»   » 'ಮೋಜೊ' ಚಿತ್ರಕ್ಕೆ ಧ್ವನಿ ನೀಡಿದ ನಿರ್ದೇಶಕ ಯೋಗರಾಜ್ ಭಟ್

'ಮೋಜೊ' ಚಿತ್ರಕ್ಕೆ ಧ್ವನಿ ನೀಡಿದ ನಿರ್ದೇಶಕ ಯೋಗರಾಜ್ ಭಟ್

Posted By:
Subscribe to Filmibeat Kannada

'ಮೋಜೊ'.... ಕೊಲೆ ರಹಸ್ಯದ ಸುತ್ತ ಹೆಣೆದಿರುವ 'ಪೂರ್ವಬೋಧನ' ಪ್ರಜ್ಞೆಯನ್ನೊಳಗೊಂಡ (Sixth Sense) ರೋಮಾಂಚನಕಾರಿ ಕಥೆ.

ಸದ್ದಿಲ್ಲದೇ ಚಿತ್ರೀಕರಣಕ್ಕೆ ಚಾಲನೆ ನೀಡಿದ 'ಮೋಜೊ' ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೂಡ ಮುಗಿಸಿ ಸೆನ್ಸಾರ್ ಸರ್ಟಿಫಿಕೇಟ್ ಗಾಗಿ ಕಾಯುತ್ತಿದೆ.

Yogaraj Bhat gives voice over for 'Mojo'

'ಮೋಜೊ' ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ಧ್ವನಿ ನೀಡಿರುವುದು ಚಿತ್ರತಂಡಕ್ಕೆ ಹೆಮ್ಮೆಯ ವಿಷಯವಾಗಿದೆ. ಯೋಗರಾಜ್ ಭಟ್ ರವರ ಧ್ವನಿಯಲ್ಲೇ ಮಾಂತ್ರಿಕತೆ ಇದ್ದು, ಚಿತ್ರದ ಆರಂಭಕ್ಕೆ ಅವರ ಧ್ವನಿ ಉತ್ತಮ ವೇಗ ನೀಡಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಸಬ್-ಕಾನ್ಷಿಯಸ್ ಅಂದರೆ ಮನುಷ್ಯನ ಉಪಪ್ರಜ್ಞೆಗೆ ಇರುವ ಅಪಾರ ಶಕ್ತಿಯನ್ನ 'ಮೋಜೊ' ಚಿತ್ರ ಪರಿಚಯ ಮಾಡಿಕೊಡಲಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಶ ಬೆಳಕವಾಡಿ.

Yogaraj Bhat gives voice over for 'Mojo'

ಪೂರ್ವಿ ಆರ್ಟ್ಸ್ ಬ್ಯಾನರ್ ನಲ್ಲಿ ಅಮೇರಿಕಾ ಮೂಲದ ಗಜಾನನ್ ಭಟ್ ಅವರು ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಕ್ಯಾಲಿಫೋರ್ನಿಯ ಮೂಲದ ವಾಣಿಜ್ಯೋದ್ಯಮಿಗಳಾದ ಸತೀಶ್ ಪಾಠಕ್, ಮಾನಯ್ಯ ಬೆಳ್ಳಿಗನೂರ್ ಮತ್ತು ಸಂತೋಷ್ ಪಾಟೀಲ್ ಅವರು 'ಮೋಜೊ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Yogaraj Bhat has written a song on GST | Filmibeat Kannada

ಕನ್ನಡ ಚಲನಚಿತ್ರೋದ್ಯಮದ ಇತಿಹಾಸದಲ್ಲಿ 'ಮೋಜೊ' ಚಿತ್ರದ ಮೂಲಕ 'ಪೂರ್ವ ಅರಿವಿನ' (Pre Cognitive) ಥ್ರಿಲ್ಲರ್ ಪ್ರಕಾರವನ್ನು ಪರಿಚಯಿಸುತ್ತಿರುವ ಹೆಮ್ಮೆ ಚಿತ್ರತಂಡಕ್ಕಿದೆ.

English summary
Director Yogaraj Bhat gives voice over for Kannada Movie 'Mojo'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada