Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಆ ಆಡಿಯೋ ಕಾಂಪ್ರಮೈಸ್ ಆದ್ಮೇಲೆ ಆಗಿದ್ದು": ರಾಘವೇಂದ್ರ ಹುಣಸೂರು ವಿರುದ್ಧ ಆಡಿಯೋಗೆ ಭಟ್ಟರ ಪ್ರತಿಕ್ರಿಯೆ!
ಯೋಗರಾಜ್ ಭಟ್ ಕಿರಿಚಾಡಿ, ಪರಚಾಡೋ ವ್ಯಕ್ತಿನೇ ಅಲ್ಲ. ಏನೇ ಸಿಟ್ಟು ಇಟ್ಟಿದ್ದರೂ, ತಮ್ಮ ಪದಗಳಲ್ಲೇ ತೀರಿಸಿಕೊಳ್ಳೋದು ಅವರ ಹಳೇ ಚಾಳಿ. ಆದರೆ, ಕೆಲವು ದಿನಗಳ ಹಿಂದೆ ಒಂದು ಆಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು.
ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರುಗೆ ಬೈದಿರೋ ಆಡಿಯೋ ಲೀಕ್ ಆಗಿತ್ತು. ಆ ಆಡಿಯೋದಲ್ಲಿ ಹಲವು ವಿಷಯಗಳನ್ನು ಯೋಗರಾಜ್ ಭಟ್ಟರು ಪ್ರಸ್ತಾಪ ಮಾಡಿದ್ದರು. ಆಡಿಯೋ ವೈರಲ್ ಆದರೂ, ಭಟ್ಟರು ಮಾತ್ರ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.
ಪಶು
ವೈದ್ಯರೊಬ್ಬರು
ನಿರ್ದೇಶಕ
ಯೋಗರಾಜ್
ಭಟ್
ಕೆನ್ನೆಗೆ
ಬಾರಿಸಿದ್ದೇಕೆ?
ಇಂದು (ನವೆಂಬರ್ 06) ಯೋಗರಾಜ್ ಭಟ್ಟರೇ ನಿರ್ದೇಶಿಸಿರುವ 'ಪದವಿ ಪೂರ್ವ' ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಇತ್ತು. ಈ ವೇಳೆ ಇದೇ ಆಡಿಯೋ ಬಗ್ಗೆ ಪ್ರಶ್ನೆ ಎದುರುರಾಗಿತ್ತು. ಆಗ ಯೋಗರಾಜ್ ಕೊಟ್ಟು ಉತ್ತರ ಹೀಗಿತ್ತು ನೋಡಿ.

'ಪದವಿ ಪೂರ್ವ' ಕಥೆಯೇನು?
'ಪದವಿ ಪೂರ್ವ' ಈ ಸಿನಿಮಾದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಟ್ಟರು ಹಾಗೂ ರಾಘವೇಂದ್ರ ಹುಣಸೂರು ನಡುವೆ ಭಿನ್ನಾಭಿಪ್ರಾಯವೆದ್ದಿತ್ತು. ಅಂದ್ಹಾಗೆ, ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿಲ್ಲ. ಈ ಬಾರಿ ನಿರ್ಮಾಣ ಮಾಡಿದ್ದಾರೆ. 90 ದಶಕದಲ್ಲಿ ನಡೆಯುವ ಟೀನೇಜ್ ಲವ್ ಸ್ಟೋರಿಯನ್ನು ತೆರೆಮೇಲೆ ತಂದಿರೋ ಹರಿಪ್ರಸಾದ್ ಜಯಣ್ಣ. ಈಗಾಗಲೇ ಸಿನಿಮಾ ಬಿಡುಗಡೆಗಡೆ ಮುಹೂರ್ತ ಇಟ್ಟಿದ್ದು, ಡಿಸೆಂಬರ್ 30ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ವೇಳೆನೇ ವಿವಾದಾತ್ಮಕ ಆಡಿಯೋ ಬಗ್ಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ವಿವಾದಾತ್ಮಕ
ಆಡಿಯೋ
ಬಳಿಕ
'ಪದವಿ
ಪೂರ್ವ'
ಸಿನಿಮಾಗೆ
ಮುಹೂರ್ತವಿಟ್ಟ
ಯೋಗರಾಜ್
ಭಟ್!

