»   » ಏನೇ ಪ್ರಾಬ್ಲಂ ಆದ್ರೂ ಹೇಳಿ 'ಎಲ್ಲಿದ್ದೀರಾ ಯಶ್'?

ಏನೇ ಪ್ರಾಬ್ಲಂ ಆದ್ರೂ ಹೇಳಿ 'ಎಲ್ಲಿದ್ದೀರಾ ಯಶ್'?

Written By:
Subscribe to Filmibeat Kannada

ಕಳೆದ ಎರಡೂ ಮೂರು ವಾರಗಳಿಂದ, ಮಾಧ್ಯಮಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ನಡುವಿನ ವಾದ-ವಿವಾದಗಳನ್ನ ನೀವೆಲ್ಲ ನೋಡೇ ಇರ್ತೀರಾ? ಅದ್ರಲ್ಲೂ ಕೆಲವೊಂದು ಮಾಧ್ಯಮಗಳಂತೂ ಸಮಾಜದಲ್ಲಿ ಆಗಿದ್ದೇ, ಹೋಗಿದ್ದೆಕ್ಕೆಲ್ಲ 'ಎಲ್ಲಿದ್ದೀರಾ ಯಶ್?, ಎಲ್ಲಿ ಹೋಗಿದ್ದೀರಾ ಯಶ್? ಅಂತ ಹೇಳಿದ್ದನ್ನ ಎಲ್ಲರೂ ಗಮನಿಸಿದ್ದಾರೆ

ಈಗ ಇದೇ ಪ್ರಶ್ನೆಯನ್ನ ಇಟ್ಟುಕೊಂಡು, ''ಸಾಮಾಜಿಕ ಜವಾಬ್ದಾರಿ ಮರೆತ ಚಾನೆಲ್ ಗಳ ಹುಚ್ಚಾಟವೇ ನಮ್ಮ ಗೀತಾವಸ್ತು'' ಎಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾಮಿಡಿ ಸಾಂಗ್ ನ್ನ ಕಂಪೋಸ್ ಮಾಡಿದ್ದಾರೆ.[ಪಬ್ಲಿಕ್ ಟಿವಿಗೆ ನಟ ಯಶ್ ನೀಡಿದ ಸ್ಪಷ್ಟನೆ ಏನು?]

ಈ ಸಾಂಗ್ ನ ವಿಶೇಷತೆ ಏನಪ್ಪಾ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್ ಆರ್ ರಂಗನಾಥ್ ಅವರೇ ಹಾಡಿನಲ್ಲಿ ಪ್ರಮುಖ ಪಾತ್ರಧಾರಿಗಳು. ಮುಂದೆ ಓದಿ.....

ಸೋಶಿಯಲ್ ಮಿಡಿಯಾದಲ್ಲಿ 'ಎಲ್ಲಿದ್ದೀರಾ ಯಶ್'?

ಕೆಲ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದ 'ಎಲ್ಲಿದ್ದೀರಾ ಯಶ್?' ಎಂಬ ಪ್ರಶ್ನೆ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನ ಗಮನಿಸಿದ ಜನರು ತಮ್ಮ ಮನೆಯಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ 'ಎಲ್ಲಿದ್ದೀರಾ ಯಶ್' ಎಂಬ ಕಮೆಂಟ್ ಗಳನ್ನ ಸೋಶಿಯಲ್ ಮಿಡಿಯಾದಲ್ಲಿ ಹಾಕುತ್ತಿದ್ದರು. ಈಗ ಇದೇ ಪ್ರಶ್ನೆ ಹಾಡಾಗಿದೆ.[ದಿಢೀರ್ ಅಂತ ಚಾನಲ್ ಗಳಿಗೆ ಬರಲು ಯಶ್ ಒಪ್ಪಿದ್ಹೇಗೆ? 'ಆ ಹತ್ತು' ನಿಮಿಷದಲ್ಲಿ ಏನಾಯ್ತು? ]

