For Quick Alerts
  ALLOW NOTIFICATIONS  
  For Daily Alerts

  ಇಡೀ ದೇಶ ತಿರುಗಿ ನೋಡುವಂಥ ಸಾಧನೆ ಮಾಡಿದ ಕಾಂತಾರಕ್ಕೆ ಯೋಗರಾಜ್ ಭಟ್ ಜೈಕಾರ

  |

  'ಮುಂಗಾರು ಮಳೆ'ಯಂತಹ ಇಂಡಸ್ಟ್ರಿ ಹಿಟ್ ಚಿತ್ರ ನೀಡುವುದರ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಯೋಗರಾಜ್ ಭಟ್ ಸದ್ಯ ಭಾರತ ಚಿತ್ರರಂಗದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ಚಿತ್ರವನ್ನು ಪ್ರಶಂಸಿಸಿದ್ದಾರೆ.

  ಬೃಹತ್ ಯಶಸ್ಸು ಸಾಧಿಸುವ ಪ್ರತಿ ಚಿತ್ರಕ್ಕೂ ತಮ್ಮ ಬರವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಶುಭಾಶಯ ತಿಳಿಸುವ ಯೋಗರಾಜ್ ಭಟ್ ಕಾಂತಾರ ಚಿತ್ರಕ್ಕೂ ಕೂಡ ಅದೇ ಮಾದರಿಯಲ್ಲಿ ಶ್ಲಾಘಿಸಿದ್ದಾರೆ.

  'ಸಮಸ್ತೇ, ಇಡೀ ನಾಡು ತಿರುಗಿ ನೋಡುವಂತೆ ಮಾಡಿದ ಕಾಂತಾರ ಚಿತ್ರತಂಡದ ಸಾಧನೆಗೆ ಶರಣು ಶರಣಾರ್ಥಿ.. ತುಂಬಾ ಪ್ರೀತಿಯ ರಿಷಬನಿಗೆ, ತುಂಬಾ ಹೆಮ್ಮೆಯ ಹೊಂಬಾಳೆಗೆ, ತುಂಬಾ ಶ್ರಮ ವಹಿಸಿದ ಚಿತ್ರತಂಡಕ್ಕೆ ನಮನಗಳು ಹಾಗೂ ಧನ್ಯವಾದಗಳು.. ಅನ್ ಲಿಮಿಟೆಡ್ ಅಕ್ಕರೆಗಳು.. ಜೈ ಕಾಂತಾರ' ಎಂದು ಯೋಗರಾಜ್ ಭಟ್ ತಮ್ಮ ಬರವಣಿಗೆಯ ಪತ್ರವನ್ನು ಸಾಮಾಜಿಕ ಪೋಸ್ಟ್ ಮಾಡಿ ಕಾಂತಾರ ಚಿತ್ರ ತಂಡವನ್ನು ಅಭಿನಂದಿಸಿದ್ದಾರೆ.

  ಇನ್ನು ಕಾಂತಾರ ಚಿತ್ರ ಇದೇ ದಿನದಂದು ( ಅಕ್ಟೋಬರ್ 15 ) ನೂರು ಕೋಟಿ ಕ್ಲಬ್ ಸೇರಿದ್ದು, ತೆಲುಗು ಹಾಗೂ ತಮಿಳು ಅವತರಣಿಕೆಗಳಲ್ಲಿ ಇದೇ ದಿನ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡಿದೆ. ಅದರಲ್ಲಿಯೂ ಕಾಂತಾರ ಹೈದರಾಬಾದ್ ನಗರದಲ್ಲಿ ಹೆಚ್ಚುವರಿ ತಡರಾತ್ರಿ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೀಗೆ ಕಾಂತಾರ ತಡೆಯೋಕೆ ಸಾಧ್ಯವಿಲ್ಲದ ಸಮುದ್ರದ ಅಲೆಯ ಹಾಗೆ ಎಲ್ಲೆಡೆ ಅಬ್ಬರಿಸುತ್ತಿದೆ.

  English summary
  Yogaraj Bhat praised Kantara movie team for the film's success
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X