For Quick Alerts
  ALLOW NOTIFICATIONS  
  For Daily Alerts

  ಅಬ್ಬಾ, ಭಟ್ಟರ ಡ್ರಾಮಾದಲ್ಲಿ ಏನೇನ್ ನೋಡ್ಬೇಕೋ!

  |

  ಯೋಗರಾಜ್ ಭಟ್ ನಿರ್ದೇಶನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಚಿತ್ರ 'ಡ್ರಾಮಾ', ಹೊಸ ಹೊಸ ರೀತಿಯಲ್ಲಿ ಶೂಟಿಂಗ್ ಮಾಡಿಕೊಂಡು ಭಟ್ಟರ ಹಳೆಯ ಶೈಲಿಯನ್ನು ಸಂಪೂರ್ಣವಾಗಿ ಮರೆಸುವಂತೆ ಮೂಡಿಬರುತ್ತಿದೆ. ಅದಕ್ಕೊಂದು ಇತ್ತೀಚಿನ ತಾಜಾ ಉದಾಹರಣೆ, ಭಟ್ಟರು ಜನನಿಬಿಡ ಜಾಗವಾದ ಬರ್ಮಾ ಬಜಾರ್ ನಲ್ಲಿ ರಾತ್ರಿ ಹೊತ್ತು ಜನರಿಲ್ಲದಿದ್ದಾಗ ಮಾಡಿರುವ ಶೂಟಿಂಗ್!

  ಪ್ರೀತಿ ಮಾಡುವವರಿಗೆ ಹೊತ್ತು, ಗೊತ್ತು ಏನಾದರೂ ಇದೆಯೇ? ಅಂದಮೇಲೆ ಚಿತ್ರಕ್ಕೆ ನಿರ್ದೇಶಕರಾಗಿ ಪ್ರೀತಿ ಮಾಡಿಸುವ ಭಟ್ಟರಿಗೆ ಆ ಹಂಗ್ಯಾಕೆ? ಹೀಗೆ ವಿಭಿನ್ನವಾಗಿ ಯೋಚಿಸಿರುವ ಭಟ್ಟರು, ಕೃತಕ ಸೆಟ್‌ ಗಳಿಲ್ಲದ, ವಿದೇಶಿ ತಾಣವೂ ಅಲ್ಲದ ಅಪ್ಪಟ ಸ್ಥಳೀಯವಾದ ಬೆಂಗಳೂರಿನ ಬರ್ಮಾ ಬಜಾರದಲ್ಲಿ ತಮ್ಮ 'ಡ್ರಾಮಾ' ಚಿತ್ರಕ್ಕಾಗಿ ಚಿತ್ರೀಕರಣ ನಡೆಸಿದ್ದಾರೆ. ಭಟ್ಟರ ಈ ಹೊಸ ಪ್ರಯೋಗ ಹಲವರ ಹುಬ್ಬೇರಿಸಿದೆ.

  ಹಗಲಿನಲ್ಲಿ ಜನಜಂಗುಳಿ ಮಧ್ಯೆ ಶೂಟಿಂಗ್ ಇಷ್ಟಪಡದ ಭಟ್ಟರು, ರಾತ್ರಿ 'ಗ್ರೀನ್ ಲೈಟ್ ಎಫೆಕ್ಟ್‌' ಇಟ್ಟು ಅಂಗಡಿ ಮುಂಗಟ್ಟುಗಳ ಮುಚ್ಚಿದ ಬಾಗಿಲುಗಳ ಮಂದೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ 'ರೊಮ್ಯಾನ್ಸ್' ಪಾಠ ಹೇಳಿದ್ದಾರೆ. ವಿಧೇಯ ಶಿಷ್ಯರಂತೆ ಹೇಳಿಕೊಟ್ಟಿದ್ದನ್ನು (ಹೆಚ್ಚು!) ಮಾಡಿ ಕೃತಾರ್ಥರಾಗಿದ್ದಾರೆ ಯಶ್, ರಾಧಿಕಾ ಪಂಡಿತ್. ನೃತ್ಯ ನಿರ್ದೇಶಕ ಹರ್ಷ ನಿರ್ದೇಶನಕ್ಕೆ ತಕ್ಕಂತೆ ಯಶ್-ರಾಧಿಕಾ ಜೋಡಿ ಹಾಕುತ್ತಿದ್ದ ಹೆಜ್ಜೆಯನ್ನು ಕೃಷ್ಣ ಕ್ಯಾಮರಾ ಸೆರೆಹಿಡಿದು ಮುಗಿಸಿದೆ.

  ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದಲ್ಲಿ ಸಾಗುತ್ತಿರುವ ಈ ಚಿತ್ರಕ್ಕೆ ಎಂದಿನಂತೆ ವಿ ಹರಿಕೃಷ್ಣ ಸಂಗೀತವಿದೆ. ರಾಧಿಕಾ ಪಂಡಿತ್ ಹಾಗೂ ಯಶ್ ಇದೇ ಮೊದಲ ಬಾರಿಗೆ ಹಾಡೊಂದಕ್ಕೆ (ಬಿಟ್ಸ್ ಸಾಂಗ್) ಧ್ವನಿ ಕೊಟ್ಟಿರುವುದು ವಿಶೇಷ. ಮಂಡ್ಯ ಭಾಷೆಯನ್ನು ತಮ್ಮ ಡ್ರಾಮಾ ಚಿತ್ರದಲ್ಲಿ ಹೆಚ್ಚಾಗಿ ಬಳಸಿರುವ ಭಟ್ಟರು ಮೈಸೂರು ಭಾಷೆಗೂ ಅಲ್ಲಲ್ಲಿ ಜಾಗ ನೀಡಿದ್ದಾರಂತೆ.

  ಅಂದಹಾಗೆ, ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಲ್ಲದೇ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಕೂಡ ಇದ್ದಾರೆ. ಯೋಗರಾಜ್ ಭಟ್ಟರ ಈ ಮೊದಲಿನ 'ಪರಮಾತ್ಮ' ಚಿತ್ರ ನಿರೀಕ್ಷಿಸಿದ ಯಶಸ್ಸು ಗಳಿಸಿಲ್ಲವಾಗಿ 'ಡ್ರಾಮಾ' ಚಿತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಈ ತಿಂಗಳಲ್ಲಿ (ಸೆಪ್ಟೆಂಬರ್) ಆಡಿಯೋ ಬಿಡುಗಡೆ ಮಾಡಿ ಮುಂದಿನ ತಿಂಗಳೇ ತೆರೆಗೆ ಬರುವ ಪ್ರಯತ್ನದಲ್ಲಿದೆ ಭಟ್ಟರ ಡ್ರಾಮಾ. (ಒನ್ ಇಂಡಿಯಾ ಕನ್ನಡ)

  English summary
  Kannada director Yogaraj Bhat upcoming movie 'Drama', shooting took place on Bangalore Bharma Bazar recently. Rocking Star Yash and Hat Trick Heroine Radhika Pandit are acted in this scene. V Harikrishna Music and Krishna Camera works are in this Drama movie. 
 
  Sunday, September 2, 2012, 16:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X