»   » ಆಸರೆ ಕನ್ನಡ ಕಿರು ಚಿತ್ರ ನೋಡಿ ವೋಟ್ ಮಾಡಿ

ಆಸರೆ ಕನ್ನಡ ಕಿರು ಚಿತ್ರ ನೋಡಿ ವೋಟ್ ಮಾಡಿ

By: ಅಮರನಾಥ್ ವಿ.ಬಿ
Subscribe to Filmibeat Kannada

ಹೆತ್ತು ಹೊತ್ತು ಬೆಳೆಸಿದವರಿಗೆ ಸಮಯ, ಮನಸು ಕೊಡಲಾಗದ ಇಂದಿನ ಯುವ ಪೀಳಿಗೆಯ ನಿರ್ಲಕ್ಷ್ಯ ಭಾವ ಹಾಗೂ ವೃದ್ಧರ ನಿಜವಾದ ಸಂತಸದ ಕ್ಷಣಗಳತ್ತ ಬೆಳಕು ಚೆಲ್ಲುವ ಪ್ರಯತ್ನವನ್ನು ಬೈಟು ಕಾಫೀ ಫಿಲ್ಮ್ಸ್ ತಂಡ 'ಆಸರೆ' ಎಂಬ ಕಿರುಚಿತ್ರದ ಮೂಲಕ ಮಾಡಿದೆ. ಯೂಟ್ಯೂಬ್ ನಲ್ಲಿ ಈ ಚಿತ್ರ ವೀಕ್ಷಿಸಿ ಲೈಕ್ ಬಟನ್ ಒತ್ತಿದರೆ People Choice Award ಗೆಲ್ಲುವ ಅವಕಾಶ ಸಿಗಲಿದೆ. ಚಿತ್ರದ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

ಹೇಗೆ ಎಷ್ಟೊಂದು ಕಛೇರಿಗಳಲ್ಲಿ ಭ್ರಷ್ಟತೆ ಹರಡಿದೆಯೋ ಹಾಗೆ ಎಲ್ಲಾ ಮನೆ-ಮನಗಳಲ್ಲಿ ಭ್ರಷ್ಟತೆ ಹರಡಿದೆ. ಪರಿಣಾಮ ಪಕ್ಕಾ ಪ್ರಾಕ್ಟಿಕಲ್ ಪ್ರಪಂಚದಲ್ಲಿ ಹೆತ್ತು ಹೊತ್ತು ಬೆಳೆಸಿದವರಿಗೆ ಸಮಯ, ಮನಸು ಕೊಡಲಾಗದ ಎಷ್ಟೊಂದು ಪ್ರೌಢರು ನಮ್ಮ ಕಣ್ಮುಂದೆ ಸಿಗುತ್ತಾರೆ.[ಬದುಕಿನ ಅರ್ಥ ತಿಳಿಸುವ 'ಸೆವೆಂಟೀನ್' ಚಿತ್ರ]

ವಯಸ್ಸಾದವರು ಮನೆಯಲ್ಲಿ ಮನೆಯವರೊಂದಿಗೆ ಉಂಡ್ಕೊಂಡು ತಿನ್ಕೊಂಡು ಖುಷಿಯಾಗಿರಬೇಕಾದವರು ಅನಾಥರಂತೆ ವೃದ್ಧಾಶ್ರಮದಲ್ಲಿರ ಬೇಕಾಗಿದೆ. ಸ್ವಂತ ಮಕ್ಕಳೇ ತಮ್ಮನ್ನು ಅಲ್ಲಿಗೆ ಅಟ್ಟಿದ್ದರೂ ಮಕ್ಕಳ ಮೇಲಿನ ಪ್ರೀತಿಗೆ ಒಂದ್ಚೂರು ಚ್ಯುತಿ ಬರೋದಿಲ್ಲ - ಅದು ಹೆತ್ತ ಕರುಳು. [ಹಿರಿಯ ನಾಗರಿಕರಿಗೆ ವಿಮೆ ಯೋಜನೆ]

ಒಂದ್ಕಡೆ ಕೊಟ್ಟಷ್ಟೂ ಬರಿದಾಗದ ಪ್ರೀತಿಯ ಮನಸು, ಇನ್ನೊಂದ್ಕಡೆ ಪ್ರೀತಿ ಕೊಡಲು ಮನಸೆ ಬಾರದ ಮನಸು - ಇವರೆಡರ ನಡುವೆ ಇರುವ ಸಂಬಂಧವನ್ನು ಎತ್ತಿ ಹಿಡಿಯುವ ಪ್ರಯತ್ನ ಈ ನಮ್ಮ ಬೈಟೂ ಕಾಫೀ ಫಿಲ್ಮ್ಸ್ "ಆಸರೆ". "ಆಸರೆ"ನೋಡಿ ವಯಸ್ಸಾದ ತಂದೆ-ತಾಯಿಗಳಿಗೆ ಮಕ್ಕಳು "ಆಸರೆ"ಯಾದರೆ ಇದನ್ನು ಮಾಡಿದ್ದಕ್ಕೂ ಸಾರ್ಥಕ. [ಏನ್ ಹುಡ್ಗರೋ ಯಾಕೆ ಹಿಂಗಾಡ್ತಾರೋ ಸಿಗ್ನಲ್ ನಲ್ಲಿ]

ಈ ಪ್ರಯತ್ನಕ್ಕೆ ಇಂಬುಕೊಡುವಂತೆ ಯೆಸ್ ಫೌಂಡೇಷನ್-ನ 101 ಘಂಟೆಗಳಲ್ಲಿ ಕಿರುಚಿತ್ರ ರಾಷ್ಟ್ರೀಯ ಮಟ್ಟದ ಸ್ಫರ್ಧೆಯಲ್ಲಿ ಮೊದಲ 50ರಲ್ಲಿ ಸ್ಥಾನಗಳಿಸಿ People Choice Award ಗೆ ಆಯ್ಕೆ ಆಗಿದೆ. ತಾವುಗಳು ನೋಡಿ ಇಷ್ಟವಾದರೆ ಯೂ-ಟೂಬ್(Youtube)ನಲ್ಲಿ ಲೈಕ್(Like)ಮಾಡಿ, ಸ್ಪರ್ಧೆಯಲ್ಲಿ ಗೆಲ್ಲಲು ಆಸರೆಯಾಗುತ್ತದೆ.

Making: 101 ಘಂಟೆಗಳ ಪಯಣ...
  

Making: 101 ಘಂಟೆಗಳ ಪಯಣ...

ಆಗಷ್ಟ್-15 ರ ಬೆಳಿಗ್ಗೆ 6.30 ಕ್ಕೆ ಯಾವುದರ ಮೇಲೆ ಕಿರುಚಿತ್ರ ಮಾಡ್ಬೇಕು ಅಂತ ಗೊತ್ತಾಯ್ತು. ನಮಗೆ ಬಂದದ್ದು "ವಯಸ್ಸಾದವರ ಆರೈಕೆ". ತಡಮಾಡದೆ ಅದರ ಬಗ್ಗೆ ವಿಚಾರ ಮಾಡೋದಕ್ಕೆ ಶುರುಮಾಡಿದ್ವಿ, ತಿಂಡಿ-ಕಾಫಿ ಬ್ರೇಕುಗಳು ಬ್ರೇಕುಗಳಾಗದೆ ವಿಚಾರ ವಿನಿಮಯಕ್ಕೆ ನಾಂದಿ ಹಾಡಿದವು. ಏನು ಮಾಡುವುದು ಅಂತ ನಿರ್ಧರಿಸಿದ ಮೇಲೆ, ಒಂದು ತಂಡ ಭರತ್ ನೇತೃತ್ವದಲ್ಲಿ ಕಥೆ-ಚಿತ್ರಕಥೆ ಹೆಣೆಯುವುದರಲ್ಲಿ ಮಗ್ನವಾಗಿದ್ದರೆ. ಮತ್ತೊಂದು ತಂಡ ಅಮರ್ ನೇತೃತ್ವದಲ್ಲಿ ವೃದ್ಧಾಶ್ರಮ ಹುಡುಕುವುದರಲ್ಲಿ ತಲ್ಲೀನವಾಗಿತ್ತು.

ಕಡಿಮೆ ಅವಧಿಯಲ್ಲಿ ಕ್ರಿಯಾಶೀಲತೆಗೆ ಬೆಲೆ
  

ಕಡಿಮೆ ಅವಧಿಯಲ್ಲಿ ಕ್ರಿಯಾಶೀಲತೆಗೆ ಬೆಲೆ

ಕೇವಲ 101 ತಾಸುಗಳಲ್ಲಿ ಎಲ್ಲಾ ಮಾಡಿ ಮುಗಿಸಬೇಕಾಗಿದ್ದರಿಂದ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಸಮಯ ಮಾತ್ರ ಅಂತ ಯೋಜನೆಯನ್ನು ಮಾಡಿದ ಪರಿಣಾಮ, ಎಲ್ಲಾ ಕೆಲಸಗಳು ಶರವೇಗದಲ್ಲಿ ನಡೆಯುತ್ತಿದ್ದವು.

