For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್‌ ಭಟ್‌ರ 'ಗರಡಿ' ಮುಕ್ತಾಯ: ಇನ್ನೇನಿದ್ರೂ ಥಿಯೇಟರ್‌ನಲ್ಲೇ ಆಟ!

  |

  ಯೋಗರಾಜ್ ಭಟ್ ನಿರ್ದೇಶಿಸುತ್ತಿರೋ ಹೊಸ ಸಿನಿಮಾ 'ಗರಡಿ'. ಯಶಸ್ ಸೂರ್ಯ ಬಹಳ ದಿನಗಳ ಬಳಿಕ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಕಂಪ್ಲೀಟ್ ಆಗಿದೆ. ಯೋಗರಾಜ್‌ ಭಟ್ ಅಂದುಕೊಂಡ ಸಮಯದಲ್ಲೇ ಸಿನಿಮಾ ಮುಗಿಸಿದ್ದಾರೆ.

  ಅಂದ್ಹಾಗೆ ಈ ಸಿನಿಮಾವನ್ನು ಸಚಿವ ಬಿ.ಸಿ.ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ರಾಮೋಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ‌ಗರಡಿಮನೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾ ಕೊನೆಯ ಭಾಗದ ಚಿತ್ರೀಕರಣವನ್ನು ಈ ಗರಡಿ ಮನೆ ಸೆಟ್‌ನಲ್ಲಿಯೇ ಶೂಟ್ ಮಾಡಲಾಗಿದೆ.

  'ಗರಡಿ' ಸಿನಿಮಾವನ್ನು ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಹೀರೊ ಯಶಸ್ ಸೂರ್ಯ ಅವರ ತಂದೆಯಾಗಿ ನಟಿಸಿದ್ದಾರೆ.

  ಯಶಸ್ ಸೂರ್ಯ ಜೊತೆ ಸೋನಾಲ್ ಮೊಂತೆರೊ, ರವಿಶಂಕರ್, ಬಿ.ಸಿ.ಪಾಟೀಲ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  ಅಂದ್ಹಾಗೆ 'ಗರಡಿ' ಮನೆ ಹಳೇ ಮೈಸೂರು ಭಾಗದಲ್ಲಿ ಕಥೆ. ಈ ಸಿನಿಮಾದಲ್ಲಿ ಕಥೆಯ ಜೊತೆ ಜೊತೆಗೆ ದೇಸಿ ಕ್ರೀಡೆಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿಯೇ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ‌ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ನೀಡಿದ್ದಾರೆ.

  'ಗರಡಿ' ಸಿನಿಮಾ ಮತ್ತೊಂದು ವಿಶೇಷತೆ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ ಈ ಚಿತ್ರದಲ್ಲಿ ಪೈಲ್ವಾನ್ ಆಗಿಯೇ‌ ಕಾಣಿಸಿಕೊಂಡಿದ್ದಾರೆ. ಇಂತಹ ಪಾತ್ರದಲ್ಲಿ ನಟಿಸೋಕೆ ಸಾಕಷ್ಟು ಪೂರ್ವ ತಯಾರಿಯನ್ನೂ ಯಶಸ್ ಮಾಡಿಕೊಂಡಿದ್ದರು.

  Yogaraj Bhat Directed Garadi Movie Shooting Finished

  'ಗರಡಿ' ಮುಕ್ತಾಯದ ಹಂತದಲ್ಲಿಯೇ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. ಈ ಸಿನಿಮಾದ ಆಡಿಯೋ ರೈಟ್ಸ್ ಅನ್ನು ಸರಿಗಮಪ‌ ಕಂಪನಿ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ಬಿಸಿ ಪಾಟೀಲ್ ಅವರೇ ಹೇಳಿದ್ದಾರೆ. ಇನ್ನು ಡಬ್ಬಿಂಗ್ ಹಾಗೂ ರಿಮೇಕ್ ರೈಟ್ಸ್‌ಗೂ ಡಿಮ್ಯಾಂಡ್ ಇದ್ಯಂತೆ.

  English summary
  Yogaraj Bhat Directed Garadi Movie Shooting Finished, Know More.
  Monday, January 9, 2023, 23:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X