ಯಶ್ ಹಾಗೂ ಪಬ್ಲಿಕ್ ಟಿವಿ ರಂಗನಾಥ್

ಯಶ್ ಅವರ ಅಭಿಮಾನಿಗಳೊಂದಿಷ್ಟು ಜನ ಸೇರಿಕೊಂಡು, 'ಎಲ್ಲಿದ್ದೀರಾ ಯಶ್' ಎಂಬ ಹಾಡೊಂದನ್ನು ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಹಾಡಿನಲ್ಲಿ ನಟ ಯಶ್ ಮತ್ತು ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್ ಅವರೇ ಪ್ರಮುಖ ಪಾತ್ರಧಾರಿಗಳು.['ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು]

ನೋಟು ಬ್ಯಾನ್ ಆಗಿದೆ ಎಲ್ಲಿದ್ದೀರಾ ಯಶ್?

''500, 1000 ನೋಟುಗಳನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದರಿಂದ ಚಿಲ್ಲರೆಗಾಗಿ ಜನರು ಪರದಾಡುತ್ತಿದ್ದಾರೆ. ಎಲ್ಲಿದ್ದೀರಾ ಯಶ್'' ಎಂದು ಹಾಡಿನ ಸಾಲಿನಲ್ಲಿ ಬಳಸಲಾಗಿದೆ.

ಬಾವಿಯಲ್ಲಿ ನೀರಿಲ್ಲ: ಎಲ್ಲಿದ್ದೀರಾ ಯಶ್?

''ಬಾವಿಯಲ್ಲಿ ನೀರಿಲ್ಲ, ಕಡಲಲ್ಲಿ ಮೀನಿಲ್ಲ, ಜೇಬಲ್ಲಿ ಕಾಸಿಲ್ಲ 'ಎಲ್ಲಿದ್ದೀರಾ ಯಶ್?''

ರೈತರ ಪರದಾಟ: ಎಲ್ಲಿದ್ದೀರಾ ಯಶ್?

''ರೈತರ ಪರದಾಟ, ನೀರಿಗಾಗಿ ಹೊಡೆದಾಟ, ಮೋದಿಯ ಇಂಪ್ಯಾಕ್ಟ್, ಟ್ರಂಪ್ ಫರ್ಫೆಕ್ಟ್, ಟೆರರಿಸಂ ಕಿಕ್ ಔಟ್ 'ಎಲ್ಲಿದ್ದೀರಾ ಯಶ್?''

ಯಶ್ ಅಭಿಮಾನಿಗಳಿಂದ ರಚನೆ

ಈ ಹಾಡಿನ ಸಾಹಿತ್ಯ ಬರೆದಿರುವವರು ಅರ್ಜುನ್ ಲ್ಯೂಯಿಸ್. ಇನ್ನು ಹಾಡುವುದರ ಜೊತೆಗೆ, ಮ್ಯೂಸಿಕ್ ಮಾಡಿ, ಮಿಮಿಕ್ರಿ ಮಾಡಿದವರು ಡಾಲ್ವಿನ್ ಕೊಳಲಗಿರಿ ಎಂಬುವವರು. ಈ ಹಾಡನ್ನು ಮೋಟೋ ಜಿ3ಯಲ್ಲಿ ಶೂಟ್ ಮಾಡಿ, ಎಡಿಟಿಂಗ್ ಮಾಡಿದವರು ವಿವೇಕ್ ಗೌಡ.

'ಎಲ್ಲಿದ್ದೀರಾ ಯಶ್' ಹಾಡು

'ಎಲ್ಲಿದ್ದೀರಾ ಯಶ್' ಹಾಡನ್ನ ಇನ್ನೂ ಕೇಳಿಲ್ವಾ? ಹಾಗಾದ್ರೆ, ಈ ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ....

English summary
A team from Mangaluru gave a comical touch to the entire issue Between Yash and News Channels by bringing out a video named 'Yelliddira Yash'. The song which was written, composed, sung, filmed and recorded in a single day has been creating lot of buzz on social media and have got thumbs up from the viewers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada