»   » ಗಣೇಶ್-ಭಟ್ ಕಾಂಬಿನೇಷನ್ ನಲ್ಲಿ 'ಗಾಳಿಪಟ-2' ಬರಲಿದೆ.. ನಿರೀಕ್ಷಿಸಿ..

ಗಣೇಶ್-ಭಟ್ ಕಾಂಬಿನೇಷನ್ ನಲ್ಲಿ 'ಗಾಳಿಪಟ-2' ಬರಲಿದೆ.. ನಿರೀಕ್ಷಿಸಿ..

Posted By:
Subscribe to Filmibeat Kannada

'ಮುಂಗಾರು ಮಳೆ' ಸೂಪರ್ ಡ್ಯೂಪರ್ ಹಿಟ್ ಆದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಮತ್ತು ಗಣೇಶ್ ಒಂದಾಗಿದ್ದು 'ಗಾಳಿಪಟ' ಚಿತ್ರದಲ್ಲಿ.

2008ರಲ್ಲಿ ತೆರೆಕಂಡ 'ಗಾಳಿಪಟ' ಚಿತ್ರ ಗಾಂಧಿನಗರದ ಗಲ್ಲಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿತ್ತು. 'ಗಾಳಿಪಟ' ಚಿತ್ರದ ನಂತರ ಭಟ್ರು ಮತ್ತು ಗಣಿ 'ಮುಗುಳ್ನಗೆ' ಚಿತ್ರದಲ್ಲಿ ಒಟ್ಟಾಗಿದ್ದಾರೆ.['ಮುಗುಳುನಗೆ' ಚಿತ್ರಕ್ಕಾಗಿ ಭಟ್ಟರು ಬರೆದರು 'ಮುಗುಳುಗೀತೆ'.!]

Yogaraj Bhat and Ganesh planning for 'Galipata 2'

'ಮುಗುಳ್ನಗೆ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ ಭಟ್-ಗಣಿ ಅಡ್ಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಯೋಗರಾಜ್ ಭಟ್ 'ಗಾಳಿಪಟ-2' ಸಿನಿಮಾ ಮಾಡ್ತಾರಂತೆ.[ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ']

ಇದು ಜಸ್ಟ್ ಅಂತೆ-ಕಂತೆ ಅಲ್ಲ, 'ಗಾಳಿಪಟ-2' ಚಿತ್ರ ಮಾಡುವ ಬಗ್ಗೆ ಖುದ್ದು ಗಣೇಶ್ ಕನ್ ಫರ್ಮ್ ಮಾಡಿದ್ದಾರೆ. ಹೆಸರೇ ಹೇಳುವಂತೆ 'ಗಾಳಿಪಟ' ಚಿತ್ರದ ಮುಂದುವರಿದ ಭಾಗವಾಗಲಿದೆ 'ಗಾಳಿಪಟ-2' ಎಂದು ಒಪ್ಪಿಕೊಂಡಿದ್ದಾರೆ ಗಣೇಶ್.

Yogaraj Bhat and Ganesh planning for 'Galipata 2'

ಸದ್ಯಕ್ಕೆ 'ಮುಗುಳ್ನಗೆ' ಚಿತ್ರೀಕರಣದಲ್ಲಿ ಯೋಗರಾಜ್ ಭಟ್ ಮತ್ತು ಗಣೇಶ್ ಬಿಜಿಯಾಗಿರುವುದರಿಂದ 'ಗಾಳಿಪಟ-2' ಚಿತ್ರ ಸೆಟ್ಟೇರಲು ಇನ್ನೂ ಬೇಜಾನ್ ಟೈಮ್ ಬೇಕು.

English summary
Director Yogaraj Bhat and Kannada Actor Ganesh are planning for the sequel of 2008 Block-buster 'Galipata'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X