ಎಷ್ಟೊಂದು ವೃದ್ಧಾಶ್ರಮಗಳಿಗೆ ಕರೆಮಾಡಿ ಕೇಳಿದ್ವಿ ಯಾರೂ ಶೂಟಿಂಗ್ ಮಾಡಲು ಅವಕಾಶ ಕೊಡಲಿಲ್ಲ. ಕೊನೆಯಲ್ಲಿ ಬೇರೆ ದಾರಿಕಾಣದೆ ನಾವು ಸೇರಿದ್ದ ಜಾಗ, ತಂಡದ ಸದಸ್ಯ ಗಿರೀಶ್ ಅಣ್ಣನ ಮನೆಯನ್ನೆ ವೃದ್ಧಾಶ್ರಮವಾಗಿ ಬದಲಾಯಿಸಲು ನಿರ್ಧಾರ ಮಾಡಿದ್ವಿ. ಅವರಣ್ಣನ ಒಪ್ಪುಗೆಯನ್ನು ಗಿರೀಶ್ ಪಡೆದದ್ದು ಎಲ್ಲರನ್ನೂ ನಿರಾಳವಾಗಿಸಿತ್ತು.

ಬೆಳಿಗಿನ ಜಾವ 5 ಘಂಟೆಗೇ ಶೂಟಿಂಗ್ ಪ್ರಾರಂಭ
  

ಬೆಳಿಗಿನ ಜಾವ 5 ಘಂಟೆಗೇ ಶೂಟಿಂಗ್ ಪ್ರಾರಂಭ

ಯಾವ ಪಾತ್ರಕ್ಕೆ ಯಾರ್ಯಾರು ಅಂತ ನೋಡಿ, ಅವರುಗಳಿಗೆ ಕರೆಮಾಡಿ ಮರುದಿನ ಬೆಳಗಿನ ಜಾವ ಬರಲು ಹೇಳಿದ್ವಿ. ಒಬ್ಬೊಬ್ರು ಒಂದೊಂದು ಕಡೆ ಹೋಗಿ ಪ್ರೊಡಕ್ಷನ್ ಸಲಕರಣೆಗಳನ್ನು ತಂದ್ವಿ ಜೊತೆಗೆ ಕಥೆ-ಚಿತ್ರಕಥೆಯೂ ರಾತ್ರಿ ಅಷ್ಟೊತ್ತಿಗೆ ತಯಾರಾಗಿತ್ತು. ಮರುದಿನ ಅಂದರೆ ಎರಡನೇ ದಿನ ಬೆಳಿಗಿನ ಜಾವ 5 ಘಂಟೆಗೇ ಶೂಟಿಂಗ್ ಪ್ರಾರಂಭ ಮಾಡಿದ್ವಿ. ಇಲ್ಲಾ ಅಂದ್ರೆ ಒಂದಿನದಲ್ಲಿ ಎಲ್ಲಾ ಮುಗಿಸಲು ಆಗ್ತಿರಲಿಲ್ಲ.

101 ಘಂಟೆ ಮೊದಲಿಗೆ ಕೊನೆಯ ಆವೃತ್ತಿ
  

101 ಘಂಟೆ ಮೊದಲಿಗೆ ಕೊನೆಯ ಆವೃತ್ತಿ

ಒಂದೊಂದು ಸೀನ್ ಆದಹಾಗೆ ರಾಘವೇಂದ್ರ ಅವರು ಸ್ಪಾಟ್ ಎಡಿಟಿಂಗ್ ಮಾಡ್ತಾ ಇದ್ರು. ರಾತ್ರಿ ಹತ್ತಕ್ಕೆ ಶೂಟಿಂಗ್ ಮುಗಿಸುವಷ್ಟರಲ್ಲಿ ಚಿತ್ರಕಥೆಗೆ ತಕ್ಕಂತೆ ಒಂದು ಮಟ್ಟಿಗೆ ಎಡಿಟೆಡ್ ಕಾಪಿ ತಯಾರಾಗಿತ್ತು. ಅದನ್ನ ಸಂಗೀತ ನಿರ್ದೇಶಕರಿಗೆ ಮರುದಿನ ಬೆಳಿಗ್ಗೆ ತಲುಪಿಸಿದ್ವಿ. ಒಂದು ಕಡೆ ಡಬ್ಬಿಂಗ್ ಮಾಡಿ ಮುಗಿಸಿದ್ರೆ, ಇನ್ನೊಂದೆಡೆ ಕೊನೆಯ ಹಂತದ ಎಡಿಟಿಂಗ್ ಮತ್ತು ಸಂಗೀತ ನಿರ್ದೇಶನ ನಡೆಯುತ್ತಿತ್ತು.

