»   » ಟ್ವಿಟ್ಟರ್ ಲೋಕದಲ್ಲಿ ಮುಗುಳುನಗೆ ಬೀರಿದ ಯೋಗರಾಜ್ ಭಟ್

ಟ್ವಿಟ್ಟರ್ ಲೋಕದಲ್ಲಿ ಮುಗುಳುನಗೆ ಬೀರಿದ ಯೋಗರಾಜ್ ಭಟ್

Posted By:
Subscribe to Filmibeat Kannada
ಟ್ವಿಟ್ಟರ್ ಲೋಕದಲ್ಲಿ ಮುಗುಳುನಗೆ ಬೀರಿದ ಯೋಗರಾಜ್ ಭಟ್ | Filmibeat Kannada

ಸ್ಟಾರ್ ನಟ-ನಟಿಯರು ಹಾಗೂ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕರ ಮನೆ ಮುಂದೆ ನಿಂತು ಒಂದು ಆಟೋಗ್ರಾಫ್ ಅಥವಾ ಫೋಟೋಗ್ರಾಫ್ ಕ್ಲಿಕ್ಕಿಸಿಕೊಳ್ಳುವ ಕ್ರೇಜ್ ಈಗ ಅಷ್ಟಿಲ್ಲ. ಈಗೇನಿದ್ದರೂ ಸೋಷಿಯಲ್ ಮೀಡಿಯಾ ಝಮಾನ.

ಎಲ್ಲ ಸ್ಟಾರ್ ಗಳು ಸಾಮಾಜಿಕ ಜಾಲತಾಣಗಳಲ್ಲಿಯೇ ಜನರ ಕೈಗೆ ಸುಲಭವಾಗಿ ಸಿಗುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ಸ್ಟಾರ್ ಗಳು ಫ್ಯಾನ್ಸ್ ಮೆಸೇಜ್/ಟ್ವೀಟ್/ಫೋಟೋಗೆ ಲೈಕ್/ಕಾಮೆಂಟ್/ರೀಟ್ವೀಟ್ ಮಾಡಿಬಿಟ್ಟರೆ, ಅದೇ ಅಭಿಮಾನಿಗಳ ಪಾಲಿಗೆ ದೊಡ್ಡ ಉಡುಗೊರೆ.

ಕನ್ನಡದಲ್ಲಿ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ದಾಸ ದರ್ಶನ್, ಧನಂಜಯ್, ಧ್ರುವ ಸರ್ಜಾ, ಯಶ್, ಶ್ರೀಮುರಳಿ, ಗಣೇಶ್, ರಾಧಿಕಾ ಪಂಡಿತ್, ಮೇಘನಾ ರಾಜ್, ಸೇರಿದಂತೆ ಬಹುತೇಕ ನಟ-ನಟಿಯರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ.

Yogaraj Bhat has entered twitter officially

ಓಟು ಕೇಳಲು ಮನೆ ಮನೆಗೆ ಬರ್ತಾರೆ 'ಯೋಗರಾಜ್ ಭಟ್ರು'

ಬರೀ ಸ್ಯಾಂಡಲ್ ವುಡ್ ಮಂದಿ ಮಾತ್ರ ಅಲ್ಲ, ಸೂಪರ್ ಸ್ಟಾರ್ ರಜನಿಕಾಂತ್ ರಿಂದ ಹಿಡಿದು ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಲ್ಲು ಅರ್ಜುನ್.. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಟ್ ಆಗಿರುವುದು ಟ್ವಿಟ್ಟರ್/ಫೇಸ್ ಬುಕ್ ನಂತರ ಸಾಮಾಜಿಕ ಜಾಲತಾಣಗಳ ಮೂಲಕವೇ. ಈಗ ಇವರದ್ದೇ ಸಾಲಿಗೆ ಯೋಗರಾಜ್ ಭಟ್ ಕೂಡ ಸೇರಿದ್ದಾರೆ.

'ಪ' ಅಕ್ಷರದ ಮೇಲೆ ಯೋಗರಾಜ್ ಭಟ್ ರಿಗೆ ಲವ್ ಆಗಿದೆ

ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸುಮಾರು ವರ್ಷಗಳೇ ಉರುಳಿದರೂ, ಅನೇಕ ಹಿಟ್ ಸಿನಿಮಾಗಳನ್ನ ನೀಡಿದರೂ ನಿರ್ದೇಶಕ ಯೋಗರಾಜ್ ಭಟ್ ಈಗ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ.

ಅಭಿಮಾನಿಗಳ ಜೊತೆಗೆ ಹರಟೆ ಹೊಡೆಯಲು ಯೋಗರಾಜ್ ಭಟ್ ಟ್ವಿಟ್ಟರ್ ಗೆ ಕಾಲಿಟ್ಟಿದ್ದಾರೆ. ಟ್ವಿಟ್ಟರ್ ಗೆ ಕಾಲಿಟ್ಟ ಒಂದೇ ದಿನದಲ್ಲಿ ಯೋಗರಾಜ್ ಭಟ್ ರನ್ನ ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡಿದ್ದಾರೆ.

English summary
Kannada Director Yogaraj Bhat has opened his official Twitter Account. Follow Yogarajofficial, It is his Twitter handle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X