»   » 2016ರ ಅತ್ಯುತ್ತಮ ಕನ್ನಡದ ನವ ನಟಿ ಯಾರು?

2016ರ ಅತ್ಯುತ್ತಮ ಕನ್ನಡದ ನವ ನಟಿ ಯಾರು?

Posted By:
Subscribe to Filmibeat Kannada

ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯರ ಪರಿಚಯವಾಗಿದೆ. ಇವರಲ್ಲಿ ಹಲವರು ತಮ್ಮ ಮೊದಲ ಚಿತ್ರದ ಅಭಿನಯದಲ್ಲೇ ಚಂದನವನದ ಭವಿಷ್ಯದ ತಾರೆ ಎಂಬ ಭರವಸೆಯನ್ನ ಮೂಡಿಸಿದ್ದಾರೆ.

ಸಿಕ್ಕ ಅವಕಾಶವನ್ನ ಎರಡು ಕೈಗಳಿಂದ ಅಪ್ಪಿಕೊಂಡ ನಟಿಮಣಿಯರು ಅತ್ಯುತ್ತಮ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಮೊದಲ ಅಭಿನಯದ ನೋಡಿದ ಸ್ಯಾಂಡಲ್ ವುಡ್ ಮಂದಿ, ಈ ನಟಿಯರಿಗೆ ಮತ್ತಷ್ಟು ಆಫರ್ ಗಳು ನೀಡುತ್ತಿದ್ದಾರೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

'ಯುಟರ್ನ್' ಖ್ಯಾತಿಯ ಶ್ರದ್ಧಾ ಶ್ರೀನಾಥ್, ಮುಂಗಾರು ಮಳೆ-2 ಚಿತ್ರದ ನೇಹಾ ಶೆಟ್ಟಿ, ತಿಥಿ ಖ್ಯಾತಿಯ ಪೂಜ, ಇಷ್ಟಕಾಮ್ಯ ಚಿತ್ರದ ಕಾವ್ಯ ಶೆಟ್ಟಿ, ಹೀಗೆ ಇನ್ನೂ ಹಲವರು ಈ ವರ್ಷದ ಅತ್ಯುತ್ತಮ ನವ ನಟಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2016 ರಲ್ಲಿ ಉತ್ತಮ ಅಭಿನಯ ನೀಡಿದ ನವ ನಾಯಕಿಯರ ಪಟ್ಟಿ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಅವುಗಳಲ್ಲಿ ನಿಮ್ಮ ಪ್ರಕಾರ ಈ ವರ್ಷದ ಅತ್ತ್ಯುತ್ತಮ ನವ ನಟಿ ಯಾರು ಅಂತ ನಮಗೆ ತಿಳಿಸಿ....

ಶ್ರದ್ಧಾ ಶ್ರೀನಾಥ್

'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಿದ್ದ 'ಯುಟರ್ನ್' ಈ ವರ್ಷದ ಯಶಸ್ವಿ ಚಿತ್ರ. ಈ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ನಟಿ ಶ್ರದ್ಧಾ ಶ್ರೀನಾಥ್. ಡಿ-ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಶ್ರೀನಾಥ್, ಚೊಚ್ಚಲ ಅಭಿನಯದಲ್ಲೇ ಮೋಡಿ ಮಾಡಿದ್ರು. ಇದರ ಪರಿಣಾಮ ಚಂದನವನದಲ್ಲಿ ಅಷ್ಟೇ ಅಲ್ಲ ನೆರೆರಾಜ್ಯಗಳಲ್ಲೂ ಶ್ರದ್ಧಾ ಬ್ಯುಸಿಯಾಗಿದ್ದಾರೆ.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು?]

ಅಪೂರ್ವ

ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ತಮ್ಮ ಕನಸಿನ ಚಿತ್ರ 'ಅಪೂರ್ವ' ಮೂಲಕ ಕನ್ನಡಕ್ಕೆ ಪರಿಚಯಿಸಿದ ನಟಿ ಅಪೂರ್ವ. ಮೊದಲ ಚಿತ್ರದಲ್ಲೇ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಂಡ 'ಅಪೂರ್ವ' ಈ ವರ್ಷ ಡೆಬ್ಯೂ ಮಾಡಿದ ಯುವ ಪ್ರತಿಭೆ.[2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?]

