ್ಶೆ

ತಂದೆ-ತಾಯಿ ಇಲ್ಲದ ಅನಾಥ ಹುಡುಗ ಅಲೋಕ್ (ನವೀನ್ ಶಂಕರ್) ಬುದ್ಧಿವಂತ. ಬುಕ್ ಮೈ ಶೋ ವೆಬ್ ತಾಣವನ್ನೇ ಹ್ಯಾಕ್ ಮಾಡಿ, ಸ್ನೇಹಿತರಿಗೆ ಟಿಕೆಟ್ ಕೊಡಿಸುವಷ್ಟು ಚಾಣಾಕ್ಷ. ಎಂಜಿನಿಯರ್ ಪದವೀಧರ ಅಲೋಕ್ ಗೆ ಅನ್ ಲೈನ್ ಸ್ಟಾರ್ಟ್ ಅಪ್ ಪ್ರಾರಂಭ ಮಾಡುವ ಹಂಬಲ. ಆದ್ರೆ, ಅದಕ್ಕೆ ಬಂಡವಾಳ ಇಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ದುಡಿದು, ಟೀಮ್ ಲೀಡರ್ ಗೆ ಬಕೆಟ್ ಹಿಡಿದು, ಸಂಬಳ ಹೈಕ್ ಮಾಡಿಸಿಕೊಂಡು, ಹದಿನೈದು ವರ್ಷಗಳಲ್ಲಿ ಸಾಧಿಸುವುದಕ್ಕಿಂತ, ಮೂರೇ ವರ್ಷಕ್ಕೆ ಕೋಟ್ಯಾಧಿಪತಿ ಆಗಬೇಕು ಎಂಬ ಹಠ ಅಲೋಕ್ ಗೆ. ಇದಕ್ಕಾಗಿ ಆತ ಹಿಡಿಯುವ ವಾಮ ಮಾರ್ಗವೇ 'ಗುಳ್ಟು' ಸಿನಿಮಾ.

English summary
Rocking Star Yash will watch Gultoo kannada movie tomorrow (April 13th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X