"ಆ ಆಡಿಯೋ ಕಾಂಪ್ರಮೈಸ್ ಆದ್ಮೇಲೆ ಆಗಿದ್ದು"
ಯೋಗರಾಜ್ ಭಟ್ ಆಡಿಯೋ ಜೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಆರೋಪ ಮಾಡಿದ್ದರು. 'ಪದವಿ ಪೂರ್ವ' ಸಿನಿಮಾದ ಸ್ಯಾಟಲೈಟ್ ರೈಟ್ಸ್ ಬಗ್ಗೆ ಪ್ರಸ್ತಾಪ ಮಾಡಿದ್ದರು. ರಾಘವೇಂದ್ರ ಹುಣಸೂರು ಸಿನಿಮಾ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಫೋನ್ ಎತ್ತುತ್ತಿಲ್ಲ. ಕಷ್ಟಕಾಲದಲ್ಲಿ ಸಹಾಯಕ್ಕೆ ನಿಂತಿಲ್ಲ ಅಂತ ಯೋಗರಾಜ್ ಭಟ್ಟರು ಗರಂ ಆಗಿದ್ದರು. ಅದೇ ಆಡಿಯೋಗೆ ಸಂಬಂಧಿಸಿದ್ದಂತೆ ಪ್ರತಿಕ್ರಿಯಿಸಿದ್ದು, "ಗೆಳೆತನ ಎಲ್ಲಿರುತ್ತೋ ಅಲ್ಲಿ ಆ ತರ ಆಗುತ್ತೆ. ಅದೆಲ್ಲ ಕಾಂಪ್ರಮೈಸ್ ಆದ್ಮೇಲೆ ಆಗಿದ್ದು." ಎಂದು ಯೋಗರಾಜ್ ಭಟ್ ಹೇಳಿ ನುಣುಚಿಕೊಂಡಿದ್ದಾರೆ.

'ಪದವಿ ಪೂರ್ವ' ಗೆಲ್ಲಿಸಲು ನಿಂತ ಭಟ್ಟರು
ಹೊಸ ಪ್ರತಿಭೆಗಳಿರೋ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಯೋಗರಾಜ್ ಭಟ್ಟರು ಪಣ ತೊಟ್ಟು ನಿಂತಿದ್ದಾರೆ. ಪೃಥ್ವಿ ಶಾಮನೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂಜಲಿ ಅನೀಶ್, ಯಶ ಶಿವಕುಮಾರ್ ಕೂಡ ನಟಿಸಿದ್ದಾರೆ. ಇನ್ನು ಯಂಗೇಜ್ ಹುಡುಗರ ಗ್ಯಾಂಗ್‌ನಲ್ಲಿ ಅದಿತಿ ಪ್ರಭುದೇವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀನೇಜ್ ಲವ್ ಸ್ಟೋರಿಗೆ ಯೋಗರಾಜ್ ಹಣ ಹೂಡಿದ್ದು, ಸಿನಿಮಾ ಗೆಲ್ಲಿಸಲೇಬೇಕು ಅಂತ ತುದಿಗಾಲಲ್ಲಿ ನಿಂತಿದ್ದಾರೆ.
ಸತ್ತೋಗೋ
ಅಂಥ
ಆಡಿಯೋ
ಕಳುಹಿಸುತ್ತೇನೆ:
ಜೀ
ಕನ್ನಡದ
ರಾಘವೇಂದ್ರ
ಹುಣಸೂರು
ವಿರುದ್ಧ
ಭಟ್ರು
ಗರಂ!
ಆಡಿಯೊ
ವೈರಲ್

ಡಿಜಿಟಲ್‌ನಿಂದ ಅನಲಾಗ್ ದುನಿಯಾ ಕಡೆಗೆ
'ಪದವಿ ಪೂರ್ವ' ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಭಟ್ರು ಬೆಲ್ ಹೊಡೆದೂ ಆಗಿದೆ. ಇತ್ತ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ ಆರಂಭನೂ ಆಗಿದೆ. 90ರ ದಶಕದ ಕಾಲೇಜು. ಅಲ್ಲಿರುವ ಲವ್ವು, ಡವ್ವು.. ಅವುಗಳ ಅವಾಂತರ, ಫ್ಲ್ಯಾಶ್ ಬ್ಯಾಕ್ ಎಲ್ಲವೂ 'ಪದವಿ ಪೂರ್ವ' ಸಿನಿಮಾದಲ್ಲಿದೆ. ಸಿನಿಮಾದ ಟೀಸರ್‌ನಲ್ಲೊಂದು ಮಜಾ ಇದೆ. ವಿಶೇಷ ಅಂದ್ರೆ, ಡಿಜಿಟಲ್ ದುನಿಯಾದಿಂದ ವಾಪಸ್ ಅನಲಾಗ್ ಕಾಲಕ್ಕೆ ಕರ್ಕೊಂಡು ಹೋಗ್ತಿರೋ ಈ ಟೀಸರ್‌ನಲ್ಲಿ ಗಂಟೆ ಬಾರಿಸಿದ್ದು ಸಾಂಕೇತಿಕವಾಗಿದೆ.