For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ' ಹಿಡಿದು ಕಜಾಕಿಸ್ತಾನದ ಕಡೆ ಹೊರಟ ಯೋಗರಾಜ್ ಭಟ್ ಮತ್ತು ತಂಡ

  |

  ಯೋಗರಾಜ್ ಭಟ್ ಮತ್ತು ತಂಡ ಸದ್ಯ ಕಜಾಕಿಸ್ತಾನದ ಕಡೆ ಹೊರಡಲು ತಯಾರಿ ನಡೆಸುತ್ತಿದೆ. ಹೌದು, ಬಹುನಿರೀಕ್ಷೆಯ ಗಾಳಿಪಟ-2 ಸಿನಿಮಾದ ಚಿತ್ರೀಕರಣಕ್ಕಾಗಿ ಯೋಗರಾಜ್ ಭಟ್ ಮತ್ತು ತಂಡ ಆಯ್ಕೆ ಮಾಡಿಕೊಂಡ ಸ್ಥಳ ಕಜಾಕಿಸ್ತಾನ.

  ಈ ಮೊದಲು ಸಿನಿಮಾತಂಡ ಯುರೋಪ್ ನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿತ್ತು. ಜಾರ್ಜಿಯಾ, ಸ್ಕಾಟ್ಲ್ಯಾಂಡ್ ಸೇರಿದಂತೆ ಯೂರೋಪಿನ ಬೇರೆ ಬೇರೆ ಕಡೆ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿತ್ತು. ಇನ್ನೇನು ವಿದೇಶಕ್ಕೆ ಹಾರಬೇಕು ಎನ್ನುವಷ್ಟೊತ್ತಿಗೆ ಕೊರೊನಾ ಲಾಕ್ ಡೌನ್ ನಿಂದ ವಿದೇಶಿ ಪಯಣ ರದ್ದಾಯಿತು. ಇದೀಗ ಚಿತ್ರೀಕರಣದ ಲೊಕೇಶನ್ ಬದಲಾಗಿದೆ.

  ಶಿವಣ್ಣ-ಪ್ರಭುದೇವ-ಭಟ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಏನು?ಶಿವಣ್ಣ-ಪ್ರಭುದೇವ-ಭಟ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಏನು?

  ಕೊರೊನಾ ಲಾಕ್ ಡೌನ್ ಬಳಿಕ ವಿದೇಶಿ ಚಿತ್ರೀಕರಣಕ್ಕೆ ಹೋಗುತ್ತಿರುವುದು ಚಿತ್ರತಂಡಕ್ಕೆ ಒಂದು ಚಾಲೆಂಜ್ ಆಗಿದೆ. ಅಂದಹಾಗೆ ಗಾಳಿಪಟ-2ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಕಜಾಕಿಸ್ತಾನದಲ್ಲಿ ಚಿತ್ರೀಕರಣ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಹಾಗಾಗಿ ಸಿನಿಮಾತಂಡ ಈ ತಿಂಗಳ ಕೊನೆಯಲ್ಲಿ ವಿದೇಶಿ ಪಯಣಕ್ಕೆ ಹೊರಡಲಿದೆ.

  ಬುರ್ಜ್ ಖಲೀಫಾ ಮೇಲೆ ಸುದೀಪ್ ಕಟೌಟ್ ಬರಲು ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ..? | Filmibeat Kannada

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟ ದಿಗಂತ್ ಮಾರಿ ಗೋಲ್ಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಇನ್ನು ಪವನ್ ಕುಮಾರ್ ತೆಲುಗು ವೆಬ್ ಸೀರಿಸ್ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Yogaraj Bhat's Galipata-2 shoot next schedule in kazakhstan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X