For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು?

  |
  ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು? | FILMIBEAT KANNADA

  ಕನ್ನಡದ ಕೆಲ ಸ್ಟಾರ್ ನಟರ ಅಭಿಮಾನಿಗಳಿಗೆ ಈ ವರ್ಷ ಸ್ವಲ್ಪ ನಿರಾಸೆಯಾಗಿದೆ. ಕಾರಣ ಅನೇಕ ಸ್ಟಾರ್ ಕಲಾವಿದರು ಈ ವರ್ಷ ಒಂದೂ ಸಿನಿಮಾವನ್ನು ಮಾಡಿಲ್ಲ. ದರ್ಶನ್, ಪುನೀತ್ ರಾಜ್ ಕುಮಾರ್, ಉಪೇಂದ್ರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಿವ ಭಾಗ್ಯ ಈ ವರ್ಷ ಸಿಗಲಿಲ್ಲ.

  ಶಿವರಾಜ್ ಕುಮಾರ್ ಎಂದಿನಂತೆ ಈ ವರ್ಷವೂ ಫಾರ್ಮ್ ನಲ್ಲಿ ಇದ್ದಾರೆ. ಸುದೀಪ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶರಣ್ ಹಾಗೂ ಸತೀಶ್ ಗೆ ಗೆಲುವು ಸಿಕ್ಕಿದೆ. ಜಗ್ಗೇಶ್ ಹಾಗೂ ಗಣೇಶ್ ಒಂದು ಸಿನಿಮಾ ಮಾತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಮೂರು ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆ ಮಾಡಿದ್ದಾರೆ.

  2018 ರೌಂಡಪ್: ಗಾಂಧಿನಗರದಲ್ಲಿ ಈ ವರ್ಷ ಕೋಲಾಹಲ ಸೃಷ್ಟಿಸಿದ ವಿವಾದಗಳಿವು.!

  ಉಳಿದಂತೆ, ದಿಗಂತ್, ಅಜಯ್ ರಾವ್, ನೆನಪಿರಲಿ ಪ್ರೇಮ್, ಪ್ರಜ್ವಲ್, ನಿರೂಪ್ ಭಂಡಾರಿ, ಜಯರಾಂ ಕಾರ್ತಿಕ್ ಮನೋರಂಜನ್ ಈ ವರ್ಷ ತಮ್ಮ ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆದರು.

  ಅಂದಹಾಗೆ, ಈ ವರ್ಷ ಬಂದ ಸ್ಟಾರ್ ಗಳ ಸಿನಿಮಾಗಳ ವಿವರ ಮುಂದಿದೆ ಓದಿ...

  ಅಂಬರೀಶ್ (ಅಂಬಿ ನಿಂಗೆ ವಯಸ್ಸಾಯ್ತೋ)

  ಅಂಬರೀಶ್ (ಅಂಬಿ ನಿಂಗೆ ವಯಸ್ಸಾಯ್ತೋ)

  ರೆಬಲ್ ಸ್ಟಾರ್ ಅಂಬರೀಶ್ ಬಹಳ ವರ್ಷಗಳ ಬಳಿಕ ಮತ್ತೆ ನಾಯಕನಾಗಿ ನಟಿಸಿದ್ದ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ'. ಆದರೆ, ಇದೇ ಅವರ ಕೊನೆಯ ಸಿನಿಮಾ ಆಗುವ ಹಾಗೆ ಆಯ್ತು. 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ದೊಡ್ಡ ಹಿಟ್ ಆಗದೆ ಇದ್ದರೂ, ಒಂದು ಒಳ್ಳೆಯ ಸಿನಿಮಾ ಅಂತ ಕರೆಸಿಕೊಂಡಿದೆ.

  ಅನಂತ್ ನಾಗ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ)

  ಅನಂತ್ ನಾಗ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ)

  ಈ ವರ್ಷದ ದೊಡ್ಡ ಹಿಟ್ ಸಿನಿಮಾಗಳ ಸಾಲಿನಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಕೂಡ ಇದೆ. ಈ ಸಿನಿಮಾದಲ್ಲಿ ಮಕ್ಕಳ ಜೊತೆ ತರ್ಲೆ ಮಾಡಿದವರು ಅನಂತ್ ನಾಗ್. ರಿಷಬ್ ಶೆಟ್ಟಿ ಅವರ ಈ ಸಿನಿಮಾದ ಗೆಲುವಿಗೆ ಅವರು ಪ್ರಮುಖ ಕಾರಣ.

  ಈ ವರ್ಷ ನಿರ್ದೇಶಕರ ಮ್ಯಾಜಿಕ್ ಹೇಗಿತ್ತು, ಯಾರು ಬೆಸ್ಟ್ ?

  ಶಿವಣ್ಣ (ಟಗರು, ದಿ ವಿಲನ್)

  ಶಿವಣ್ಣ (ಟಗರು, ದಿ ವಿಲನ್)

  ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಈ ವರ್ಷ ಸಿಹಿಯೂ ಇದೆ, ಕಹಿಯೂ ಇದೆ. ಅತ್ತ 'ಟಗರು' ಸೂಪರ್ ಹಿಟ್ ಆಗಿದ್ದರೆ, ಇತ್ತ 'ದಿ ವಿಲನ್' ಅದೇ ಮಟ್ಟಕ್ಕೆ ಫ್ಲಾಪ್ ಆಗಿದೆ. 'ಟಗರು' ಸೂರಿ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಬಂದಿದ್ದು, ಸಿನಿಮಾ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿದೆ.

  ಸುದೀಪ್ (ದಿ ವಿಲನ್, ಅಂಬಿ ನಿಂಗೆ ವಯಸ್ಸಾಯ್ತೋ)

  ಸುದೀಪ್ (ದಿ ವಿಲನ್, ಅಂಬಿ ನಿಂಗೆ ವಯಸ್ಸಾಯ್ತೋ)

  ಹೇಳಬೇಕು ಅಂದರೆ, ಸುದೀಪ್ ಈ ವರ್ಷ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದಿ ವಿಲನ್', 'ಅಂಬಿ ನಿಂಗೆ ವಯಸ್ಸಾಯ್ತೋ' ಹಾಗೂ 'ರಾಜು ಕನ್ನಡ ಮೀಡಿಯಂ' ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಆದರೆ, ಇವುಗಳಲ್ಲಿ ಎರಡು ಸಿನಿಮಾಗಳು ಮಲ್ಟಿಸ್ಟಾರ್ ಆಗಿದ್ದರೆ, 'ರಾಜು ಕನ್ನಡ ಮೀಡಿಯಂ' ನಲ್ಲಿ ಸುದೀಪ್ ವಿಶೇಷ ಪಾತ್ರವನ್ನ ನಿರ್ವಹಿಸಿದ್ದರು.

  2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

  ಶರಣ್ ಮತ್ತು ಸತೀಶ್ ಗೆ ಬ್ರೇಕ್

  ಶರಣ್ ಮತ್ತು ಸತೀಶ್ ಗೆ ಬ್ರೇಕ್

  ನಟ ಶರಣ್ ಈ ವರ್ಷ 'ರಾಂಬೋ 2' ಹಾಗೂ 'ವಿಕ್ಟರಿ 2' ಎರಡು ಚಿತ್ರಗಳನ್ನು ಮಾಡಿದರು. ಇವುಗಳಲ್ಲಿ 'ರಾಂಬೋ 2' ದೊಡ್ಡ ಹಿಟ್ ಆಗಿದ್ದರೆ, 'ವಿಕ್ಟರಿ 2' ಕೂಡ ಓಕೆ ಓಕೆ ರೀತಿ ಇತ್ತು. ಇನ್ನು ಸತೀಶ್ ನೀನಾಸಂ 'ಅಯೋಗ್ಯ' ಮೂಲಕ ಬಹಳ ವರ್ಷಗಳ ನಂತರ ಸೆಂಚುರಿ ಬಾರಿಸಿದರು.

  ಜಗ್ಗೇಶ್, ಗಣೇಶ್ ಒಂದು ಸಿನಿಮಾ

  ಜಗ್ಗೇಶ್, ಗಣೇಶ್ ಒಂದು ಸಿನಿಮಾ

  ನವರಸ ನಾಯಕ ಜಗ್ಗೇಶ್ ಈ ವರ್ಷ ಒಂದು ಪ್ರಯೋಗ ಮಾಡಿದರು. '8MM' ಮೂಲಕ ಗನ್ ಹಿಡಿದು ಬಂದರು. ಆದರೆ, ಆ ಸಿನಿಮಾ ಆ ಮಟ್ಟಿಗೆ ಕ್ಲಿಕ್ ಆಗಲಿಲ್ಲ. ಗಣೇಶ್ ಈ ವರ್ಷ 'ಆರೆಂಜ್' ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ಅವರ ಬೇರೆ ಸಿನಿಮಾಗಳ ಬರಲಿಲ್ಲ.

  ವಿಜಿ ಎರಡು, ಚಿರು ಮೂರು

  ವಿಜಿ ಎರಡು, ಚಿರು ಮೂರು

  ದುನಿಯಾ ವಿಜಯ್ 'ಜಾನಿ ಜಾನಿ ಎಸ್ ಪಪ್ಪಾ' ಹಾಗೂ 'ಕನಕ' ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ, ಆ ಎರಡು ಸಿನಿಮಾಗಳು ಹಿಟ್ ಆಗಲಿಲ್ಲ. ಚಿರಂಜೀವಿ ಸರ್ಜಾ 'ಸಿಜರ್', 'ಸಂಹಾರ' ಹಾಗೂ 'ಅಮ್ಮ ಐ ಲವ್ ಯೂ' ಮೂರು ಸಿನಿಮಾಗಳಲ್ಲಿ ನಟಿಸಿದರು. ಇವುಗಳಲ್ಲಿ 'ಅಮ್ಮ ಐ ಲವ್ ಯೂ' ಪ್ರೇಕ್ಷಕರಿಗೆ ಇಷ್ಟ ಆಯ್ತು.

  ಉಳಿದ ನಟರ ಕಥೆ ಏನು ?

  ಉಳಿದ ನಟರ ಕಥೆ ಏನು ?

  ದಿಗಂತ್, ಅಜಯ್ ರಾವ್, ಪ್ರೇಮ್, ಪ್ರಜ್ವಲ್, ನಿರೂಪ್ ಭಂಡಾರಿ, ಮನೋರಂಜನ್ ತಲಾ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಜಯರಾಂ ಕಾರ್ತಿಕ್ 'ಆ ಕರಾಳ ರಾತ್ರಿ' ಹಾಗೂ 'ಪುಟ 109' ಸಿನಿಮಾವನ್ನು ಈ ವರ್ಷ ಮಾಡಿದ್ದಾರೆ.

  ಯಶ್ 'ಕೆಜಿಎಫ್'

  ಯಶ್ 'ಕೆಜಿಎಫ್'

  ನಟ ಯಶ್ ಈ ವರ್ಷ 'ಕೆಜಿಎಫ್' ಸಿನಿಮಾ ಮಾಡಿದ್ದು, ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ. ರಾಕಿಂಗ್ ಸ್ಟಾರ್ ಪಾಲಿಗೆ ಈ ವರ್ಷ ಮರೆಯಲು ಆಗದ ಮಟ್ಟಿಗೆ ವಿಶೇಷತೆಗಳನ್ನು ನೀಡಿದೆ. 'ಕೆಜಿಎಫ್' ಅವರ ಹೆಸರನ್ನು ದೇಶ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಇತ್ತ ಯಶ್ ಅಪ್ಪ ಕೂಡ ಆಗಿದ್ದಾರೆ.

  English summary
  Year end special, sandalwood actors movies in 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X