For Quick Alerts
  ALLOW NOTIFICATIONS  
  For Daily Alerts

  ಒಂದಾದ ಯೋಗರಾಜ್ ಭಟ್-ಶಶಾಂಕ್: ಇಬ್ಬರು ಡೈರೆಕ್ಟರ್ ಗಳ ಗರಡಿಯಲ್ಲಿ ರಿಷಿ.!

  |

  ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಲು ಯೋಗರಾಜ್ ಭಟ್ ಮತ್ತು ಶಶಾಂಕ್ ರೆಡಿಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಒಂದಾಗಿರುವ ಇವರಿಬ್ಬರೂ, ಒಂದು ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

  ಹೌದು, ಗಾಂಧಿನಗರದ ಯಶಸ್ವಿ ನಿರ್ದೇಶಕರಾಗಿರುವ ಯೋಗರಾಜ್ ಭಟ್ ಮತ್ತು ಶಶಾಂಕ್ ನಿರ್ಮಾಣದಲ್ಲಿ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ. ಯೋಗರಾಜ್ ಸಿನಿಮಾಸ್ ಮತ್ತು ಶಶಾಂಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಇನ್ನೂ ಹೆಸರಿಡದ ಚಿತ್ರ ನಿರ್ಮಾಣವಾಗಲಿದೆ.

  ಈ ಚಿತ್ರಕ್ಕೆ ಮೋಹನ್ ಸಿಂಗ್ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕರಾಗಿ ಹಲವು ಸಿನಿಮಾಗಳಲ್ಲಿ ಮೋಹನ್ ಸಿಂಗ್ ಕೆಲಸ ಮಾಡಿದ್ದಾರೆ.

  'ಮುಂಗಾರು ಮಳೆ', 'ಮೊಗ್ಗಿನ ಮನಸ್ಸು' ಮತ್ತು ಹೆಣ್ಣು ಮಕ್ಕಳು

  ಅಂದ್ಹಾಗೆ, ಯೋಗರಾಜ್ ಭಟ್-ಶಶಾಂಕ್ ಕಾಂಬಿನೇಶನ್ ನಲ್ಲಿ ಮೂಡಿಬರುವ ಚಿತ್ರಕ್ಕೆ ರಿಷಿ ನಾಯಕರಾಗಿ ಆಯ್ಕೆ ಆಗಿದ್ದಾರೆ. ಹೀರೋ ಒಬ್ಬರು ಬಿಟ್ಟರೆ ಉಳಿದ ತಾರಾಬಳಗ ಇನ್ನೂ ಫೈನಲ್ ಆಗಿಲ್ಲ. ಅಲ್ಲದೇ, ಟೈಟಲ್ ಕೂಡ ಫಿಕ್ಸ್ ಆಗಿಲ್ಲ.

  ಯೋಗರಾಜ್ ಭಟ್ ಸರ್ ನೀವು ಹಾಕೋ 'ಗುಂಡು' ಯಾವುದು?

  ಹೇಳಿ ಕೇಳಿ ಇಲ್ಲಿ ಭಟ್ರು-ಶಶಾಂಕ್ ಒಂದಾಗಿರುವುದರಿಂದ ಪಂಚಿಂಗ್ ಡೈಲಾಗ್ಸ್, ಕ್ಯಾಚಿ ಲಿರಿಕ್ಸ್ ಗೇನೂ ಚಿತ್ರದಲ್ಲಿ ಕಮ್ಮಿ ಇರಲ್ಲ. ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ವರ್ಕ್ ಗೆ ಚಾಲನೆ ಕೊಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಹೂರ್ತ ಸಮಾರಂಭ ನಡೆಯಲಿದೆ.

  English summary
  Yogaraj Bhat and Shashank to produce a movie which features Rishi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X