ಸಂಗೀತದೊಂದಿಗೆ ಒಂದು ಡ್ರಾಫ್ಟ್ ಸಂಜೆ ಸಿಕ್ತು. ನಾವುಗಳು ನೋಡಿ ಬದಲಾವಣೆಗಳನ್ನು ಹೇಳೋದು, ಅವರು ಇನ್ನೊಂದು ಆವೃತ್ತಿ ಕೊಡೋದು ಹಲವಾರು ಸಲ ಆಗಿ ಕೊನೆಗೂ ನಾಲ್ಕನೆ ದಿನ ಬೆಳಿಗ್ಗೆಗೆ ಎಲ್ಲಾ ತಯಾರಾಗಿತ್ತು. 101 ಘಂಟೆ ಮೊದಲಿಗೆ ಕೊನೆಯ ಆವೃತ್ತಿ ತಯಾರಾಗಿ "ಯೆಸ್ ಫೌಂಡೇಷನ್" ತಲುಪಿತ್ತು.

ಪಾತ್ರಧಾರಿಗಳು, ನಿರ್ಮಾಣ ತಂಡ
  

ಪಾತ್ರಧಾರಿಗಳು, ನಿರ್ಮಾಣ ತಂಡ

ಪಾತ್ರಧಾರಿಗಳು: ವನಜಾ ಕೊಲಗಿ, ಗಿರೀಶ್ ಬಿಜ್ಜಲ್, ಅನುಷಾ ಮೂರ್ತಿ, ಡಾ|| ಸೋಮಶೇಖರ್ ಬಿಜ್ಜಲ್, ಶ್ರೀದೇವಿ ಬಿಜ್ಜಲ್, ಮಾಸ್ಟರ್ ಸಮರ್ಥ್ ,ರಾಘವೇಂದ್ರ ಜಿ ಹಾಗೂ ವರುಣ್ ಪಟೇಲ್

ನಿರ್ಮಾಣ ತಂಡ:
ಚಿತ್ರಕಥೆ-ನಿರ್ದೇಶನ: ಭರತ್ ಬಾಳೇಮನೆ
ಛಾಯಾಗ್ರಹಣ: ಗುರುರಾಜ್ ಬಾಗ್ಲಿ
ಪ್ರೊಡಕ್ಷನ್: ಅಮರನಾಥ್ ವಿ.ಬಿ
ಕಥೆ-ಸಹ ನಿರ್ದೇಶನ: ಶ್ರೀಧರ್ ರೆಡ್ಡಿ
ಸ್ಪಾಟ್-ಎಡಿಟಿಂಗ್ ಮತ್ತು ಸಹಾಯಕ ನಿರ್ದೆಶನ: ರಾಘವೇಂದ್ರ ಜಿ.
ಹಿನ್ನೆಲೆ ಸಂಗೀತ: ಅಜಿತ್ ಪದ್ಮನಾಭ್
ಎಡಿಟಿಂಗ್ ಹಾಗೂ ಸೌಂಡ್ ಡೀಸೈನ್: ಹರೀಶ್ ಮನೋಹರ್

ಆಸರೆ’ಯ ಕೊಂಡಿ ಇಲ್ಲಿದೆ ವೀಕ್ಷಿಸಿ

ನೂರೊಂದು ಘಂಟೆಗಳಲ್ಲಿ ತಯಾರಾದ ಆಸರೆ, ನೂರೊಂದು ಜನರಲ್ಲಿ ಬದಲಾವಣೆ ತರುವಂತಾಗಲೆನ್ನುವ ಆಶಯದೊಂದಿಗೆ...ಬೈಟೂ ಕಾಫೀ ಫಿಲ್ಮ್ಸ್ ತಂಡ

English summary
Watch inspiring short film Aasare kannada Short film by By 2 Coffee team and vote at #YESiamtheCHANGE Popular Choice Awards. Follow these simple steps to vote.Aasare film selected to top 50 in the list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada