For Quick Alerts
  ALLOW NOTIFICATIONS  
  For Daily Alerts

  'ಟಗರು' ಸಿನಿಮಾವನ್ನು ನೋಡ್ತಾರೆ ರಾಕಿಂಗ್ ಸ್ಟಾರ್ ಯಶ್

  By Naveen
  |
  'ಟಗರು' ಸಿನಿಮಾವನ್ನು ನೋಡ್ತಾರೆ ರಾಕಿಂಗ್ ಸ್ಟಾರ್ ಯಶ್ | FIlmibeat Kannada

  ನಟ ಯಶ್ ಈ ಹಿಂದೆ ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾಗೆ ಶುಭ ಕೋರಿದ್ದರು. ಆದರೆ ಈಗ ಯಶ್ 'ಟಗರು' ಸಿನಿಮಾವನ್ನು ನೋಡುವುದಕ್ಕೆ ರೆಡಿ ಆಗಿದ್ದಾರೆ.

  ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾದ ಈಗಾಗಲೇ ಗೆದ್ದಿದೆ. ಇದರಿಂದ ಚಿತ್ರತಂಡ ಕೂಡ ಸಂತೋಷದಲ್ಲಿ ಇದೆ. ಪ್ರೇಕ್ಷಕರು, ವಿಮರ್ಶಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಬಂದಿರುವ ಪ್ರತಿಕ್ರಿಯೆಯಿಂದ ಶಿವಣ್ಣ ಅಂಡ್ ಟೀಂ ಗೆ ಹೊಸ ಜೋಶ್ ಬಂದಿದೆ. ಎಲ್ಲ ಕಡೆ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಯಶ್ ಕೂಡ ಸಿನಿಮಾ ನೋಡುವ ಕಾತುರದಲ್ಲಿ ಇದ್ದಾರೆ.

  ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

  ಯಶ್ 'ಟಗರು' ಸಿನಿಮಾವನ್ನು ನಾಳೆ ನೋಡಲಿದ್ದಾರೆ. ನಾಳೆ (ಶನಿವಾರ) ಸಂಜೆ 4 ಗಂಟೆಗೆ ಯಶ್ ನೋಡಲಿದ್ದಾರೆ. ಬೆಂಗಳೂರಿನ ಓರಯನ್ ಮಾಲ್ ನಲ್ಲಿ ಯಶ್ ಚಿತ್ರವನ್ನು ವೀಕ್ಷಿಸಲಿದ್ದಾರೆ.

  ಇನ್ನು 'ಟಗರು' ಸಿನಿಮಾ ಈಗ ವಿದೇಶಕ್ಕೆ ಕೂಡ ಹಾರಿದೆ. ಮಾರ್ಚ್ 8 ಅಂದ್ರೆ ಇಂದು 'ಯು.ಎಸ್.ಎ'ನಲ್ಲಿ 'ಟಗರು' ತೆರೆಗೆ ಅಪ್ಪಳಿಸಲಿದೆ. ಶಿಕಾಗೋ, ಫಿಲಡೆಲ್ಫಿಯ, ಅಟ್ಲಾಂಟ ಸೇರಿದಂತೆ 25ಕ್ಕೂ ಹೆಚ್ಚು ಕಡೆ 'ಟಗರು' ಬಿಡುಗಡೆ ಆಗಲಿದೆ. ಟಗರು' ಸಿನಿಮಾ ಈಗಾಗಲೇ ಹಿಟ್ ಆಗಿದೆ.

  'ಟಗರು' ಸಿನಿಮಾ ಹೇಗಿದೆ?

  ರೌಡಿಸಂ ಸುತ್ತ ಹೆಣೆದಿರುವ 'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ರೌಡಿ 'ಡಾಲಿ' ಆಗಿ ಧನಂಜಯ್ ಶಿವಣ್ಣನ ಎದುರು ತೊಡೆ ತಟ್ಟಿ ನಿಲ್ಲುತ್ತಾರೆ. ಇವರಿಬ್ಬರ ಜುಗಲ್ಬಂದಿಯೇ 'ಟಗರು' ಸಿನಿಮಾ.

  ಅಮೇರಿಕಾದಲ್ಲಿ ಗುಟುರು ಹಾಕಲಿರುವ ಶಿವಣ್ಣನ 'ಟಗರು'

  English summary
  Kannada actor Yash will watch Shiva Rajkumar's Tagaru kannada movie in orion mall tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X