ಕಾವ್ಯ ಶೆಟ್ಟಿ

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡದ ಹುಡುಗಿ ಕಾವ್ಯ ಶೆಟ್ಟಿ, 'ಇಷ್ಟಕಾಮ್ಯ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಮ್ ಬ್ಯಾಕ್ ಮಾಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನದ ಈ ಚಿತ್ರದಲ್ಲಿ ವಿಜಯ ಸೂರ್ಯ ಅವರ ಜೊತೆ ಕಾವ್ಯಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಇವರ ಅಭಿನಯಕ್ಕೆ ಉತ್ತಮ ಪ್ರಶಂಸೆ ಸಿಕ್ಕಿತ್ತು.[ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.?]

ನೇಹಾ ಶೆಟ್ಟಿ

ಕನ್ನಡದ ಎವರ್ ಗ್ರೀನ್ ಚಿತ್ರ 'ಮುಂಗಾರು ಮಳೆ' ಚಿತ್ರದ ಮೂಲಕ ಪೂಜಾಗಾಂಧಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದರು. ಅದೇ ರೀತಿ 'ಮುಂಗಾರು ಮಳೆ-2' ಚಿತ್ರದ ಮೂಲಕ ಗಾಂಧಿನಗರದಕ್ಕೆ ಲಗ್ಗೆಯಿಟ್ಟ ನಟಿ ನೇಹಾ ಶೆಟ್ಟಿ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ನೇಹಾ ಶೆಟ್ಟಿ ಈ ವರ್ಷದ ಅತ್ಯುತ್ತಮ ಯುವ ನಟಿಯ ಪಟ್ಟಿಯಲ್ಲಿರುವ ಮತ್ತೊಬ್ಬ ಯುವ ಪ್ರತಿಭೆ.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?]

ಸನುಷ

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಕಬೀರ' ಚಿತ್ರದ ಮೂಲಕ ಕರ್ನಾಟಕಕ್ಕೆ ಬಂದ ನಟಿ ಸನುಷ. ಮಲಯಾಳಂ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಸನುಷಗೆ ಕಬೀರ ಮೊದಲ ಕನ್ನಡ ಚಿತ್ರ. ಹೀಗಾಗಿ, ಈ ವರ್ಷದ ಅತ್ಯುತ್ತಮ ಕನ್ನಡದ ನವನಟಿಯರಲ್ಲಿ ಸನುಷ ಅವರ ಹೆಸರು ಕೇಳುತ್ತಿದೆ.

ಪೂಜಾ

'ತಿಥಿ' ಚಿತ್ರದ ಮೂಲಕ ಹಲವು ಪ್ರತಿಭೆಗಳು ಹೊರಬಂದವು. ಇವರಲ್ಲಿ ನಟಿ ಪೂಜಾ ಕೂಡ ಒಬ್ಬರು. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಪೂಜಾ ಕೂಡ ಈ ವರ್ಷ ಗಮನ ಸೆಳೆದಿದ್ದಾರೆ.

ಇವರಲ್ಲಿ ಯಾರು ವರ್ಷದ ಯುವನಟಿ?

ಈ ಎಲ್ಲ ನಾಯಕಿಯರು ಈ ವರ್ಷ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ತಮ್ಮದೇ ಆದ ಪ್ರತಿಭೆ ಮೂಲಕ ಕನ್ನಡ ಕಲಾರಸಿಕರ ಮನಗೆದ್ದರವರು. ಇವರಲ್ಲಿ ಯಾರು ಈ ವರ್ಷದ ಅತ್ಯುತ್ತಮ ನಟ ನಟಿ ಎನಿಸಿಕೊಳ್ತಾರೆ ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

Read more about: best of 2016, year end special
English summary
2016 witnessed many newcomers entering Sandalwood. Among-st those here is the list of Talented New Actress who made promising entry into Sandalwood in 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada