ಯೋಗರಾಜ್ ಭಟ್ ಹೊಸ ಸಿನಿಮಾಗೆ ಈತನೇ ನಾಯಕ
ಯೋಗರಾಜ್ ಭಟ್ 'ಗಾಳಿಪಟ 2' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅವರ ಇನ್ನೊಂದು ಸಿನಿಮಾ ಶುರು ಆಗುತ್ತಿದೆ. ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ ಬದಲಿಗೆ ನಿರ್ಮಾಣ ಮಾಡುತ್ತಿದ್ದಾರೆ.
ಯೋಗರಾಜ್ ಮೂವಿಸ್ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸುತ್ತಿದ್ದಾರೆ. ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಪೃಥ್ವಿ ಈಗ ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ನಿರ್ಮಾಣದಲ್ಲಿ ಅವರ ತಂದೆ ರವಿ ಶಾಮನೂರು ಕೂಡ ಕೈ ಜೋಡಿಸಿದ್ದಾರೆ.
ಸಿನಿಮಾದ ಟೈಟಲ್ 'ಪದವಿ ಪೂರ್ವ' ಎಂದು ಇಡಲಾಗಿದೆ. ಯುವಕ ಯುವತಿಯರ ತಲ್ಲಣವನ್ನು ಇಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ 'ಪದವಿ ಪೂರ್ಣ' ಎಂಬ ಟೈಟಲ್ ನಿಗದಿ ಮಾಡಲಾಗಿದೆ.

ಯೋಗರಾಜ್ ಭಟ್ ಜೊತೆಗೆ ಕೆಲಸ ಕಲಿತಿರುವ ಹರಿಪ್ರಸಾದ್ ಜಯಣ್ಣ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮರಾ ವರ್ಕ್ ಇರಲಿದೆ.

ಜನವರಿ 2020 ಈ ಹೊಸ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಸಿನಿಮಾದ ನಾಯಕಿಯ ಆಯ್ಕೆ ಇನ್ನು ಅಂತಿಮ ಆಗಿಲ್ಲ.


Click it and Unblock the Notifications











